ಸಾರಾಂಶ
ವಚನಗಳು ಜ್ಞಾನ ದೀವಿಗೆಗಳು, ಅವುಗಳನ್ನು ಹೇಳಿದರೇ ನಡೆಯುವುದಿಲ್ಲ. ಅನುಕರಣೆಗೆ ತರುವುದು ಬಹುಮುಖ್ಯವೆನಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ.ಪ್ರಭಾಕರ ಕೋರೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಚನಗಳು ಜ್ಞಾನ ದೀವಿಗೆಗಳು, ಅವುಗಳನ್ನು ಹೇಳಿದರೇ ನಡೆಯುವುದಿಲ್ಲ. ಅನುಕರಣೆಗೆ ತರುವುದು ಬಹುಮುಖ್ಯವೆನಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ.ಪ್ರಭಾಕರ ಕೋರೆ ಹೇಳಿದರು.ಇಲ್ಲಿನ ಶಿವಬಸವ ನಗರದಲ್ಲಿರುವ ಲಿಂಗಾಯತ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಡಾ.ಫ.ಗು.ಹಳಕಟ್ಟಿಯಂತ ಪ್ರಾಥಃಸ್ಮರಣೀಯರು ವಚನ ಸಾಹಿತ್ಯಕ್ಕಾಗಿ ಶ್ರಮಿಸದೇ ಹೋಗಿದ್ದರೆ ವಚನಗಳನ್ನು ಅಭ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ಕನ್ನಡ ನಾಡಿಗೆ ನೀಡಿರುವ ಕೊಡುಗೆ ಚಿರಸ್ಮರಣೀಯ. ಇಂದಿನ ಜನಾಂಗಕ್ಕೆ ಅಂತಹ ಮಹನೀಯರನ್ನು ತಿಳಿಸಿಕೊಡಬೇಕಾಗಿದೆ ಎಂದರು.ಬಸವಣ್ಣನವರ ಜೀವನ ಸಾಧನೆ ಕುರಿತು ಪ್ರಾಧ್ಯಾಪಕ ಡಾ.ಎಚ್.ಬಿ.ಕೋಲ್ಕಾರ ಮಾತನಾಡಿ, ಬಸವಣ್ಣನವರು ಯುಗದ ಉತ್ಸಾಹ, ವಿಶ್ವಗುರು. ಒಂದು ಕಾಲಘಟ್ಟದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ವೈರುಧ್ಯಗಳನ್ನು ತೊಡೆದುಹಾಕಲು ಬದುಕನ್ನು ಸಮರ್ಪಿಸಿದರು. ಇಂದು ವಿಶ್ವವೇ ಅವರ ವಿಚಾರಗಳಿಗೆ ತಲೆಬಾಗುತ್ತದೆ. ಅವರು ನಮ್ಮ ಸಾಂಸ್ಕೃತಿಯ ನಾಯಕರಾಗಿರುವುದು ಹೆಮ್ಮೆಯನ್ನು ತರುತ್ತದೆ ಎಂದು ತಿಳಿಸಿದರು.ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿಯಿಂದ ಬೆಳಗಾವಿಯ ಹೃದಯಭಾಗದಲ್ಲಿ ಸಮಾಜದ ಬಡ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ ಕಾಮಗಾರಿಯು ಮುಗಿಯುವ ಕೊನೆಯ ಹಂತದಲ್ಲಿದೆ. ಇದು ಸಮಾಜದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ. ಈ ನೆಲೆಯಲ್ಲಿ ಡಾ.ಕೋರೆಯವರು ಸಲ್ಲಿಸಿರುವ ಸೇವೆ ಅಪಾರ. ಸಮಾಜದ ಇಂತಹ ಅನೇಕ ಕೆಲಸಗಳನ್ನು ಮುಂಚೂಣಿಯಲ್ಲಿ ಯಶಸ್ಸುಗೊಳಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದ ಕಳೆದ ೪೦ ವರ್ಷಗಳಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಅಭಿನಂದಿಸಿದರು.ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಆಶೀವರ್ಚನ ನೀಡಿ, ಡಾ.ಪ್ರಭಾಕರ ಕೋರೆಯವರು ಕರ್ತೃತ್ವಶಕ್ತಿ ಬಹು ದೊಡ್ಡದು. ಹಿಡಿದ ಕಾರ್ಯಗಳನ್ನು ಅತ್ಯಂತ ಭಕ್ತಿ ಹಾಗೂ ನಿಷ್ಠೆಯಿಂದ ನೆರೆವೇರಿಸುತ್ತ ಬಂದಿದ್ದಾರೆ. ಅವರಿಂದ ಸಮಾಜ ಸಂದ ಸೇವೆಗೆ ಬೆಲೆಕಟ್ಟಲಾಗದು. ಕೆಎಲ್‌ಇ ಸಂಸ್ಥೆ ಹಾಗೂ ನಮ್ಮ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಶ್ಲಾಘನೀಯವೆನಿಸಿದೆ ಎಂದು ಆಶೀರ್ವದಿಸಿದರು.ಸಮಾರಂಭದಲ್ಲಿ ಸಂಸದ ಜಗದೀಶ ಶೆಟ್ಟರ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಸೋಮಲಿಂಗ ಮಾವಿನಕಟ್ಟಿ, ಪ್ರೊ.ಎ.ಬಿ.ಕೊರಬು, ಗುರುದೇವ ಪಾಟೀಲ, ಬಾಲಚಂದ್ರ ಬಾಗಿ, ಶ್ರೀಮತಿ ಸಂಸುದ್ದಿ, ಏಣಗಿ ಸುಭಾಷ, ಡಾ.ಮಹೇಶ ಗುರನಗೌಡರ, ಚೇತನ ಅಂಗಡಿ ಉಪಸ್ಥಿತರಿದ್ದರು. ಶ್ವೇತಾ ಹೆದ್ದೂರಶೆಟ್ಟ ವಚನ ಪ್ರಾರ್ಥಿಸಿದರು. ರಮೇಶ ಕಳಸವಣ್ಣವರ ಸ್ವಾಗತಿಸಿದರು. ಮಹಾದೇವಿ ಅಜವಾನೆ ವಚನ ವಿಶ್ಲೇಷಣೆ ಮಾಡಿದರು. ಸುಧಾ ಪಾಟೀಲ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ವಿ.ಕೆ.ಪಾಟೀಲ ವಂದಿಸಿದರು.