ಸಾರಾಂಶ
ಕಳೆದ ೧೦ ದಿನದಿಂದ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಶನಿವಾರಕ್ಕೆ ೧೧ ದಿನಕ್ಕೇ ಕಾಲಿಟ್ಟಿದ್ದು, ಸೆ.23ರ ಸೋಮವಾರ ಗುಂಡ್ಲುಪೇಟೆಯಲ್ಲಿ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಚಳವಳಿ ನಡೆಸಲು ಜಿಲ್ಲಾ ರೈತ ಸಂಘ ನಿರ್ಧರಿಸಿದೆ.
೧೦ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮುಂಗಾರು ಮಳೆ, ಗಾಳಿಗೆ ಬೆಳೆ ನಷ್ಟ ತುಂಬಿಲ್ಲ, ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಮಾಡದಿರುವುದನ್ನು ಖಂಡಿಸಿ ಕಳೆದ ೧೦ ದಿನದಿಂದ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಶನಿವಾರಕ್ಕೆ ೧೧ ದಿನಕ್ಕೇ ಕಾಲಿಟ್ಟಿದ್ದು, ಸೆ.23ರ ಸೋಮವಾರ ಪಟ್ಟಣದಲ್ಲಿ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಚಳವಳಿ ನಡೆಸಲು ಜಿಲ್ಲಾ ರೈತ ಸಂಘ ನಿರ್ಧರಿಸಿದೆ.
ಕಳೆದ ೯ ದಿನಗಳಿಂದಲೂ ಪಟ್ಟಣದ ಪ್ರಜಾ ಸೌಧದ ಆವರಣದಲ್ಲಿ ರೈತ ಸಂಘ ಅಹೋರಾತ್ರಿ ಧರಣಿ ನಡೆಸುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು ಮೌನ ವಹಿಸಿರುವುದನ್ನು ಖಂಡಿಸಿ ಸೆ.೨೩ ಸೋಮವಾರ ರೈತರು ಬೀದಿಗಿಳಿದು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ರೈತರು ತೀರ್ಮಾನಿಸಿದ್ದಾರೆ ಎಂದು ಪ್ರತಿಭಟನಾ ಸ್ಥಳದಲ್ಲಿ ಜಿಲ್ಲಾಡಳಿತ ವಿರುದ್ಧ ರೈತ ಸಂಘ ಆಕ್ರೋಶ ಹೊರಹಾಕಿದೆ.ರೈತರೇನು ಸಂವಿಧಾನದಡಿಯಲ್ಲಿ ಹಕ್ಕುಗಳ ಕೇಳಲು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ರೈತರ ಪಾಲಿಗೆ ಇದ್ದು ಇಲ್ಲದಂತಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು,ಸಂಸದರೂ ಕೂಡ ಚಕಾರ ಎತ್ತದೆ ಮೌನ ವಹಿಸಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದರು. ರೈತ ಸಂಘದ ಹಂಗಳ ದಿಲೀಪ್, ಮಾಧು, ಭರತ್ ಸೇರಿದಂತೆ ರೈತರು ಭಾಗವಹಿಸಿದ್ದರು.