ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

| Published : Aug 09 2024, 12:35 AM IST

ಸಾರಾಂಶ

ತಾಯಿಯ ಎದೆಹಾಲು ಅಮೃತಕ್ಕೆ ಸಮ. ಸೌಂದರ್ಯ ಹಾಳಾಗುತ್ತದೆ ಎಂದು ತಾಯಿ ಹಾಲನ್ನು ಮಕ್ಕಳಿಗೆ ನೀಡದೆ ಇರುವುದು ಒಳಿತಲ್ಲ.

ಗುಬ್ಬಿ: ತಾಯಿಯ ಎದೆಹಾಲು ಅಮೃತಕ್ಕೆ ಸಮ. ಸೌಂದರ್ಯ ಹಾಳಾಗುತ್ತದೆ ಎಂದು ತಾಯಿ ಹಾಲನ್ನು ಮಕ್ಕಳಿಗೆ ನೀಡದೆ ಇರುವುದು ಒಳಿತಲ್ಲ ಎಂದು ಸಿಡಿಪಿಒ ಮಹೇಶ್ ತಿಳಿಸಿದರು. ತಾಲೂಕಿನ ಚಿಕ್ಕ ಕುನ್ನಾಲ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ, ಅಂಗನವಾಡಿ ಕಾರ್ಯಕರ್ತರಿಗೆ ಉಚಿತ ಆರೋಗ್ಯ ಶಿಬಿರ, ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಗಸ್ಟ್ ತಿಂಗಳಿನಲ್ಲಿ ಏಳು ದಿನ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಿವಮ್ಮ, ಮಂಜುಳಾ, ಪಲ್ಲವಿ, ವಿಜಯಲಕ್ಷ್ಮಿ, ರೇಣುಕಾ ಹಾಜರಿದ್ದರು.