ಅನಗತ್ಯವಾಗಿ ಸಮಾಜದ ಶಾಂತಿಗೆ ಧಕ್ಕೆ ತರುವ ಕೃತ್ಯದಲ್ಲಿ ಪಾಲ್ಗೊಂಡಲ್ಲಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಯಾವುದೇ ರೌಡಿಯ ಸಮಾಜ ವಿರೋಧಿ ಕೃತ್ಯ ಸಹಿಸೋದಿಲ್ಲ ಎಂದು ಭಾಲ್ಕಿ ಉಪ ವಿಭಾಗದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಖಡಕ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಅನಗತ್ಯವಾಗಿ ಸಮಾಜದ ಶಾಂತಿಗೆ ಧಕ್ಕೆ ತರುವ ಕೃತ್ಯದಲ್ಲಿ ಪಾಲ್ಗೊಂಡಲ್ಲಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಯಾವುದೇ ರೌಡಿಯ ಸಮಾಜ ವಿರೋಧಿ ಕೃತ್ಯ ಸಹಿಸೋದಿಲ್ಲ ಎಂದು ಭಾಲ್ಕಿ ಉಪ ವಿಭಾಗದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆ ಆವರಣದಲ್ಲಿ ಗ್ರಾಮೀಣ ಹಾಗೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರೌಡಿ ಪರೇಡ ನಲ್ಲಿ ವಿವಿಧ ಅಪರಾಧಗಳಲ್ಲಿದ್ದ ರೌಡಿಗಳ ಪ್ರತ್ಯೇಕ ಚಲನ ವಲನದ ಮಾಹಿತಿ ಪಡೆದುಕೊಂಡು ನಿರಂತರ ಅಪರಾಧ ಎಸಗುವ ಪುಡಿ ರೌಡಿಗಳನ್ನು ಗಡಿಪಾರು ಮಾಡುವ ಅವಕಾಶವಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸುಮಾರು 50ಕ್ಕೂ ಅಧಿಕ ರೌಡಿಗಳ ಪರೇಡ್‌ ನಡೆಸಿದ ನಂದಗಾವಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲೂ ಮೆರವಣಿಗೆ ಅಥವಾ ಅನಗತ್ಯ ಸಂದರ್ಭದಲ್ಲಿ ಭಾಗ ವಹಿಸಿ ಹಿಂಸಾತ್ಮಕ ಕೃತ್ಯವಾದಲ್ಲಿ ಸರಿಯಾದ ಕಾನೂನಿನ ಪಾಠ ಎದುರಿಸಲು ಸಿದ್ಧವಾಗಿರಿ ಎಂದು ಹೇಳಿದರು. ಬೀದರ್ ಜಿಲ್ಲೆಯನ್ನು ನಶೆಮುಕ್ತ ಜಿಲ್ಲೆಯ ಅಭಿಯಾನ ಆರಂಭವಾಗಿದೆ ವಿವಿಧ ನಶೆ ಪದಾರ್ಥಗಳ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿದ್ದ ರೌಡಿಗಳನ್ನು ಪ್ರತ್ಯೇಕವಾಗಿ ಎಚ್ಚರಿಕೆ ನೀಡಿದರು.

ಅಲ್ಲದೆ ರೌಡಿ ಲಿಸ್ಟ್‌ನಲ್ಲಿ ಸುಧಾರಿತ ವ್ಯಕ್ತಿತ್ವದವರ ದಿನಚರಿ ಅಧ್ಯಯನ ನಡೆಸಿ ಅವರನ್ನು ರೌಡಿ ಲಿಸ್ಟ್‌ನಿಂದ ನಿಯಮಾನುಸಾರ ಬಿಡುಗಡೆಗೆ ಕ್ರಮ ಕೈಗೊಳ್ಳ ಲಾಗುವುದು ಎಂದರು. ಈ ವೇಳೆಯಲ್ಲಿ ಸಿಪಿಐ, ಪಿಎಸ್‌ಐ ಸಿಬ್ಬಂದಿ ಇದ್ದರು.