ಲೋಕಸಭೆಗೆ 25 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ

| Published : Mar 15 2024, 01:19 AM IST

ಸಾರಾಂಶ

ಬಹುಜನ ಸಮಾಜ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸಲಿರುವ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಗುರುವಾರ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪಕ್ಷದ ಕಚೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಬೆಂಗಳೂರು: ಬಹುಜನ ಸಮಾಜ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸಲಿರುವ 25 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಗುರುವಾರ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪಕ್ಷದ ಕಚೇರಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಮುನಿಯಪ್ಪ, ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕಿ ಮಾಯಾವತಿಯವರ ತೀರ್ಮಾನದಂತೆ ಎನ್.ಡಿ.ಎ ಹಾಗೂ ಇಂಡಿಯಾ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು.

ಬಾಗಲಕೋಟೆ- ವೈ.ಸಿ.ಕಾಂಬಳೆ, ಬೆಂಗಳೂರು ಕೇಂದ್ರ- ಸತೀಶ್ ಚಂದ್ರ ಎಂ.ಬೆಂಗಳೂರು ಉತ್ತರ- ಚಿಕ್ಕಣ್ಣ, ಬೆಂಗಳೂರು ಗ್ರಾಮಾಂತರ- ಡಾ.ಚಿನ್ನಪ್ಪ ವೈ. ಚಿಕ್ಕಹಾಗಡೆ, ಬೆಂಗಳೂರು ದಕ್ಷಿಣ- ಮಣ್ಣೂರ್ ನಾಗರಾಜು, ಬೆಳಗಾವಿ- ಯಮನಪ್ಪ ತಳವಾರ, ಬಳ್ಳಾರಿ- ಶಕುಂತಲಾ, ಬೀದರ್- ಪುಟ್ಟರಾಜು.ಎಚ್, ಬಿಜಾಪುರ- ಕಲ್ಲಪ್ಪ.ಆರ್.ತೊರವಿ, ಚಾಮರಾಜನಗರ- ಸಿ.ಮಹದೇವಯ್ಯ, ಚಿಕ್ಕಬಳ್ಳಾಪುರ- ಆರ್.ಮುನಿಯಪ್ಪ, ಚಿತ್ರದುರ್ಗ- ಅಶೋಕ್ ಚಕ್ರವರ್ತಿ, ದಕ್ಷಿಣ ಕನ್ನಡ-ಕಾಂತಪ್ಪ ಅಳಂಗಾರ್, ದಾವಣಗೆರೆ- ಮಲ್ಲೇಶ್.ಹೆಚ್, ಧಾರವಾಡ- ಶೋಭಾ ಬಳ್ಳಾರಿ, ಗುಲ್ಬರ್ಗ- ಹುಚ್ಚಪ್ಪ ವಟಾರ, ಹಾಸನ- ಗಂಗಾಧರ್ ಬಹುಜನ್, ಹಾವೇರಿ- ಮರಿಯಣ್ಣನವರ, ಕೋಲಾರ- ಮೈಲಾರಪ್ಪ, ಮಂಡ್ಯ- ಶಿವಶಂಕರ್, ಮೈಸೂರು- ಚಂದ್ರ ಶೇಖರ್.ಪಿ., ಶಿವಮೊಗ್ಗ- ಎ.ಡಿ.ಶಿವಪ್ಪ, ತುಮಕೂರು- ರಾಜಸಿಂಹ ಜೆ.ಎನ್, ಉಡುಪಿ-ಚಿಕ್ಕಮಗಳೂರು- ಕೆ.ಟಿ.ರಾಧಾಕೃಷ್ಣ.ಈ ವೇಳೆ ಮಾತನಾಡಿದ ಮುನಿಯಪ್ಪ, ಬಹುಜನ ಸಮಾಜ ಪಕ್ಷ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕಿ ಮಾಯಾವತಿಯವರ ತೀರ್ಮಾನದಂತೆ ಎನ್.ಡಿ.ಎ ಹಾಗೂ ಇಂಡಿಯಾ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ರಾಜ್ಯದ ಒಂದೆರಡು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ರಾಜ್ಯದ ಮೂರು ಅಥವಾ ನಾಲ್ಕು ವಿಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.