೨೫ರಿಂದ ನಡ್ಯೋಡಿ ದೈವಸ್ಥಾನದ ಬ್ರಹ್ಮಕಲಶೋತ್ಸವ

| Published : Feb 21 2025, 11:45 PM IST

೨೫ರಿಂದ ನಡ್ಯೋಡಿ ದೈವಸ್ಥಾನದ ಬ್ರಹ್ಮಕಲಶೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ನಾಲ್ಕು ಶತಮಾನಗಳಷ್ಟು ಪುರಾತನವಾದ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ ನಾಲ್ಕನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವ ಫೆ.೨೫ರಿಂದ ಮಾ.೩ರ ವರೆಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, ಪ್ರವೇಶ ದ್ವಾರ, ನೂತನ ಮುಖಮಂಟಪ ಮತ್ತು ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸುಮಾರು ನಾಲ್ಕು ಶತಮಾನಗಳಷ್ಟು ಪುರಾತನವಾದ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ ನಾಲ್ಕನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವ ಫೆ.೨೫ರಿಂದ ಮಾ.೩ರ ವರೆಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, ಪ್ರವೇಶ ದ್ವಾರ, ನೂತನ ಮುಖಮಂಟಪ ಮತ್ತು ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.೨೫ರಂದು ಸಂಜೆ ೪ ಗಂಟೆಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ನಡ್ಯೋಡಿ ದೈವಸ್ಥಾನಕ್ಕೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಹೊರೆಕಾಣಿಕೆ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸಂಜೆ ೬-೩೦ಕ್ಕೆ ಮಾರೂರು ಖಂಡಿಗ ಶ್ರೀರಾಮದಾಸ್ ಆಸ್ರಣ್ಣರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದಿಂದ ನೃತ್ಯ ವೈವಿಧ್ಯ ಬಳಿಕ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.ಫೆ.೨೬ರಂದು ರಾತ್ರಿ ೭ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಬಳಿಕ ನಡ್ಯೋಡಿ ಮಹಿಳಾ ಮಂಡಲ ಹಾಗೂ ಸ್ಥಳೀಯ ಕಲಾವಿದೆಯವರ ಕೂಡುವಿಕೆಯಿಂದ ‘ನನ ಏಪಲ ಇಂಚೆನೆ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಫೆ.೨೭ಕ್ಕೆ ರಾತ್ರಿ ೭ರಿಂದ ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ದಾನಿಗಳಿಗೆ ಸನ್ಮಾನ, ರಾತ್ರಿ ಗಂಟೆ ೯ಕ್ಕೆ ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ‘ಪರಕೆದ ತೊಟ್ಟಿಲ್’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಫೆ.೨೮ರಂದು ಬೆಳಗ್ಗೆ ೭ಕ್ಕೆ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, ೭-೩೦ರಿಂದ ಬ್ರಹ್ಮಕಲಶಾಭಿಷೇಕ, ಸಂಜೆ ೫ಕ್ಕೆ ದೈವದ ಗಗ್ಗರ ಸೇವೆ, ೬-೩೦ಕ್ಕೆ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯಿಂದ ನೂತನ ರಾಜಗೋಪುರದ ಲೋಕಾರ್ಪಣೆ, ನಂತರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಶ್ಮಿತಾ ಯುವರಾಜ್ ಜೈನ್, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೈ.ಶಶಿಕಾಂತ್ ಜೈನ್ ಹಾಗೂ ಕ್ಷೇತ್ರದ ವಿವಿಧ ದಾನಿಗಳನ್ನು ಸನ್ಮಾನಿಸಲಾಗುವುದು. ಬಳಿಕ ಉಡುಪಿ ಕೃಷ್ಣ ಕಲಾವಿದರ ತಂಡದಿಂದ ‘ಆನಿದ ಮನದಾನಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಮಾರ್ಚ್ ೧ ಮತ್ತು ೨ರಂದು ರಾತ್ರಿ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಎಂ.ಪುರುಷೋತ್ತಮ ಶೆಟ್ಟಿ, ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ, ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.