ಸಾರಾಂಶ
ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಹಕ್ಕು ಎಂಬುದು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ
ಗಜೇಂದ್ರಗಡ: ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮತ್ತು ಕಠಿಣ ಪರಿಶ್ರಮದಿಂದ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಪ್ರಾಚಾರ್ಯ ಜಿ.ಬಿ. ಗುಡಿಮನಿ ಹೇಳಿದರು.
ಸ್ಥಳೀಯ ಎಸ್.ಎಂ. ಭೂಮರಡ್ಡಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಹಕ್ಕು ಎಂಬುದು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ. ಶಿಕ್ಷಕರಿಗೆ ಎಲ್ಲ ವಿದ್ಯಾರ್ಥಿಗಳು ಸಮಾನರು. ಹೀಗಾಗಿ ವಿದ್ಯಾರ್ಥಿ ಗುರು ಮೀರಿಸುವ ಸಾಧನೆ ಮಾಡಿ ಗುರು ಕಾಣಿಕೆ ನೀಡಿದಾಗ ಸಂತಸ ಪಡುವ ಮೊದಲ ವ್ಯಕ್ತಿ ಶಿಕ್ಷಕನಾಗಿರುತ್ತಾನೆ. ಮಾನವೀಯ ಮೌಲ್ಯ ರೂಢಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕ ಎಂದರು.
ಹಿರಿಯ ಉಪನ್ಯಾಸಕ ಅರವಿಂದ ವಡ್ಡರ ಮಾತನಾಡಿ, ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ರಾಷ್ಟ್ರದಲ್ಲಿ ಶಿಕ್ಷಕ ಅಂದು ಇಂದುಗಳ ಮಧ್ಯ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಕೇವಲ ವಿದ್ಯಾರ್ಥಿಗಳಲ್ಲ ಶಿಕ್ಷಕನಿಗೆ ಪುನರ್ಜನ್ಮ ನೀಡುವ, ಆ ಮೂಲಕ ಶಿಕ್ಷಕನನ್ನು ನಾಡಿಗೆ ಪರಿಚಯಿಸುವ ಗುರುತರ ಜವಾಬ್ದಾರಿವುಳ್ಳವರು ಎಂದರು.ಎನ್ ಎಸ್ ಎಸ್ ಘಟಕ ಹಾಗೂ ಎಲ್ಲ ವಿದ್ಯಾರ್ಥಿಗಳ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪನ್ಯಾಸಕರನ್ನು ಸನ್ಮಾನಿಸವುದಕ್ಕೂ ಮುನ್ನ ಉಪನ್ಯಾಸಕರಿಗಾಗಿ ವಿವಿಧ ಮನೋರಂಜನಾ ಆಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನ ಪಡೆದ ಉಪನ್ಯಾಸಕರಿಗೆ ಬಹುಮಾನ ವಿತರಿಸಲಾಯಿತು.
ಎನ್.ಎಸ್.ಎಸ್ ಅಧಿಕಾರಿ ಎಸ್.ಎಸ್. ವಾಲಿಕಾರ, ಕ್ರೀಡಾ ವಿಭಾಗದ ಮುಖ್ಯಸ್ಥ ವೈ.ಆರ್. ಸಕ್ರೋಜಿ, ಉಪನ್ಯಾಸಕ ವಿ.ಎಂ. ಜೂಚನಿ ಜ್ಯೋತಿ ಗದಗ, ಎಸ್.ಕೆ. ಕಟ್ಟಿಮನಿ, ಎಲ್.ಕೆ. ಹಿರೇಮಠ, ಎಂ.ಎಲ್. ಕ್ವಾಟಿ, ಆನಂದ ಜೂಚನಿ, ಸಿದ್ಧು ಕರಬಾಶಟ್ಟರ್, ಕವಿತಾ ಕವಲೂರ, ಗೋಪಾಲ ರಾಯಬಾಗಿ, ಸಂಗಮೇಶ ಹುನಗುಂದ, ಮಂಜುನಾಥ ಯರಗೇರಿ, ಪ್ರೇಮಾ ಚುಂಚಾ, ಬಸಮ್ಮ ಚಿಲ್‌ಝರಿ ಹಾಗೂ ಮುರ್ತುಜಾ ಮಳಗಾವಿ, ಎಂ.ಎಸ್. ನಾಗರಾಳ, ಶ್ರೀಕಾಂತ್ ಪೂಜಾರ, ಸುನೀಲ್ ಬಂಡಿವಡ್ಡರ, ಗೀತಾ ಬದಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಂದರ್ಯ, ಕಾರ್ತಿಕ ಮತ್ತು ಎಲ್ಲ ವಿಭಾಗಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))