ಇಂದಿನಿಂದ ಬಿಲ್ಡ್ ಟೆಕ್ ವಸ್ತು ಪ್ರದರ್ಶನ

| Published : Jul 12 2024, 01:31 AM IST

ಸಾರಾಂಶ

ಬಿಲ್ಡ್ ಟೆಕ್-2024 ವಸ್ತು ಪ್ರದರ್ಶನವನ್ನು ಅಮಾನಿಕೆರೆ ಗಾಜಿನಮನೆಯಲ್ಲಿ ಜು.12,13 ಮತ್ತು 14 ರಂದು ಹಮ್ಮಿಕೊಳ್ಳಲಾಗಿದೆ.

ತುಮಕೂರು: ಎಂಜಿನಿಯರ್ಸ್ ಅಸೋಸಿಯೇಷನ್ ತುಮಕೂರು ವತಿಯಿಂದ ಯುಎಸ್ ಕಮ್ಯುನಿಕೇಷನ್ ಸಹಯೋಗದಲ್ಲಿ ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಬಿಲ್ಡ್ ಟೆಕ್-2024 ವಸ್ತು ಪ್ರದರ್ಶನವನ್ನು ಅಮಾನಿಕೆರೆ ಗಾಜಿನಮನೆಯಲ್ಲಿ ಜು.12,13 ಮತ್ತು 14 ರಂದು ಹಮ್ಮಿಕೊಳ್ಳಲಾಗಿದೆ.

ಬಿಲ್ಡಿಂಗ್ ಮೆಟಿರಿಯಲ್ಸ್,ಇಂಟಿರಿಯರ್ಸ್, ಎಕ್ಸಟೀರಿಯರ್ಸ್ ಫರ್ನಿಷರ್ಸ್ ಹಾಗೂ ಪ್ರಾಪರ್ಟಿ ಎಕ್ಸಪೋ ಕಾರ್ಯಕ್ರಮವನ್ನು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು.ಜಿ, ಎಸ್.ಪಿ.ಚಿದಾನಂದ್, ವಾಸ್ತು ಸಲಹೆಗಾರ ಎಂ.ಕೆ.ನಾಗ ರಾಜರಾವ್ ಉಪಸ್ಥಿತರಿರುವರು.ಬೈಯೋನೆಕ್ಸ್ ಸ್ಟೀಲ್‌ನ ಬಸವಣ್ಣ ಆರ್, ಎಕ್ಸ್ರೋ ಟೈಲ್‌ನ ಮುಖೇಶ್ ಪಾಟೀಲ್, ಉಪಾಧ್ಯಕ್ಷ ಎಚ್.ಕೆ.ನಟೇಶ್ , ಕಾರ್ಯದರ್ಶಿ ಎಂ.ಡಿ.ರಾಜು, ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಶನ ಅಧ್ಯಕ್ಷ ಎನ್.ವಿ.ರಾಮಮೂರ್ತಿ ವಹಿಸಲಿದ್ದಾರೆ.ಜುಲೈ 12,13 ಮತ್ತು 14 ರಂದು ಮೂರು ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರಗೆ ವಸ್ತು ಪ್ರದರ್ಶನ ನಡೆಯಲಿದೆ. ಜಿಲ್ಲೆಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಇಂಜಿನಿಯರ್ಸ್‌ ಅಸೋಸಿಯೇಷನ್ ತಿಳಿಸಿದೆ.