ಹಾರೋಹಳ್ಳಿ: ಪ್ರಯಾಣಿಕರ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಡುವನಹಳ್ಳಿ ಗೇಟ್ ಜೈನ್ ಕಾಲೇಜಿನಿಂದ ಬನಶಂಕರಿ ಬಸ್ ನಿಲ್ದಾಣಕ್ಕೆ ಬಿಎಂಟಿಸಿ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.

ಹಾರೋಹಳ್ಳಿ: ಪ್ರಯಾಣಿಕರ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಡುವನಹಳ್ಳಿ ಗೇಟ್ ಜೈನ್ ಕಾಲೇಜಿನಿಂದ ಬನಶಂಕರಿ ಬಸ್ ನಿಲ್ದಾಣಕ್ಕೆ ಬಿಎಂಟಿಸಿ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.

ಬಳಿಕ ಮಾತನಾಡಿ ಶಾಸಕರು, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಮುಂದಿಟ್ಟ ಬೇಡಿಕೆ ಆಧಾರದ ಮೇಲೆ ಬನಶಂಕರಿಯಿಂದ ಜೈನ್ ಕಾಲೇಜು ಹಾಗೂ ಜೈನ್ ಕಾಲೇಜಿನಿಂದ ಬನಶಂಕರಿಗೆ ಪ್ರತಿ 45 ನಿಮಷಕ್ಕೆ ಒಂದು ಸಾರಿಗೆ ಬಸ್ಸು ಪ್ರಯಾಣಿಸಲಿದೆ. ಶಾಲಾ ಕಾಲೇಜಿಗೆ ತೆರಳುವವರು ಅಲ್ಲದೇ ವಿವಿಧ ಕೆಲಸಗಳಿಗೆ ತೆರಳುವ ಪ್ರಯಾಣಿಕರಿಗೆ ಸಕಾಲಕ್ಕೆ ಬಸ್ಸುಗಳಲ್ಲಿ ಪ್ರಯಾಣಿಸುವ ಅನುಕೂಲ ಕಲ್ಪಿಸಲಾಗಿದೆ ಎಂದರು.

ಬನಶಂಕರಿ ಸಾರಿಗೆ ಡಿಪೋ ವ್ಯವಸ್ಥಾಪಕ ನಾಗೇಶ್ ಮಾತನಾಡಿ, ಪ್ರಯಾಣಿಕರ ದಟ್ಟಣೆ ನಿರ್ವಹಿಸುವುದಕ್ಕಾಗಿ 4 ಸಾರಿಗೆ ಬಸ್ಸುಗಳ ಸಂಚಾರ ಕಲ್ಪಿಸಲಾಗಿದೆ. ವೇಗದೂತ ಮಾದರಿಯಲ್ಲಿಯೇ ಈ ಬಸ್ಸುಗಳು ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಲಿವೆ. ಬನಶಂಕರಿಯಿಂದ ಹೊರಟು ಕೋಣನಕುಂಟೆ ಕ್ರಾಸ್, ತಲಘಟ್ಟಪುರ, ರೇಷ್ಮೆ ಸಂಸ್ಥೆ, ಕಗ್ಗಲಿಪುರ, ಹಾರೋಹಳ್ಳಿ, ದಯಾನಂದ ಸಾಗರ್ ಆಸ್ಪತ್ರೆಯಿಂದ ಜೈನ್ ಕಾಲೇಜ್ ವರೆಗೂ ಬಸ್ ಸಂಚಾರ ಇರುತ್ತದೆ. ಈ ಸ್ಥಳದಲ್ಲಿ ಮಾತ್ರ ಪ್ರಯಾಣಿಕರು ಹತ್ತುವುದು ಮತ್ತು ಇಳಿಯುವುದು ಮಾಡಬೇಕು ಎಂದರು.

ಜಿಲ್ಲಾ ರಾಜ್ಯ ಸಾರಿಗೆ ನಿಯಂತ್ರಕ ಪುರುಷೋತ್ತಮ್, ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆಶಾ ಲತಾ, ಕಾಂಗ್ರೆಸ್ ಮುಖಂಡರಾದ ಅಶೋಕ್, ಎಚ್.ಎಸ್. ಹರೀಶ್ ಕುಮಾರ್, ಕೀರಣಗೆರೆ ಜಗದೀಶ್, ಮೋಹನ್ವೊಳ್ಳ, ಲೋಕೇಶ್ (ಸುರೇಶ್), ಕೇಬಲ್ ರವಿ, ಜೈನ್ ವಿಶ್ವವಿದ್ಯಾಲಯದ ಮುಖ್ಯಸ್ಥ ಪಾರ್ಶ್ವನಾಥ್, ಡಾ.ವೆಂಕಟೇಶ್ವರನ್, ಡಾ.ಬೆನಕಪ್ರಸಾದ್ ಸೇರಿದಂತೆ ಹಲವರು ಹಾಜರಿದ್ದರು.

ಆರೋಗ್ಯ ತಪಾಸಣಾ ಶಿಬಿರ: ಜೈನ್ ವಿಶ್ವವಿದ್ಯಾಲಯ ಹಾಗು ರಾಮನಗರ ಚಂದ್ರು ಡಯಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಕಾಲೇಜು ಉಪನ್ಯಾಸಕರು ಹಾಗು ಸಿಬ್ಬಂಧಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿಗೆ ತಪಾಸಣೆ ನಡೆಸಲಾಯಿತು. ಮಧುಮೇಹ, ರಕ್ತದೊತ್ತಡ, ನೇತ್ರತಪಾಸಣೆ, ಇಸಿಜಿ ತಪಾಸಣೆಗಳಿಗೆ ಒಳಪಟ್ಟವರಿಗೆ ವೈದ್ಯರಿಂದ ಸೂಕ್ತ ಸಲಹೆಗಳನ್ನು ನೀಡಲಾಯಿತು.

13ಕೆಆರ್ ಎಂಎನ್ 9.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಜೈನ್ ಎಂಜಿನಿಯರಿಂಗ್ ಕಾಲೇಜು ಮುಂಭಾಗ ಬನಶಂಕರಿಯಿಂದ ಕಾಲೇಜುವರೆಗೆ ಒದಗಿಸಿರುವ ಬಿಎಂಟಿಸಿ ಬಸ್ ಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.