ಸಾರಾಂಶ
ಹನುಮಸಾಗರ: ಗ್ರಾಮದ ನಾನಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ೭೫ನೇ ಗಣರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕುರಬಗೇರಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಮಾಲಿಪಾಟೀಲ್, ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕ ಚಂದಪ್ಪ ಹಕ್ಕಿ ಇತರರು ಇದ್ದರು. ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಲಪ್ಪ ಗಡೇಕಾರ ಧ್ವಜಾರೋಹಣ ನೆರವೇರಿಸಿದರು.ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢ ಶಾಲಾ ವಿಭಾಗದಲ್ಲಿ ಮುಖ್ಯಶಿಕ್ಷಕ ಹುಸೇನಸಾಬ ಇಲಕಲ್ಲ ಧ್ವಜಾರೋಹಣ ನೆರವೇರಿಸಿದರು. ಉನ್ನತೀಕರಿಸಿದ ಉರ್ದು ಹಿರಿಯ ಪ್ರೌಢ ಶಾಲೆಯಲ್ಲಿ ಉಪಪ್ರಾಚಾರ್ಯ ಶಿವಣ್ಣ ಮಸರಕಲ್ಲ ಧ್ವಜಾರೋಹಣ ನೆರವೇರಿಸಿದರು.ಅರ್ಬನ್ ಬ್ಯಾಂಕ್‌ನಲ್ಲಿ ಅಧ್ಯಕ್ಷ ಬಸವರಾಜ ಹಳ್ಳೂರು ದ್ವಜಾರೋಹಣ ನೆರವೇರಿಸಿದರು. ಸಿಇಒ ರೇಖಾ ಪಾಗದ ಇದ್ದರು.ಗ್ರಾಪಂ ಕಚೇರಿ, ಗಾಂಧಿ ವೃತ್ತ, ಗ್ರಂಥಾಲಯದಲ್ಲಿ ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಹನುಮವ್ವ ಕಂದಗಲ್ಲ, ಪಿಡಿಒ ದೇವೇಂದ್ರಪ್ಪ ಕಮತರ ಇದ್ದರು. ಪೊಲೀಸ್ ಠಾಣೆ ಪಿಎಸ್‌ಐ ವೀರುಪಾಕ್ಷಪ್ಪ ದ್ವಜಾರೋಹಣ ನೆರವೇರಿಸಿದರು. ಬಾಲಕಿಯರ ಪ್ರೌಢ ಶಾಲೆಯಲ್ಲಿ ರಾಯಮ್ಮ ಉಕ್ಕಲಿ ದ್ವಜಾರೋಹಣ ನೆರವೇರಿಸಿದರು. ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಬಸಪ್ಪ ಬಂಡಿವಡ್ಡರದ್ವಜಾರೋಹಣ ನೆರವೇರಿಸಿದರು.ನಾಡಕಚೇರಿಯಲ್ಲಿ ಉಪತಹಸೀಲ್ದಾರ ರೇಣುಕಾ ಹಾದಿಮನಿ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಇದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ. ವಿನಾಯಕ ಪಟ್ಟಣಶೆಟ್ಟಿ ದ್ವಜಾರೋಹಣ ನೆರವೇರಿಸಿದರು. ನ್ಯಾಷನಲ್ ಮೈನಾರಿಟಿ ಕೋ ಆಫ್‌ರೇಟಿವ್ ಸೋಸೈಟಿಯಲ್ಲಿ ದಾವಲಸಾಬ ಹೊಸಮನಿ ದ್ವಜಾರೋಹಣ ನೆರವೇರಿಸಿದರು.