ಸಂಸ್ಕೃತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ: ಶಿಕಾರಿಪುರ ಕೃಷ್ಣಮೂರ್ತಿ

| Published : Aug 05 2025, 11:47 PM IST

ಸಂಸ್ಕೃತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ: ಶಿಕಾರಿಪುರ ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಅಮೃತ ವಿದ್ಯಾಲಯಂ ನಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮಠದ ಮುಖ್ಯಸ್ಥ ಸ್ವಾಮಿನಿ ಮಂಗಳಾಮೃತ ಉದ್ಘಾಟಿಸಿದರು.

ಮಂಗಳೂರು: ನಗರದ ಅಮೃತ ವಿದ್ಯಾಲಯಂ ನಲ್ಲಿ ಸಂಸ್ಕೃತ ಸಪ್ತಾಹ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮಠದ ಮುಖ್ಯಸ್ಥ ಸ್ವಾಮಿನಿ ಮಂಗಳಾಮೃತ ಪ್ರಾಣ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಕೃತ ವಿದ್ವಾಂಸ ಹಾಗೂ ನಿವೃತ್ತ ಪ್ರೊಫೆಸರ್ ಆಗಿರುವ ಡಾ. ಶಿಕಾರಿಪುರ ಕೃಷ್ಣಮೂರ್ತಿ ಮಾತನಾಡಿ, ವಿಜ್ಞಾನದ ಹಲವು ಸಂಶೋಧನೆಗಳಿಗೆ ಭಾರತದ ಸಂಪದ್ಭರಿತವಾದ ಸಂಸ್ಕೃತ ಗ್ರಂಥಗಳು ಮೂಲವಾಗಿರುವುದನ್ನು ಕಾಣುತ್ತೇವೆ. ಸಂಸ್ಕೃತ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಇದೆ ಎಂದರು.

ಸಂಸ್ಕೃತ ಭಾರತಿ ಅಧ್ಯಕ್ಷ ಹಾಗೂ ದಕ್ಷಿಣ ಪ್ರಾಂತದ ಪ್ರಮುಖ ಸತ್ಯನಾರಾಯಣ ಕೆ.ವಿ. ಮಾತನಾಡಿ, ಸಂಸ್ಕೃತ ಭಾಷೆಯನ್ನು ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಇದಕ್ಕೆ ಪೋಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಆದ್ಯತೆ ನೀಡುವಂತೆ ಕರೆಯಿತ್ತರು.ಅಧ್ಯಕ್ಷತೆ ವಹಿಸಿದ್ದ ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ಮಾತನಾಡಿ, ಕೇಂದ್ರವು ಭಾರತೀಯ ಸಂಸ್ಕೃತಿಯ ಉನ್ನತ ಮೌಲ್ಯಗಳನ್ನು ಶಿಕ್ಷಣದ ಜೊತೆಗೆ ಅಳವಡಿಸಿ ಉನ್ನತ ವ್ಯಕ್ತಿತ್ವ ರೂಪಿಸಲು ಸಹಕರಿಸುತ್ತಿದೆ ಎಂದರು.ವೇದಿಕೆಯಲ್ಲಿ ಅಮೃತ ವಿದ್ಯಾಲಯಂ ನ ಆಡಳಿತಾಧಿಕಾರಿ ದೀಪಾ ಮನೋಜ್ ಇದ್ದರು. ಸಂಸ್ಕೃತ ಶಿಕ್ಷಕಿ ವೈಶಾಲಿ ಉಪಾಧ್ಯೆ ಸ್ವಾಗತಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಸಂಸ್ಕೃತ ಶಿಕ್ಷಕ ಗಣೇಶ್ ಭಟ್ ನೆರವೇರಿಸಿದರು. ಅಮೃತ ವಿದ್ಯಾಲಯಂ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮ ಒಂದು ವಾರ ಕಾಲ ನಡೆಯಲಿದೆ.