ಹಾಡಹಗಲೇ ಮನೆಗೆ ನುಗ್ಗಿ ದರೋಡೆ

| Published : Jan 28 2025, 12:47 AM IST

ಸಾರಾಂಶ

ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಮುಖಕ್ಕೆ ಕಾರದ ಪುಡಿ ಎರಚಿ 7 ತೊಲ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ನಡೆದಿದೆ.

ಬೆಳಗಾವಿ: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಮುಖಕ್ಕೆ ಕಾರದ ಪುಡಿ ಎರಚಿ 7 ತೊಲೆ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ನಡೆದಿದೆ. ಎಲ್ ಆ್ಯಂಡ್‌ ಟಿ ಕಂಪನಿ ಉದ್ಯೋಗಿ ಮುರುಗನ್ ದಂಪತಿ ಚನ್ನಮ್ಮ ನಗರದಲ್ಲಿ ವಾಸವಿದ್ದು, ಮುರುಗನ್ ಅವರು ಕೆಲಸಕ್ಕೆ ತೆರಳಿದ ವೇಳೆ ಮನೆಗೆ ನುಗ್ಗಿದ ದರೋಡೆಕೋರರು ಅವರ ಪತ್ನಿಯ ಕಣ್ಣಿಗೆ ಖಾರದಪುಡಿ ಎರಚಿ, ಕತ್ತು ಹಿಸುಕಿ ಕೊರಳಲ್ಲಿದ್ದ ಮಾಂಗಲ್ಯ, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.‌ ಘಟನಾ ಸ್ಥಳಕ್ಕೆ ಕ್ರೈಂ ಡಿಸಿಪಿ ನಿರಂಜನ್ ಅರಸ, ಖಡೇಬಜಾರ್ ಎಸಿಪಿ ಶೇಖರಪ್ಪ, ಉದ್ಯಮಬಾಗ ಪೊಲೀಸ್ ಠಾಣೆಯ ಸಿಪಿಐ ಡಿ.ಕೆ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.