ಸಾರಾಂಶ
ದೇಶವನ್ನು ಶೈಕ್ಷಣಿಕವಾಗಿ ಮುನ್ನಡೆಸಲು, ಮಧ್ಯಮ ವರ್ಗದವರ ಆರ್ಥಿಕ ಹೊರೆಯನ್ನು ಕೆಳಗಿಸಿದ ಮತ್ತು ಆರ್ಥಿಕ ವೇಗವನ್ನು ಹೆಚ್ಚಿಸುವುದರ ಜತೆಗೆ ಔದ್ಯೋಗಿಕ ಚಟುವಟಿಕೆಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮಂಡಿಸಿದ ಬಜೆಟ್‌ನಿಂದ ತಿಳಿದುಬರುತ್ತದೆ. ಕೃಷಿಕರಿಗೆ, ಮಧ್ಯಮವರ್ಗದವರಿಗೆ, ಯುವ ಜನತೆಗೆ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕೇಂದ್ರ ಸಚಿವರು ಉತ್ತಮವಾದ ಮತ್ತು ಸಂವೇದನಾಶೀಲವಾದ ಬಜೆಟ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಅಟಲ್ ಟಿಂಕರಿಂಗ್ ಲ್ಯಾಬ್, ಐಐಟಿಯಲ್ಲಿ 6,500 ಸೀಟುಗಳನ್ನು ಹೆಚ್ಚಳ, ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್, ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕದಂತಹ ಅದ್ಭುತ ಕೊಡುಗೆಗಳನ್ನು ಕೇಂದ್ರ ಸಚಿವರು ಕೊಡುಗೆಯಾಗಿ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹12 ಲಕ್ಷದವರೆಗೆ ಏರಿಸುವ ಮೂಲಕ ಪರೋಕ್ಷವಾಗಿ ಆರ್ಥಿಕ ಚಟುವಟಿಕೆಗಳು ಹೆಚ್ಚಳಗೊಳ್ಳಲು ಕಾರಣವಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಮತ್ತೊಮ್ಮೆ ಜನಸ್ನೇಹಿ ಆಡಳಿತ ನೀಡುತ್ತಿದೆ ಎನ್ನುವುದಕ್ಕೆ ಬಜೆಟ್ ಸಾಕ್ಷಿಯಾಗಿದೆ.
-ಬಾಲಚಂದ್ರ ಜಾರಕಿಹೊಳಿ,ಶಾಸಕರು, ಬೆಮುಲ್ ಅಧ್ಯಕ್ಷರು