ದಾವಣಗೆರೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಮಂಡಿಸಿರುವ ರಾಜ್ಯದ ಬಜೆಟ್ ನಿರ್ಗಮಿತ ಬೋಗಸ್ ಬಜೆಟ್ ಆಗಿದೆ. ಒಂದೆಡೆ ರಾಜ್ಯದ ಬೊಕ್ಕಸ ಖಾಲಿ ಮಾಡಿ, ಇನ್ನೊಂದೆಡೆ ಆದಾಯ ಕೊರತೆಯ ಬಜೆಟ್‌ನಿಂದ ಈಡೇರಿಸಲಾಗದ ಭರವಸೆಗಳು ರಾಜ್ಯದ ಜನಸಮಾನ್ಯರ ಮೇಲೆ ಸಾಲದ ಮೂಟೆಯನ್ನು ಹೊರಿಸಿ, ಖಾಲಿ ಚೊಂಬು ಕೊಟ್ಟಿದೆ ಎಂದು ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.

ರೈತರು, ಶ್ರಮಿಕರು, ಬಡವರು, ಮಹಿಳೆಯರು ಹಾಗೂ ಯುವಶಕ್ತಿಯನ್ನು ಕಡೆಗಣಿಸಿ, ಅಭಿವೃದ್ಧಿಗೆ ತಿಲಾಂಜಲಿ ಇಟ್ಟಿದ್ದಾರೆ. ರಾಜ್ಯದ ಜನರನ್ನು ಸಾಲದ ಸುಳಿಗೆ ತಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ಭವಿಷ್ಯಕ್ಕೆ ಮಾರಕವಾಗಿದೆ. ಓಲೈಕೆ ರಾಜಕಾರಣವನ್ನೇ ಪರಮಗುರಿ ಆಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಒಂದು ಸಮುದಾಯಕ್ಕೆ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ. ಇದು “ಸಾಲ ಭಾಗ್ಯದ” ಬಜೆಟ್ ಎಂದು ಆರೋಪಿಸಿದ್ದಾರೆ.

- - -

-6ಕೆಡಿವಿಜಿ37: ಡಾ. ಜಿ.ಎಂ.ಸಿದ್ದೇಶ್ವರ