ಚಿರತೆ ದಾಳಿಗೆ ಎಮ್ಮೆ ಕರು ಬಲಿ, ಆತಂಕದಲ್ಲಿ ರೈತರು

| Published : Aug 31 2024, 01:33 AM IST

ಸಾರಾಂಶ

ಚಿರತೆ ದಾಳಿಗೆ ಎಮ್ಮೆ ಕರು ಬಲಿ, ಆತಂಕದಲ್ಲಿ ರೈತರು

ದಾಬಸ್‌ಪೇಟೆ : ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ್ದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿ ಕರುವನ್ನು ತಿಂದುಹಾಕಿರುವ ಘಟನೆ ಸೋಂಪುರ ಹೋಬಳಿಯ ಕೆಂಗಲ್ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.ಕೆಂಗಲ್ ಗೊಲ್ಲರಹಟ್ಟಿ ಗ್ರಾಮದ ರೈತ ತಮ್ಮಯ್ಯ ಎಂಬುವರು ತಮ್ಮ ಮನೆ ಪಕ್ಕದಲ್ಲೇ ಇದ್ದ ಕೊಟ್ಟಿಗೆಯಲ್ಲಿ ಎಮ್ಮೆ ಕರು ಹಾಗೂ ಸುಮಾರು 80 ಕುರಿಗಳನ್ನು ಕಟ್ಟಿ ಹಾಕಿದ್ದರು. ಜು.29ರಂದು ರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಕರು ದಾಳಿ ಮಾಡಿ ಸುಮಾರು 100 ಮೀ ದೂರ ತೆಗೆದುಕೊಂಡು ಹೋಗಿ ತಿಂದುಹಾಕಿದೆ.