ಸಾರಾಂಶ
ಇಳಕಲ್ಲ: ತಾಲೂಕಿನ ತುಂಬ ಗ್ರಾಮದ ನಿಂಗನಗೌಡ ಅಗಸಿಮುಂದಿನ ಎಂಬ ರೈತನ ಎರಡು ಎತ್ತುಗಳು ಸೋಮವಾರ ಕಲುಷಿತ ನೀರು ಸೇವಿಸಿ ಮೃತಪಟ್ಟಿವೆ.
ಇಳಕಲ್ಲ: ತಾಲೂಕಿನ ತುಂಬ ಗ್ರಾಮದ ನಿಂಗನಗೌಡ ಅಗಸಿಮುಂದಿನ ಎಂಬ ರೈತನ ಎರಡು ಎತ್ತುಗಳು ಸೋಮವಾರ ಕಲುಷಿತ ನೀರು ಸೇವಿಸಿ ಮೃತಪಟ್ಟಿವೆ.ರಾತ್ರಿ ಎತ್ತುಗಳಿಗೆ ಮುಸುರಿ ನೀರು ಕುಡಿಸಲಾಗಿತ್ತು. ಕುಡಿದ ನಂತರ ಎತ್ತುಗಳು ಒದ್ದಾಡಲು ಪ್ರಾರಂಭಿಸಿದ್ದು, ರಾತ್ರಿಯೇ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದರೂ ಉಳಿಯಲಿಲ್ಲ. ಮುಸುರಿ ನೀರಿನಲ್ಲಿ ವಿಷ ಹಾಕಿರಬಹುದು ಎಂದು ಶಂಕಿಸಿದ್ದಾರೆ. ಮೃತ ಎತ್ತುಗಳನ್ನು ಟ್ರ‍್ಯಾಕ್ಟರ್ ನಲ್ಲಿ ಗ್ರಾಮಸ್ಥರೆಲ್ಲ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಿ ಅಂತಿಮ ಸಂಸ್ಕಾರ ನಡೆಸಿದರು.