ಸಾರಾಂಶ
ಮಹಿಳೆ ಕುಟುಂಬ ಸಾಗಿಸುವ ಜವಾಬ್ದಾರಿ ಬಹಳಷ್ಟದೆ, ಆದ್ದರಿಂದ ಅವಳು ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕೃತಿ ನೀಡಬೇಕು. ಮಹಿಳೆ ಸೀರಿಯಲ್ ದಾಸರಾಗದೆ ಕುಟುಂಬದ ದಾಸರಾಗಬೇಕು
ನರಗುಂದ: ಸಮಾಜದಲ್ಲಿ ಮಹಿಳೆಗೆ ಸಮಾನತೆ ಸಿಗಬೇಕೆಂದರೆ ಬಸವಣ್ಣನವರ ಮೀಸಲಾತಿಯನ್ನು ಸರ್ಕಾರ ಜಾರಿ ಮಾಡಬೇಕೆಂದು ತಾಲೂಕು ಕದಳಿ ಮಹಿಳಾ ಸಂಘದ ಅಧ್ಯಕ್ಷೆ ಲೀಲಕ್ಕ ಹಸಬಿ ಹೇಳಿದರು.
ಅವರು ಪಟ್ಟಣದ ಹಸಬಿ ನಿವಾಸದಲ್ಲಿ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ, ತಾಲೂಕು ಕದಳಿ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ಮಹಿಳೆ ಅಬಲೆ ಅಲ್ಲ ಸಬಲೆ ಅವಳು ಕೂಡಾ ಪುರುಷನಂತೆ ಸಮಾಜದಲ್ಲಿ ಸಮಾನಳು ಎಂದು ಅಂದಿನ ದಿನದಲ್ಲಿಯೇ ಶೇ. 33ರಷ್ಟು ಮೀಸಲಾತಿಯನ್ನು ತಮ್ಮ ಅನುಭವ ಮಂಟಪದಲ್ಲಿ ಜಾರಿಗೆ ತಂದು ಹಲವಾರು ಶರಣೆಯರೆಗೆ ಅವಕಾಶ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಆದ್ದರಿಂದ ಸರ್ಕಾರ ಕೇವಲ ಮಹಿಳೆಗೆ ಮೀಸಲಾತಿ ಜಾರಿ ಮಾಡಿದರೆ ಸಾಲದು ಅದನ್ನು ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.ನಿವೃತ್ತಿ ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಮಾತನಾಡಿ, ಮಹಿಳೆ ಕುಟುಂಬ ಸಾಗಿಸುವ ಜವಾಬ್ದಾರಿ ಬಹಳಷ್ಟದೆ, ಆದ್ದರಿಂದ ಅವಳು ಮನೆಯಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕೃತಿ ನೀಡಬೇಕು. ಮಹಿಳೆ ಸೀರಿಯಲ್ ದಾಸರಾಗದೆ ಕುಟುಂಬದ ದಾಸರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಸಿ ಗೌರವಿಸಲಾಯಿತು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ, ವ್ಯಾಪಾರಸ್ಥ ಕರಬಸಪ್ಪ ಹಸಬಿ, ಎಸ್.ಎನ್. ಪಾಟೀಲ, ಶಿವಲೀಲಾ ಹಿರೇಮಠ, ವಿದ್ಯಾ ಸುಳ್ಳದ, ರೇಖಾ ಹಾದಿಮನಿ, ನಿರ್ಮಲಾ ಉಪಾಸಿ, ಗಾಯಿತ್ರಿ ಕೊಪ್ಪಳ, ಕದಳಿ ಮಹಿಳಾ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.