ಕನ್ನಡಪ್ರಭ ವಾರ್ತೆ ಮುಧೋಳಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಸ್ಕೂಟಿಯ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಕೂಟಿ ರಸ್ತೆಯಲ್ಲೇ ಧಗ ಧಗನೆ ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನಗೊಂಡ ಘಟನೆ ಮುಗಳಖೋಡ ಸಮೀಪದ ಮುಧೋಳ-ಮಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಮುಧೋಳ
ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಸ್ಕೂಟಿಯ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಕೂಟಿ ರಸ್ತೆಯಲ್ಲೇ ಧಗ ಧಗನೆ ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನಗೊಂಡ ಘಟನೆ ಮುಗಳಖೋಡ ಸಮೀಪದ ಮುಧೋಳ-ಮಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.ಮುಧೋಳ ನಗರದ ಪವನಚುಕ್ಕಿ ನಿವಾಸಿ ನವಿನ ಹನುಮಂತ ಗೋರ್ಖಾ(20) ಮೃತ.
ಮುಧೋಳದಿಂದ ಮಹಾಲಿಂಗಪುರ ಕಡೆ ಟಿವಿಎಸ್ ಸ್ಕೂಟಿ ತೆಗೆದುಕೊಂಡು ಹೊರಟಿದ್ದಾಗ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಸ್ಕೂಟಿಗೆ ಬೆಂಕಿ ಹತ್ತಿ ಧಗ ಧಗ ಉರಿದಿದ್ದು ಸ್ಕೂಟಿ ಸವಾರ ಸಜೀವ ದಹನಗೊಂಡಿದ್ದಾನೆ. ಮೃತನ ತಾಯಿ ಪದ್ಮಾವತಿ ಗೋರ್ಖಾ ಅವರು ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.