ಸಾರಾಂಶ
ಹರಿಹರ ನಗರದ ಬ್ರದರ್ಸ್ ಜಿಮ್ ದಾವಣಗೆರೆ ಬೀರೇಶ್ವರ ವ್ಯಾಯಾಮ ಶಾಲೆಯಲ್ಲಿ ಅ.೪ ಮತ್ತು ೫ರಂದು ನಡೆದ ೬ನೇ ರಾಜ್ಯಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸತತವಾಗಿ ೬ನೇ ಬಾರಿ ತಂಡ ಪ್ರಶಸ್ತಿಗೆ ಭಾಜನವಾಗಿದೆ.
- ೬ನೇ ರಾಜ್ಯಮಟ್ಟದ ಸ್ಟ್ರೆಂತ್ ಲಿಫ್ಟಿಂಗ್, ಬೆಂಚ್ ಪ್ರೆಸ್ ಸ್ಪರ್ಧೆ
- - -ಹರಿಹರ: ನಗರದ ಬ್ರದರ್ಸ್ ಜಿಮ್ ದಾವಣಗೆರೆ ಬೀರೇಶ್ವರ ವ್ಯಾಯಾಮ ಶಾಲೆಯಲ್ಲಿ ಅ.೪ ಮತ್ತು ೫ರಂದು ನಡೆದ ೬ನೇ ರಾಜ್ಯಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸತತವಾಗಿ ೬ನೇ ಬಾರಿ ತಂಡ ಪ್ರಶಸ್ತಿಗೆ ಭಾಜನವಾಗಿದೆ.
ಸ್ಪರ್ಧೆಗೆ ಭಾಗವಹಿಸಿದ್ದ ಜಿಮ್‌ನ ೨೧ ಜನ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ೧೮ ಚಿನ್ನ, ೬ ಬೆಳ್ಳಿ, ೧ ಕಂಚು ಸೇರಿದಂತೆ ೨೫ ಪದಕಗಳನ್ನು ಗೆದ್ದಿದ್ದಾರೆ. ಮಹಿಳಾ ಕ್ರೀಡಾಪಟು ಚೆಲುವಿ ರಾಜ್ಯಮಟ್ಟದ ಬಲಿಷ್ಠ ಮಹಿಳೆ-೨೦೨೫ ಪ್ರಶ್ರಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಚಿನ್ನದ ಪದಕ ವಿಜೇತರು:
ಚೆಲುವಿ, ರಂಜಿತಾ, ಶೇರ್ ಅಲಿ, ಯಾಸೀನ್ ಡಿ., ಮಹಬೂಬ್ ಅಲಿ, ಬಾಷಾ ಡಿ., ದಾದಾ ಖಲಂದರ್ ಮತ್ತು ವೆಂಕಟೇಶ್ ರೆಡ್ಡಿ ತಲಾ ೨ ಹಾಗೂ ಸಾದಿಖ್ ಉಲ್ಲಾ, ಮೊಹಮ್ಮದ್ ನವಾಜ್ ತಲಾ ೧ ಚಿನ್ನದ ಪಕದ ಗೆದ್ದಿದ್ದಾರೆ.ಬೆಳ್ಳಿ, ಕಂಚು ಪದಕ ವಿಜೇತರು:
ರಾಘವೇಂದ್ರ ಮತ್ತು ರಿಹಾನ್ ತಲಾ ೨ ಹಾಗೂ ರಮೇಶ್ ಮತ್ತು ಮೊಹ್ಮದ್ ನವಾಜ್ ತಲಾ ೧ ಬೆಳ್ಳಿ ಪದಕ, ಹಾಗೂ ಮಹಾಂತೇಶ್ ೧ ಕಂಚಿನ ಪದಕ ಗಳಿಸಿದ್ದಾರೆ.ಚಿನ್ನ ಹಾಗೂ ಬೆಳ್ಳಿ ಪದಕ ಪಡೆದ ಜಿಮ್ ಕ್ರೀಡಾಪಟುಗಳು ನವೆಂಬರ್‌ನಲ್ಲಿ ಸಿಕ್ಕಿಂನಲ್ಲಿ ನಡೆಯುವ ರಾಷ್ಟ್ರೀಯ ಸ್ಟ್ರೆಂತ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವರು.
ಸಾಧಕ ಕ್ರೀಡಾಪಟುಗಳಿಗೆ ಮಾಜಿ ಶಾಸಕ ಎಸ್.ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಅರ್.ಸಿ. ಜಾವಿದ್, ಮಕ್ಕಳ ತಜ್ಞ ವೈದ್ಯ ನಜೀಬ್ ಉಲ್ಲಾ, ರೋಷನ್ ಅಲಿ, ಭಾನುವಳ್ಳಿ ದಾದಾಪೀರ್, ಜಿಮ್ ಸಂಚಾಲಕ ಹಾಗೂ ಅಂತರ ರಾಷ್ಟ್ರೀಯ ಬಾಡಿ ಬಿಲ್ಡರ್ ಅಕ್ರಂ ಬಾಷಾ, ತರಬೇತುದಾರ ಮೊಹಮ್ಮದ್ ರಫಿಕ್ ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.- - -
-08HRR.01:ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹರಿಹರದ ಬ್ರದರ್ಸ್ ಜಿಮ್ ಸತತವಾಗಿ ೬ನೇ ಬಾರಿ ತಂಡ ಪ್ರಶಸ್ತಿಗೆ ಭಾಜನವಾಗಿದ್ದು, ಅಭಿನಂದಿಸಲಾಯಿತು.