ಕನ್ನಡಪ್ರಭ ವಾರ್ತೆ ತಾಳಿಕೋಟೆಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಯ ತವಕಿನಲ್ಲಿದ್ದ ತಾಳಿಕೋಟೆ ಮೈಲೇಶ್ವರ ಕ್ರಾಸ್‌ನ ಬ್ರಿಲಿಯಂಟ್ ಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಗಂಗಾ ಅಶೋಕ ಕೊಳೂರ ಕೊನೆಗೂ ಮರು ಮೌಲ್ಯಮಾಪನದಲ್ಲಿ 2 ಅಂಕ ಗಳಿಕೆದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಯ ತವಕಿನಲ್ಲಿದ್ದ ತಾಳಿಕೋಟೆ ಮೈಲೇಶ್ವರ ಕ್ರಾಸ್‌ನ ಬ್ರಿಲಿಯಂಟ್ ಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಗಂಗಾ ಅಶೋಕ ಕೊಳೂರ ಕೊನೆಗೂ ಮರು ಮೌಲ್ಯಮಾಪನದಲ್ಲಿ 2 ಅಂಕ ಗಳಿಕೆದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಶಿಕ್ಷಕರ ಪಾಠದ ಮೇಲಿನ ಹಾಗೂ ಓದಿನಲ್ಲಿ ಅಡಗಿಸಿಕೊಂಡಿದ್ದ ಶ್ರದ್ಧೆ ಪರಿಣಾಮ ತಾಲೂಕಿನ ಹೊಸಳ್ಳಿ ಗ್ರಾಮದ ಅಶೋಕಗೌಡ ಕೊಳೂರ ಅವರ ಮಗಳು 625ಕ್ಕೆ 623 ಅಂಕದೊಂದಿಗೆ ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಳು. ಈ ಮರುಮೌಲ್ಯಮಾಪನದಲ್ಲಿ 2 ಅಂಕಗಳ ಗಳಿಕೆ ಮಾಡುವುದರೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಶಾಲೆ ಹೆಸರನ್ನು ರಾಜಮಟ್ಟದಲ್ಲಿ ಪಸರಿಸಿದ್ದಾಳೆ.

ಕನ್ನಡ ವಿಷಯದಲ್ಲಿ 125ಕ್ಕೆ 1 ಅಂಕ ಕಡಿತಗೊಂಡು 124 ಅಂಕ, ಇಂಗ್ಲಿಷ್ ವಿಷಯದಲ್ಲಿ 100ಕ್ಕೆ 1 ಅಂಕ ಕಡಿತಗೊಂಡು 99 ಅಂಕಗಳು ಬಂದಿದ್ದವು. ಆದರೆ, ವಿದ್ಯಾರ್ಥಿ ಗಂಗಾ ಕೊಳೂರ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೇ ತಾನು ಅಚ್ಚುಕಟ್ಟಾಗಿ ಬರೆದ ಪರೀಕ್ಷೆಯ ಮೇಲೆ ನಂಬಿಕೆಯೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ಎರಡು ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಕೊನೆಗೂ ವಿದ್ಯಾರ್ಥಿನಿ ಗಂಗಾ ಕೊಳೂರ ತಾನು ಎದುರಿಸಿದ ಪರೀಕ್ಷೆಯ ಮೇಲೆ ಹುಸಿಗೊಳ್ಳದೇ ಕನ್ನಡ ವಿಷಯಕ್ಕೆ 125 ಅಂಕ, ಇಂಗ್ಲಿಷ್ ವಿಷಯದಲ್ಲಿ 100 ಅಂಕ ಪಡೆದು ಸಾಧನೆಯ ಶಿಖರ ತಲುಪಿದ್ದಾಳೆ.

ಇದರ ಜೊತೆಗೆ ಇನ್ನೋರ್ವ ಇದೇ ಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ಅಶ್ವಿನಿ ರೆಡ್ಡಿ ಬಾಪುಗೌಡ ವಂದಲಿ 625ಕ್ಕೆ 611 ಅಂಕಗಳು ಬಂದಿದ್ದು, ಈ ವಿದ್ಯಾರ್ಥಿನಿಯೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರಿಂದ 11 ಅಂಕಗಳು ಹೆಚ್ಚಾಗಿ 622 ಅಂಕಗಳೊಂದಿಗೆ ಸದ್ಯ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾಳೆ.

ಬ್ರಿಲಿಯಂಟ್ ಶಾಲೆಯಲ್ಲಿ ನಿತ್ಯ ಶಿಕ್ಷಕರು ಮಾಡುತ್ತಿದ್ದ ಪಾಠಭೋದನೆಯನ್ನು ಮರು ಅಧ್ಯಯನ ಮಾಡುವಂತಹ ಕಾರ್ಯ ನಿತ್ಯ ಮಾಡುತ್ತಿದ್ದೆ ನನ್ನ ಓದಿನಲ್ಲಿ ತಿಳಿಯದ ವಿಷಯವನ್ನು ಹತ್ತಾರು ಭಾರಿ ಕೇಳಿದರು ಶಿಕ್ಷಕರು ತಿಳಿ ಹೇಳುವಂತಹ ಕಾರ್ಯ ಮಾಡುತ್ತಿದ್ದರು ಅದರ ಜೊತೆಗೆ ನಮ್ಮ ತಂದೆ ರೈತರಾದರೂ ಕೂಡಾ ನನ್ನ ಓದಿಗೆ ಪ್ರೋತ್ಸಾಹಿಸುತ್ತಾ ಬಂದಿದ್ದರಿಂದ ಈ ಸಾಧನೆ ಮಾಡಲು ಸಾದ್ಯವಾಗಿದೆ.-ಗಂಗಾ ಕೊಳೂರ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ಓದಿನಲ್ಲಿ ಶ್ರದ್ಧೆ, ಭಕ್ತಿ ಇರಬೇಕು. ಶಿಕ್ಷಕರು ಮಾಡುವ ಪಾಠವನ್ನು ನಿತ್ಯ ಚರ್ಚಿಸುವಂತಹ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬರಬೇಕು. ಅಂದಾಗ ಇಂತಹ ಸಾಧನೆ ಮಾಡಲು ಸಾಧ್ಯ. ಗಂಗಾ ಕೊಳೂರ ವಿದ್ಯಾರ್ಥಿನಿ ಕಲಿಕೆ ಮೇಲಿರುವ ಆಸಕ್ತಿ ರಾಜ್ಯ ಮಟ್ಟದಲ್ಲಿ ಸಾಧಿಸುವಂತೆ ಮಾಡಿದೆ ಬ್ರಿಲಿಯಂಟ್ ಶಾಲೆ ಹೆಸರನ್ನು ರಾಜ್ಯಕ್ಕೆ ಪರಿಚಯಿಸಿದ್ದಕ್ಕೆ ವಿದ್ಯಾರ್ಥಿನಿಗೆ ಸಂಸ್ಥೆ ಅಭಿನಂದಿಸುತ್ತದೆ.-ನಾನಾಗೌಡ ನಡುವಿನಮನಿ, ಅಧ್ಯಕ್ಷರು, ಬ್ರಿಲಿಯಂಟ್ ಶಿಕ್ಷಣ ಸಂಸ್ಥೆ.