ಸಾರಾಂಶ
ಕೊಲ್ಲಾಪುರ, ಸೊಲ್ಲಾಪುರ, ಪುಣೆಗೆ ಮಹಾರಾಷ್ಟ್ರದ ಗಡಿವರೆಗೆ ಮಾತ್ರ ಬಸ್ ಬಿಡಲಾಗುತ್ತದೆ. ಅಲ್ಲಿಂದ ಪ್ರಯಾಣಿಕರು ಮಹಾರಾಷ್ಟ್ರಕ್ಕೆ ಹೋಗಬಹುದು ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಕೆಕೆ ಲಮಾಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೊಲ್ಲಾಪುರ, ಸೊಲ್ಲಾಪುರ, ಪುಣೆಗೆ ಮಹಾರಾಷ್ಟ್ರದ ಗಡಿವರೆಗೆ ಮಾತ್ರ ಬಸ್ ಬಿಡಲಾಗುತ್ತದೆ. ಅಲ್ಲಿಂದ ಪ್ರಯಾಣಿಕರು ಮಹಾರಾಷ್ಟ್ರಕ್ಕೆ ಹೋಗಬಹುದು ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಕೆ.ಕೆ. ಲಮಾಣಿ ಹೇಳಿದರು.ಜಿಲ್ಲೆಯ ಇಳಕಲ್ ಡಿಪೋ ಬಸ್‌ಗೆ ಮಸಿ ಬಳೆದ ಪ್ರಕರಣದ ನಂತರ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಮಾಹಿತಿಯನ್ನು ಸಾರಿಗೆ ಸಚಿವರಿಗೆ ನೀಡಿದ್ದೇವೆ. ನಮ್ಮ ಡಿಪೋ ಬಸ್‌ಗೆ ಹಾನಿಯಾಗಿಲ್ಲ. ಆದರೆ ಬೋರ್ಡ್‌ಗೆ ಮಸಿ ಬಳಿದಿದ್ದಾರೆ. ಜೈ ಮಹಾರಾಷ್ಟ್ರ ಅಂತ ಘೋಷಣೆ ಹಾಕಿಸಿದ್ದಾರೆ. ಮಹಾರಾಷ್ಟ್ರದಿಂದ ಮೀರಜ್ ಹೊರತುಪಡಿಸಿ, ಜಿಲ್ಲೆಯ ಎಲ್ಲ ಬಸ್ ವಾಪಸ್ ತರಿಸಿಕೊಂಡಿದ್ದೇವೆ. ಎಲ್ಲವೂ ಮರಳಿ ಬರುತ್ತಿವೆ ಎಂದು ತಿಳಿಸಿದರು.
ಸೋಮವಾರ ಬೆಳಗ್ಗೆ ಹಾಗೂ ಮಧ್ಯಾಹ್ನ ಸೊಲ್ಲಾಪುರದಲ್ಲಿ ಎರಡು ಬಸ್‌ಗಳ ಬೋರ್ಡ್‌ಗೆ ಮಸಿ ಬಳೆದಿದ್ದಾರೆ. ಆದರೆ ಬೇರೆ ಯಾವುದೇ ಹಾನಿಯಾಗಿಲ್ಲ, ಬೋರ್‌ಡೆಗೆ ಮಸಿ ಬಳೆದು ಜೈ ಮಹಾರಾಷ್ಟ್ರ ಅಂತ ನಮ್ಮ ಚಾಲಕರ ಹತ್ತಿರ ಹೇಳಿಸಿ ಎಚ್ಚರಿಕೆ ಕೊಟ್ಟಿದ್ಧಾರೆ. ಅಲ್ಲಿಂದ ಬಸ್ ಸುರಕ್ಷಿತವಾಗಿ ವಾಪಸ್ ಬರುತ್ತಿವೆ. ನಾವು ನಮ್ಮ ವಿಭಾಗದಿಂದ ಪರಿಸ್ಥಿತಿ ತಿಳಿಯಾಗುವವರೆಗೂ ಸೊಲ್ಲಾಪುರಕ್ಕೆ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ ಎಂದರು.ಬೆಳಗ್ಗೆ ಹತ್ತರಿಂದ ಮಿರಜ್ ಹೋಗುವ ಬಸ್ ಬಂದ್ ಮಾಡಲಾಗಿತ್ತು. ನಂತರ ಅಲ್ಲಿಯ ಪೊಲೀಸರು ಕಂಟ್ರೋಲರ್ ಮಾಹಿತಿ ಮೇರೆಗೆ ಬಂದೋಬಸ್ತ್ ಮಾಡಿದ್ದೇವೆ. ಯಾವುದೇ ತೊಂದರೆಯಾಗುವುದಿಲ್ಲ ಅಂತ ಹೇಳಿದ್ದಕ್ಕೆ, ವಾಪಸ್ ಮೀರಜ್ ಸಂಚಾರ ಶುರು ಮಾಡಿದ್ದೇವೆ. ಪುಣೆ ಕೊಲ್ಲಾಪುರ, ಸೊಲ್ಲಾಪುರ ಕಡೆ ಸಂಚಾರ ಬಂದ್ ಇದೆ ಎಂದು ಹೇಳಿದರು.
ಜಿಲ್ಲೆಯಿಂದ ನಿತ್ಯ ಒಟ್ಟು 81 ಬಸ್‌ಗಳು ಮಹಾರಾಷ್ಟ್ರಕ್ಕೆ ಹೋಗುತ್ತವೆ. ಮೀರಜ್ 40 ಬಸ್ ಹೊರತುಪಡಿಸಿ, 41 ಬಸ್‌ಗಳ ಸಂಚಾರ ಪರಿಸ್ಥಿತಿ ತಿಳಿಯಾಗುವವರೆಗೂ ಬಂದ್ ಮಾಡಿದ್ದೇವೆ. ಇಂದು ಎರಡು ಇಳಕಲ್ ಡಿಪೋ ಬಸ್‌ಗೆ ಮಸಿ ಬಳಿಯಲಾಗಿದೆ. ಎರಡೂ ಬಸ್ ಬೆಳಗ್ಗೆ ಇಳಕಲ್‌ನಿಂದ ಹೋಗಿದ್ದವು. ನಾವು ನಮ್ಮ ಇಲಾಖೆಯಿಂದ ಕೇಂದ್ರ ಕಚೇರಿಗೆ ರಿಪೋರ್ಟ್ ಕಳಿಸಿ ಕೊಡುತ್ತೇವೆ. ಪ್ರತ್ಯೇಕವಾಗಿ ಘಟನೆ ಬಗ್ಗೆ ಕೇಸ್ ಏನು ಮಾಡಿಲ್ಲ. ಯಾರು ಮಾಡಿದರೂ ಏನು ಮಾಡಿದರು ಅಂತ ಗೊತ್ತಾಗುವುದಿಲ್ಲ. ಬಸ್ ವಾಪಸ್ ಬಂದ ಮೇಲೆ ಕೇಂದ್ರ ಕಚೇರಿಗೆ ವರದಿ ಕಳಿಸುತ್ತೇವೆ. ಪರಿಸ್ಥಿತಿ ತಿಳಿಯಾಗುವವರೆಗೂ ಕೊಲ್ಲಾಪುರ, ಸೊಲ್ಲಾಪುರ, ಪುಣೆ ಬಸ್ ಕಾರ್ಯಾಚರಣೆ ಇಲ್ಲ. ಪ್ರಯಾಣಿಕರು ಸಹಕರಿಸಬೇಕು ಎಂದ ಅಧಿಕಾರಿ ಲಮಾಣಿ ತಿಳಿಸಿದರು.