ಆರ್ಥಿಕ ಸಂಕಷ್ಟದ ನಡುವೆಯೂ ಛಲ ಬಿಡದೆ, ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ ಸೈದಾಪುರ ಪಟ್ಟಣದ ಜ್ಯೋತಿ ಮತ್ತು ಹಣಮಂತ ದಂಪತಿಯ ಪುತ್ರ ಬ್ರಿಜೇಶ್, ಸರ್ಕಾರಿ ಕೋಟಾದಡಿ ಗದಗ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ.
ದೇವಪ್ಪ ಬಿ. ವಡವಟ್
ಕನ್ನಡಪ್ರಭ ವಾರ್ತೆ ಸೈದಾಪುರಆರ್ಥಿಕ ಸಂಕಷ್ಟದ ನಡುವೆಯೂ ಛಲ ಬಿಡದೆ, ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದ ಸೈದಾಪುರ ಪಟ್ಟಣದ ಜ್ಯೋತಿ ಮತ್ತು ಹಣಮಂತ ದಂಪತಿಯ ಪುತ್ರ ಬ್ರಿಜೇಶ್, ಸರ್ಕಾರಿ ಕೋಟಾದಡಿ ಗದಗ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ.
ಜ್ಯೋತಿ ಮತ್ತು ಹಣಮಂತ ದಂಪತಿ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರದಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ವ್ಯಾಪಾರದಲ್ಲಿ ನಷ್ಟವಾದ ಸಂದರ್ಭಗಳಲ್ಲಿಯೂ, ಆದಾಯ ಕಡಿಮೆಯಾದಾಗಲೂ ಮಗನ ಶಿಕ್ಷಣಕ್ಕೆ ಆದ್ಯತೆ ನೀಡಿ ನಿರಂತರವಾಗಿ ಪ್ರೋತ್ಸಾಹಿಸಿದ್ದಾರೆ.ಪೋಷಕರ ಕಷ್ಟವನ್ನು ಅರಿತ ಬ್ರಿಜೇಶ್ ಕೂಡ ವಿದ್ಯಾಭ್ಯಾಸದಲ್ಲಿ ನಿರಂತರ ಪರಿಶ್ರಮ ವಹಿಸಿದ್ದಾನೆ. ದಿನಕ್ಕೆ ಹಲವು ಗಂಟೆಗಳ ಕಾಲ ಅಧ್ಯಯನ ಮಾಡುವ ಮೂಲಕ ವೈದ್ಯನಾಗಬೇಕೆಂಬ ತನ್ನ ಕನಸಿನತ್ತ ಹೆಜ್ಜೆ ಹಾಕಿದ್ದಾನೆ. ಇದೀಗ ಸರ್ಕಾರಿ ಕೋಟಾದಡಿ ಗದಗ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಮೂಲಕ ತನ್ನ ಪರಿಶ್ರಮಕ್ಕೆ ತಕ್ಕ ಫಲ ಪಡೆದುಕೊಂಡಿದ್ದಾನೆ.
ಬ್ರಿಜೇಶ್‌ನ ಸಾಧನೆ ಸೈದಾಪುರ ಪಟ್ಟಣದ ವಿದ್ಯಾರ್ಥಿಗಳಿಗೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳಿಗೆ ಪ್ರೇರಣೆಯಾಗಿದ್ದು, ಉತ್ತಮ ಶಿಕ್ಷಣದ ಮೂಲಕ ಜೀವನದಲ್ಲಿ ಎತ್ತರಕ್ಕೆ ಏರಬಹುದು ಎಂಬ ಸಂದೇಶವನ್ನು ಸಾರಿದೆ. ಬ್ರಿಜೇಶ್‌ನ ಸಾಧನೆಗೆ ಪೋಷಕರು, ಕುಟುಂಬಸ್ಥರು, ಸ್ನೇಹಿತರು ಹಾಗೂ ಪಟ್ಟಣದ ಗಣ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.ಪರಿಶ್ರಮಕ್ಕೆ ಎಂದಿಗೂ ಸೋಲಿಲ್ಲ, ಬಡತನ ಎಂದಿಗೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಗುರಿ ಸ್ಪಷ್ಟವಾಗಿದ್ದರೆ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನದಿಂದ ಯಾವುದೇ ವಿದ್ಯಾರ್ಥಿ ಉನ್ನತ ಸಾಧನೆ ಮಾಡಬಹುದು. ಬ್ರಿಜೇಶ್‌ನ ಈ ಸಾಧನೆ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
------ಕೋಟ್‌ಗಳು---------ನಮ್ಮ ಮನೆಗೆ ಬಡತನ ಇರಬಹುದು ಆದರೆ ಅಪ್ಪ-ಅಮ್ಮ ನನಗೆ ಬಡತನ ತೊರಿಸಿಲ್ಲ, ಆದರೆ ನಾನು ಕಂಡಿದೆನೆ. ಅವರ ಬೆವರಿನ ಪಲವಾಗಿ ವೈದ್ಯಕೀಯ ಪ್ರವೇಶ ದೊರಕಿದೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ವೈದ್ಯನಾಗಿ ಸಮಾಜದಲ್ಲಿರುವ ಬಡವರು ಮತ್ತು ಅಗತ್ಯವಿರುವವರಿಗೆ ಸೇವೆ ಸಲ್ಲಿಸುವ ಆಸೆ ಇದೆ.
-ಬ್ರಿಜೇಶ ಹಣಮಂತ ಬಳಿಚಕ್ರ.-------------
ಬೆವರಿನ ಬೆಲೆಯನ್ನು ಅರಿತು ಮಕ್ಕಳು ಮುನ್ನಡೆಯಬೇಕು, ಪೋಷಕರು ತಮ್ಮ ಕಷ್ಟಗಳನ್ನು ಲೆಕ್ಕಿಸದೆ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಾರೆ. ಅವರ ಬೆವರಿನ ಬೆಲೆಯನ್ನು ಅರಿತು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮುನ್ನಡೆಯಬೇಕು. ಕನಸು ಕಾಣುವುದು ಸುಲಭ; ಆದರೆ ಆ ಕನಸನ್ನು ನನಸಾಗಿಸಲು ಪ್ರತಿದಿನ ಶ್ರಮಿಸುವ ಛಲವೇ ಯಶಸ್ಸಿನ ನಿಜವಾದ ದಾರಿ.: ಲಿಂಗಾರೆಡ್ಡಿ ನಾಯಕ್, ಮುಖ್ಯಗುರುಗಳು.
----ಫೋಟೊ----6ವೈಡಿಆರ್2 : ಸೈದಾಪುರ ಪಟ್ಟಣದ ತರಕಾರಿ ವ್ಯಾಪರಿಯ ಪುತ್ರ ಬ್ರಿಜೇಶ್, ಸರ್ಕಾರಿ ಕೋಟಾದಡಿ ಗದಗ ಸರ್ಕಾರಿ ವೈದ್ಯಕೀಯ ಕಾಲೇಜಿನ ಎಂ.ಬಿ.ಬಿ.ಎಸ್. ಕೋರ್ಸಗೆ ಪ್ರವೇಶ ಪಡೆದ ಹಿನ್ನೆಲೆ, ಸಂಬಂಧಿಕರು ಸೇರಿ ಇತರರು ಸನ್ಮಾನಿಸಿ ಶುಭ ಹಾರೈಸಿದರು.