ವಿದ್ಯಾರ್ಥಿನಿಯರಿಗೆ ಚುಡಾಯಿಸುತ್ತಿರುವ ಪುಂಡರು: ಕ್ರಮಕ್ಕೆ ಒತ್ತಾಯ

| Published : Aug 18 2024, 01:53 AM IST

ಸಾರಾಂಶ

ದೇವರಾಜ್ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕೆಲ ಹುಡುಗರು ಚುಡಾಯಿಸುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಎಸ್ಎಫ್ಐ ತಾಲೂಕು ಸಮಿತಿಯಿಂದ ಡಿವೈಎಸ್ಪಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ಹೊಸಳ್ಳಿ ರಸ್ತೆಯಲ್ಲಿರುವ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕೆಲ ಹುಡುಗರು ಚುಡಾಯಿಸುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಎಸ್ಎಫ್ಐ ತಾಲೂಕು ಸಮಿತಿಯಿಂದ ಡಿವೈಎಸ್ಪಿಗೆ ಮನವಿ ಸಲ್ಲಿಸಲಾಯಿತು.

ವಿದ್ಯಾರ್ಥಿನಿಯರು ಬೆಳಗ್ಗೆ ಹಾಸ್ಟೆಲ್‌ನಿಂದ ಕಾಲೇಜಿಗೆ ಹೋಗುವಾಗ ಕೆಲವು ಪುಂಡರು ತಮ್ಮ ಮೊಬೈಲ್‌ಗಳಲ್ಲಿ ಪೋಟೋ ತೆಗೆದುಕೊಳ್ಳುವುದು, ವಿಡಿಯೋ ಮಾಡಿಕೊಂಡು ಇನ್‌ಸ್ಟಾಗ್ರಾಂದಲ್ಲಿ ಹಾಕುವುದು, ಬೈಕ್‌ಲ್ಲಿ ಜೋರಾಗಿ ಬಂದು ಹೆದರಿಸುವುದು, ಕಿರುಕುಳ ಕೊಡುತ್ತಾ ನಿತ್ಯ ಚುಡಾಯಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಗರದಲ್ಲಿ ವಿದ್ಯಾರ್ಥಿನಿಯತು ರಕ್ಷಣೆ ಇಲ್ಲದೆ ಭಯದ ವಾತಾವರಣದಲ್ಲಿ ಕಾಲೇಜಿಗೆ ಬರುವ ಪರಿಸ್ಥಿತಿ ಇದೆ. ನಗರದ ಹೊಸಹಳ್ಳಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕೂಡಲೇ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಹೊಸಳ್ಳಿ ರಸ್ತೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಕ್ಷಣೆ ಕೊಡಬೇಕು ಎಂದು ಎಸ್ಎಫ್ಐ ಕಾರ್ಯಕರ್ತರು ಒತ್ತಾಯಿಸಿದರು.

ಈ ಸಂದರ್ಭ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ತಾಲೂಕು ಅಧ್ಯಕ್ಷ ಗ್ಯಾನೇಶ್ ಕಡಗದ, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಬಾಲಾಜಿ, ಶರೀಫ್‌, ನಾಗರಾಜ್, ಮಾರುತಿ ಇದ್ದರು.ಮಳೆ ಹಾನಿ ಪರಿಶೀಲಿಸಿದ ಶಾಸಕ ಜನಾರ್ದನ ರೆಡ್ಡಿ:ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಹಾನಿಯಾದ ಅಮರ ಭಗತ್ ಸಿಂಗ್ ನಗರದ ಸ್ಥಳಗಳಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಪೌರಾಯುಕ್ತರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಆನೆಗೊಂದಿ ಗ್ರಾಮೀಣ ಭಾಗದ ಮಲ್ಲಾಪುರ, ರಾಂಪುರ ಹಾಗೂ ಇತರ ಮಳೆಯಿಂದಾಗಿ ಹಾನಿಗೊಳಗಾದ ಸ್ಥಳಗಳಿಗೆ ಶಾಸಕರು ಭೇಟಿ ನೀಡಿದರು. ಕೂಡಲೇ ಹಾನಿಯಾಗಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಪರಿಹಾರ ಕಲ್ಪಿಸುವಂತೆ ತಹಸೀಲ್ದಾರರಿಗೆ ಸೂಚನೆ ನೀಡಿದರು.ಇದೇ ಸಂದರ್ಭ ತಹಸೀಲ್ದಾರ ನಾಗರಾಜು, ಮುಖಂಡರಾದ ಮನೋಹರ ಗೌಡ, ದುರ್ಗಪ್ಪ ಅಗೋಲಿ, ಆನಂದ ಗೌಡ, ಮಂಜುನಾಥ್ ಕಲಾಲ್, ಯಮನೂರ್ ಚೌಡ್ಕಿ, ಪಂಪಣ್ಣ ನಾಯಕ್, ಮಲ್ಲಿಕಾರ್ಜುನ್, ಚಂದ್ರು ಹಿರೂರು, ಶಿವು ಆದೋನಿ, ರಾಘವೇಂದ್ರ, ಅಂಜನ ಗೌಡ, ಹನುಮನ ಗೌಡ, ಗಣೇಶ್ ಯಾದವ್ ಹಾಗೂ ಇತರರಿದ್ದರು.