ಜನಮನ ಸೆಳೆದ ಎತ್ತುಗಳ ತೆರೆಬಂಡಿ ಸ್ಪರ್ಧೆ

| Published : May 20 2024, 01:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮೂಡಲಗಿ: ಭಾವೈಕತೆಗೆ ಹೆಸರಾಗಿರುವ ಮೂಡಲಗಿ ಪಟ್ಟಣದ ಆರಾಧ್ಯ ದೈವ ಶ್ರೀ ಶಿವಬೋಧರಂಗ ಪುಣ್ಯರಾಧನೆ ನಿಮಿತ್ತ ಶ್ರೀ ಶಿವಬೋಧರಂಗ ಜಾತ್ರಾ ಕಮಿಟಿ ಆಶ್ರಯದಲ್ಲಿ ರವಿವಾರ ಮೂಡಲಗಿ ಶಿಕ್ಷಣ ಸಂಸ್ಥೆಯ ಕ್ರೀಡಾ ಮೈದಾನದಲ್ಲಿ ಅಪಾರ ಜನಸ್ತೋಮ ಮಧ್ಯೆ ಜರುಗಿದ ಎತ್ತುಗಳ ತೆರೆಬಂಡಿ ಸ್ಪರ್ಧೆ ಜನರ ಗಮನ ಸೆಳೆಯಿತು.

ತೆರೆಬಂಡಿ ಸ್ಪರ್ಧೆಯ 15 ಬಹುಮಾನಗಳಿಗೆ ಬೆಳಗಾವಿ, ಬಾಗಲಕೋಟ, ವಿಜಯಪೂರ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ 29 ಜೋಡಿ ಎತ್ತುಗಳು ಭಾಗವಹಿಸಿದ್ದವು. ಸ್ಫರ್ಧೆಯಲ್ಲಿ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಪ್ರಸನ್ನ ಎತ್ತುಗಳು 858 ಅಡಿ ಸಾಗಿ ಪ್ರಥಮ ಬಹುಮಾನ 40 ಸಾವಿರ ಪಡೆದವು. ಉದಗಟ್ಟಿಯ ಉದ್ದಮ್ಮದೇವಿ ಪ್ರಸನ್ನ ಎತ್ತುಗಳು 831.6 ಅಡಿ ಸಾಗಿ ದ್ವಿತೀಯ ಬಹುಮಾನ 30 ಸಾವಿರ ಪಡೆದವು. ಕಮಲದಿನ್ನಿಯ ಪಾಂಡು ತಿಮ್ಮಣ್ಣ ಕುಲಗುಡ ಎತ್ತುಗಳು 819.7 ಅಡಿ ಸಾಗಿ ತೃತೀಯ ಬಹುಮಾನ 25 ಸಾವಿರ ಪಡೆದವು. ಹುಲಜಯಂತಿಯ ಮಾಳಿಂಗರಾಯ ಪ್ರಸನ್ನ ಎತ್ತುಗಳು 819.7 ಅಡಿ ಸಾಗಿ ಚಥುರ್ತ ಬಹುಮಾನ 20 ಸಾವಿರ ಪಡೆದುಕೊಂಡವು. ತಳಕಟ್ನಾಳ, ಮೇಳವಂಕಿ, ನಲ್ಲಾನಟ್ಟಿ, ಮಸಗುಪ್ಪಿ, ವಡೇರಟ್ಟಿ, ಕಮಲದಿನ್ನಿ, ವಂಟಗೋಡಿ, ಇಟ್ನಾಳ, ನಾಗನೂರ, ಬೆಂಡವಾಡ ಎತ್ತುಗಳು ಕ್ರಮವಾಗಿ ಐದರಿಂದ ಹದಿನೈದು ಸ್ಥಾನದವರೆಗೆ ಬಹುಮಾನಗಳನ್ನು ಪಡೆದವು.ಈ ಮುಂಚೆ ಶ್ರೀ ಶಿವಬೋಧರಂಗ ಮಠದಲ್ಲಿ ಎತ್ತುಗಳಿಗೆ ಶ್ರೀ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ, ಶ್ರೀ ಶ್ರೀಧರಬೋಧ ಸ್ವಾಮೀಜಿಗಳು ಎತ್ತುಗಳಿಗೆ ಪೂಜೆ ಸಲ್ಲಿಸಿ ಗೌರವ ಸೂಚಿಸಿದರು. ಎಲ್ಲ ಬಹುಮಾನಗಳನ್ನು ಜಾತ್ರಾ ಕಮಿಟಿಯಿಂದ ವಿತರಣೆ ಮಾಡಲಾಯಿತು.

ತೆರೆಬಂಡಿ ಸ್ಪರ್ಧೆಯಲ್ಲಿ ಪ್ರೇಕ್ಷಕರು ಸಿಳ್ಳೆ ಹೊಡೆದು, ಕೇಕೆ ಹಾಕುವ ಮೂಲಕ ಹುರುದುಂಬಿಸುತ್ತಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ಸ್ಪರ್ಧೆಯಲ್ಲಿ ಭಾಗವಹಿಸಿ ಕಣ್ತುಂಬಿಕೊಂಡರು.