ಬಸ್ ಸೌಕರ್ಯ: ಮಹಿಳೆ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ

| Published : Nov 25 2023, 01:15 AM IST

ಸಾರಾಂಶ

ರಾಮನಗರ: ಮಹಿಳಾ ಪ್ರಯಾಣಿಕರೊಬ್ಬರು ರಾಮನಗರದಿಂದ ಬೆಂಗಳೂರಿಗೆ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಮನವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಂದಿಸಿ, ಔದಾರ್ಯತೆ ಮೆರೆದ ಪ್ರಸಂಗ ನಡೆಯಿತು.

ರಾಮನಗರ: ಮಹಿಳಾ ಪ್ರಯಾಣಿಕರೊಬ್ಬರು ರಾಮನಗರದಿಂದ ಬೆಂಗಳೂರಿಗೆ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ ಮನವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಂದಿಸಿ, ಔದಾರ್ಯತೆ ಮೆರೆದ ಪ್ರಸಂಗ ನಡೆಯಿತು.

ಮಹಿಳಾ ಪ್ರಯಾಣಿಕರೊಬ್ಬರು ರಾಮನಗರದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆಗಾಗಿ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರಿಗೆ ಮೊಬೈಲ್ ಕರೆ ಮಾಡಿದಾಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. 20 ನಿಮಿಷಗಳ ನಂತರ ಅದೇ ಮೊಬೈಲ್ ನಂಬರ್ ಗೆ ಖುದ್ದು ಸಾರಿಗೆ ಸಚಿವರೇ ಕರೆ ಮಾಡಿ ಬಸ್ ಬಂತೇನಮ್ಮ? ಎಂದು ವಿಚಾರಿಸಿದರು‌. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ರಾಮನಗರದ ಸಮಸ್ಯೆ ಬಗ್ಗೆ(ಬಸ್ ಕೆಟ್ಟು ನಿಲ್ಲುವುದು, ಹಳೆಯ ಬಸ್ ಇತ್ಯಾದಿ) ಸಚಿವರಿಗೆ ವಿವರಸಿದಾಗ ಇನ್ನೊಂದು ತಿಂಗಳಲ್ಲಿ ರಾಮನಗರಕ್ಕೆ 20 ಹೊಸ ಬಸ್ ಕೊಡುವ ಭರವಸೆ ನೀಡಿದರು. ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸಿ, ಶಾಂತ ರೀತಿಯಿಂದ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಾರಿಗೆ ಸಚಿವರಿಗೆ ಮಹಿಳೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಆ ಮಹಿಳಾ ಪ್ರಯಾಣಿಕರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕರೆ ಮಾಡಿರುವ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದಲೂ ಸಚಿವರ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.