ನೆಮ್ಮದಿಯ ಬದುಕಿಗೆ ಬುದ್ಧನ ಮಾರ್ಗವೇ ಸನ್ಮಾರ್ಗ: ಚಿನ್ನಸ್ವಾಮಿ

| Published : Jul 25 2024, 01:17 AM IST

ನೆಮ್ಮದಿಯ ಬದುಕಿಗೆ ಬುದ್ಧನ ಮಾರ್ಗವೇ ಸನ್ಮಾರ್ಗ: ಚಿನ್ನಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಸಾರಾನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ಧಮ್ಮ ಚಕ್ರ ಪ್ರವರ್ತನಾ ಸುತ್ತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಉದ್ಘಾಟಿಸಿದರು.

ಚಾಮರಾಜನಗರ: ಜಗತ್ತಿನಲ್ಲಿ ನೆಮ್ಮದಿಯ ಬದುಕಿಗೆ ಬುದ್ಧನ ಮಾರ್ಗವೇ ಸನ್ಮಾರ್ಗವಾಗಿದೆ. ಭಗವಾನ್ ಗೌತಮ ಬುದ್ಧರು ಜಗತ್ತಿಗೆ ಜ್ಞಾನದ ಬೆಳಕನ್ನು ಬೋಧಿಸಿದ ದಿನವೇ ಧಮ್ಮ ಚಕ್ಕ ಪವತ್ತನಾ ಸುತ್ತ ದಿನವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ನಗರದ ಸಾರಾನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ವತಿಯಿಂದ ನಡೆದ ಧಮ್ಮ ಚಕ್ಕ ಪವತ್ತನಾ ಸುತ್ತ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದ ನಾನಾ ಬೌದ್ಧ ರಾಷ್ಟ್ರಗಳು ಮತ್ತು ಭಾರತ ದೇಶದ ಬೌದ್ಧ ವಿಹಾರಗಳಲ್ಲಿ ಧಮ್ಮ ಚಕ್ಕ ಪವತ್ತನಾ ಸುತ್ತ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಭಗವಾನ್ ಗೌತಮ ಬುದ್ಧ ಜ್ಞಾನೋದಯವಾದ ನಂತರ ಉತ್ತರ ಪ್ರದೇಶದ ಸಾರನಾಥ ಜಿಂಕೆವನದಲ್ಲಿ ಹುಣ್ಣಿಮೆ ದಿನದಂದು ಪ್ರಪ್ರಥಮವಾಗಿ ತಮ್ಮ ೫ ಮಂದಿ ಶಿಷ್ಯರಿಗೆ ತಾವು ಕಂಡುಕೊಂಡಂತಹ ಜ್ಞಾನವನ್ನು ಬೋಧಿಸಿದರು ಎಂದರು. ಕೊಳ್ಳೇಗಾಲ ಚೇತವನ ಬುದ್ಧ ವಿಹಾರದ ಭಂತೆ ಮನೋರಕ್ಕಿತಾ ಥೇರ ಮಾತನಾಡಿ, ಭಗವಾನ್ ಬುದ್ಧ ನೀಡಿರುವ ಅಷ್ಟಾಂಗ ಮಾರ್ಗ ಮತ್ತು ಪಂಚಶೀಲ ತತ್ವಗಳನ್ನು ಪಾಲಿಸಿ ನೆಮ್ಮದಿ ಜೀವನ ಸಾಗಿಸಬಹುದು ಎಂದರು.

ಧಮ್ಮ ಚಿಂತಕರಾದ ಮಹದೇವು ಕಲ್ಲಾರೆಪುರೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಅಧ್ಯಕ್ಷ ಆರ್.ಬಸವರಾಜು, ಬೌದ್ಧ ಬಂಧುಗಳು ಭಾಗವಹಿಸಿದ್ದರು.