ಮಾನವೀಯ ಮೌಲ್ಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಬ್ರಹ್ಮಾಕುಮಾರಿ ಈಶ್ವರೀಯ ವಿವಿ

| Published : Aug 24 2025, 02:00 AM IST

ಮಾನವೀಯ ಮೌಲ್ಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಬ್ರಹ್ಮಾಕುಮಾರಿ ಈಶ್ವರೀಯ ವಿವಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಜ್ಞಾನದೀಪ ಭವನದಲ್ಲಿ ಎಸ್‌ಬಿಎಂ ಶಾಖೆಯ ನಿವೃತ್ತ ವ್ಯವಸ್ಥಾಪಕ ರಾಜ ಯೋಗಿ ಬ್ರಹ್ಮಾಕುಮಾರ ರಂಗನಾಥ ದಂಪತಿಯನ್ನು ಇತ್ತೀಚಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಯಳಂದೂರು

ಪಟ್ಟಣದ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಜ್ಞಾನದೀಪ ಭವನದಲ್ಲಿ ಎಸ್‌ಬಿಎಂ ಶಾಖೆಯ ನಿವೃತ್ತ ವ್ಯವಸ್ಥಾಪಕ ರಾಜ ಯೋಗಿ ಬ್ರಹ್ಮಾಕುಮಾರ ರಂಗನಾಥ ದಂಪತಿಯನ್ನು ಇತ್ತೀಚಿಗೆ ಸನ್ಮಾನಿಸಲಾಯಿತು.

ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಮಹಾಲಕ್ಷ್ಮೀ ಜಿ ಮಾತನಾಡಿ, ೯೪ರ ದಶಕದಲ್ಲಿ ಯಳಂದೂರು ಪಟ್ಟಣದಲ್ಲಿ ಸಣ್ಣ ಪ್ರಮಾಣದಲ್ಲಿ ಬಾಡಿಗೆ ಮನೆಯಲ್ಲಿ ಆರಂಭ ಮಾಡಿದ ಓಂ ಶಾಂತಿ ಈಶ್ವರೀಯ ವಿವಿ ಇಂದು ತನ್ನದೇ ಆದ ಸ್ವಂತ ಭವನವನ್ನು ಹೊಂದಿದೆ.

ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಒತ್ತಡ ಮುಕ್ತ ಜೀವನ ಶೈಲಿಯನ್ನು ಕಲಿಸುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ನೇರ ಕಾರಣಿಕರ್ತರು ರಂಗನಾಥ್ ದಂಪತಿಗಳಾಗಿದ್ದಾರೆ. ಇವರ ನಿರ್ಮಾಣತೆ ಕಾರ್ಯಶೈಲಿ, ಬಾಗಿವಿಕೆಯ ಗುಣ ಸರ್ವರ ಮನವನ್ನ ಗೆದ್ದಿದ್ದಾರೆ ಎಂದು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಹೊನ್ನೂರು ಪ್ರಕಾಶ್, ಬಸವರಾಜ, ರಜತ ರಂಗಸ್ವಾಮಿ, ರಾಕೇಶ, ಶಿವ ಕುಮಾರ, ಹಾಜರಿದ್ದರು

ಭಾನುವಾರ ಜ್ಞಾಬದೀಪ ಭವನದಲ್ಲಿ ವಿಶ್ವಸಹೋದರತ್ವ ದಿನಾಚರಣೆಯ ಸಂದರ್ಭದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ರೋಟರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಅಭಿಯಾನ -೨೦೨೫ ರ ರಕ್ತದಾನ ಶಿಬಿರನ್ನು ಏರ್ಪಡಿಸಲಾಗಿದೆ. ನಿಮ್ಮ ರಕ್ತಕ್ಕೆ ಶಕ್ತಿ ಇದೆ ಇದು ಜೀವಗಳನ್ನು ಉಳಿಸಬಲ್ಲದು, ಭರವಸೆ ಹುಟ್ಟಿಸಬಲ್ಲದು ಮತ್ತು ಅಪರಿಚಿತರನ್ನು ಒಂದುಗೂಡಿಸಿ ಜೀವಿ ಉಳಿಸುವ ಕೆಲಸವನ್ನು ಮಾಡುತ್ತದೆ ರಕ್ತ ಧಾನ ಮಾಡುವವ ಆಸಕ್ತರು ಸಂಪರ್ಕಸಬಹುದು ಎಂದು೭೮೯೯೮೨೦೪೩೦, ೯೫೩೫೬೬೮೯೪೪ ಎಂದು ತಿಳಿಸಿದರು.