ಸಾರಾಂಶ
ಬ್ರಹ್ಮಗಿರಿ ಸಹೋದಯದ ಕ್ಲಸ್ಟರ್ ವತಿಯಿಂದ ಅಂಕುರ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ನಾಪೋಕ್ಲು ಕೊಡವ ಸಮಾಜದಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಜೊತೆಗೆ ಜೀವನ ಕೌಶಲ್ಯಗಳನ್ನು ಸಿಬಿಎಸ್‌ಇ ಶಾಲೆಗಳಲ್ಲಿ ಕಲಿಸಲಾಗುತ್ತದೆ ಎಂದು ಗೋಣಿಕೊಪ್ಪ ನ್ಯಾಷನಲ್ ಅಕಾಡೆಮಿ ಶಾಲೆ ಪ್ರಾಂಶುಪಾಲ ಪುಷ್ಪ ಹೇಳಿದ್ದಾರೆ.ಬ್ರಹ್ಮಗಿರಿ ಸಹೋದಯದ ಕ್ಲಸ್ಟರ್ ವತಿಯಿಂದ ಅಂಕುರ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚೆಶೈರ್ ಹೋಂ ಅಧ್ಯಕ್ಷೆ ಗೀತ ಚಂಗಪ್ಪ ಅಧ್ಯಕ್ಷತೆ ವ ಹಿಸಿದ್ದರು.
ಅಂಕುರ್ ಪಬ್ಲಿಕ್ ಶಾಲೆ ಅಧ್ಯಕ್ಷ ಕೇಟೋಳಿರ ರಾಜಚರ್ಮಣ , ಕಾರ್ಯದರ್ಶಿ ಹಾಗೂ ಬ್ರಹ್ಮಗಿರಿ ಸಹೋದಯದ ಖಜಾಂಚಿ ರತ್ನ ಚರ್ಮಣ, ಎಸ್ಎಂಎಸ್ ಶಾಲೆಯ ಪ್ರಾಂಶುಪಾಲ ಕುಸುಮ್ ಟಿಟೋ, ಮಡಿಕೇರಿ ಎ.ಎಲ್.ಜಿ. ಶಾಲೆಯ ಜಾಯ್ಸಿ , ಕೊಡಗು ವಿದ್ಯಾಲಯ ಶಾಲೆ ಪ್ರಾಂಶುಪಾಲೆ ಸುಮಿತ್ರ, ಜ್ಞಾನಗಂಗಾ ಶಾಲೆಯ ಸುಲೋಚನ, ಅಂಕುರ್ ಪಬ್ಲಿಕ್ ಶಾಲೆಯ ನಿರ್ದೆಶಕಿ ಗೌರಮ್ಮ ಮತ್ತಿತರರು ಪಾಲ್ಗೊಂಡರು.ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಶಿಕ್ಷಕರಾದ ಕೊಡಗು ವಿದ್ಯಾಲಯದ ರೇಖಾ ಕೆ.ಎ., ಎಲ್‌ಜಿ ಕ್ರೆಸೆಂಟ್ ಶಾಲೆಯ ಜ್ಯೋತಿ ಕೆ.ಎಸ್., ಎಸ್‌ಎಂಎಸ್ ವಿದ್ಯಾಪೀಠದ ಶೀಲಾವತಿ ಸಿ.ಬಿ, ಜ್ಞಾನ ಗಂಗಾ ಶಾಲೆಯ ನಾಗರಾಜ್ ಕೆ ಸಿ,ನ್ಯಾಷನಲ್ ಅಕಾಡೆಮಿಯ ರೇಖಾ ನಾಣಯ್ಯ, ಅಂಕುರ್ ಪಬ್ಲಿಕ್ ಶಾಲೆಯ ತಾರಾ ಕೆ ಸಿ ಇವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಬಳಿಕ ಕೊಡಗಿನ ಆರು ಸಿಬಿಎಸ್ಸಿ ಶಾಲೆಗಳ ಶಿಕ್ಷಕ ವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಅಂಕುರ್ ಪಬ್ಲಿಕ್ ಶಾಲೆಯ ಕೆಟ್ಹೋಳಿರ ರತ್ನ ಚರ್ಮಣ ಸ್ವಾಗತಿಸಿದರು. ಶಿಕ್ಷಕಿಯರಾದ ಡಿಶ್ಮ ಮತ್ತು ರಿಷಿತ ನಿರೂಪಿಸಿದರು. ಬ್ರಹ್ಮಗಿರಿ ಸಹೋದಯದ ಕಾರ್ಯದರ್ಶಿ ಜಾಯ್ಸಿ ವಂದಿಸಿದರು.