ಫೆ. 4ರಿಂದ ಭಟ್ಕಳದ ಚೌತನಿ ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶಾಭಿಷೇಕ

| Published : Dec 28 2024, 01:03 AM IST

ಫೆ. 4ರಿಂದ ಭಟ್ಕಳದ ಚೌತನಿ ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶಾಭಿಷೇಕ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳದ ಚೌತನಿಯ ಶ್ರೀ ಕಾಳಿಕಾಂಬಾ ದೇವಿಯ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಫೆ. ೪ರಿಂದ ಫೆ. ೮ರ ತನಕ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಜಾನನ ನಾಗಪ್ಪಯ್ಯ ಆಚಾರ್ಯ ತಿಳಿಸಿದರು.

ಭಟ್ಕಳ: ಇಲ್ಲಿನ ಚೌತನಿಯ ಶ್ರೀ ಕಾಳಿಕಾಂಬಾ ದೇವಿಯ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಫೆ. ೪ರಿಂದ ಫೆ. ೮ರ ತನಕ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗಜಾನನ ನಾಗಪ್ಪಯ್ಯ ಆಚಾರ್ಯ ತಿಳಿಸಿದರು.

ಅವರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 1963ರಲ್ಲಿ ಸ್ಥಾಪನೆಗೊಂಡ ಶ್ರೀ ಕಾಳಿಕಾಂಬಾ ದೇವಸ್ಥಾನ ಕಳೆದ 12 ವರ್ಷಗಳ ಹಿಂದೆ ಶಿಲಾಮಯ ಗರ್ಭಗುಡಿ ಸೇರಿದಂತೆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಇದೀಗ 12 ವರ್ಷಗಳ ಬಳಿಕ ದೇವಸ್ಥಾನದ ಬ್ರಹ್ಮ ಕಲಶಾಭಿಷೇಕ ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ವರ್ಷಂಪ್ರತಿ ನವರಾತ್ರಿ, ಶ್ರಾವಣ ಮಾಸದಲ್ಲಿನ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡಿಕೊಂಡು ಬರಲಾಗುತ್ತಿದೆ. ಬ್ರಹ್ಮಕಲಶಾಭಿಷೇಕದ ಅಂಗವಾಗಿ ನಡೆಯುವ ಐದು ದಿನದ ಕಾರ್ಯಕ್ರಮಗಳು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶ್ರೀ ವಿಶ್ವಕರ್ಮ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ. ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ. 4ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಅಷ್ಟೂ ದಿನಗಳ ಕಾಲ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಪೂರ್ಣ ಕಾರ್ಯಕ್ರಮದ ವೈದಿಕ ಸಹಭಾಗಿತ್ವವನ್ನು ಬ್ರಹ್ಮಶ್ರೀ ಎನ್. ಕೇಶವ ಪುರೋಹಿತರು ಹಾಗೂ ತಂತ್ರಿಗಳು, ಪ್ರಧಾನ ಅರ್ಚಕ ಬ್ರಹ್ಮಶ್ರೀ ಎನ್.ಎಸ್. ವಾಸುದೇವ ಶಾಸ್ತ್ರಿ, ಇತರ ವೈದಿಕರ ಸಹಭಾಗಿತ್ವದೊಂದಿಗೆ ನೆರವೇರಲಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಭೂದಾನ ಯೋಜನಾ ಸಮಿತಿಯ ಗೌರವಾಧ್ಯಕ್ಷ ಗೋಪಾಲ ಮಂಜಯ್ಯ ಆಚಾರ್ಯ ಜಾಲಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸದಾನಂದ ಶಿವರಾಮ ಆಚಾರ್ಯ ಜಾಲಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಗಜಾನನ ಶಂಕರ ಆಚಾರ್ಯ ಶಿರಾಲಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಉಪಕಾರ್ಯದರ್ಶಿ ನಾಗೇಶ ನಾಗಪ್ಪಯ್ಯ ಆಚಾರ್ಯ ಮಾತನಾಡಿದರು. ದೇವಸ್ಥಾನದ ಮೊಕ್ತೇಸರ ಶ್ರೀಕಾಂತ ಆಚಾರ್ಯ, ಜಗದೀಶ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಬಾಬು ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಎನ್.ಎಸ್. ವಾಸುದೇವ ಶಾಸ್ತ್ರಿ ಪ್ರಾರ್ಥಿಸಿದರು.