ಬಸ್‌ ನಿಲ್ದಾಣ ಶುಲ್ಕ ವಸೂಲು, ಸಂತೆ ಹರಾಜು ಮುಂದೂಡಿಕೆ

| Published : Mar 21 2025, 12:31 AM IST

ಬಸ್‌ ನಿಲ್ದಾಣ ಶುಲ್ಕ ವಸೂಲು, ಸಂತೆ ಹರಾಜು ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ಗುರುವಾರ ಬಸ್ ನಿಲ್ದಾಣ ಶುಲ್ಕ ವಸೂಲಿ, ವಾರದ ಸಂತೆಯ ಬಹಿರಂಗ ಹರಾಜು ಪ್ರಕ್ರಿಯೆ ಸಭೆ ನಡೆದಿದ್ದು, ವಾದ-ವಿವಾದಗಳ ಹಿನ್ನೆಲೆ ಸಭೆ ಮುಂದೂಡಲಾಯಿತು.

- ಚನ್ನಗಿರಿ ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಅಧ್ಯಕ್ಷತೆ ಸಭೆಯಲ್ಲಿ ಮೂಡದ ಒಮ್ಮತ

- - - - - -

- ಬಸ್ ನಿಲ್ದಾಣ ಹೊಸದಾಗಿ ನಿರ್ಮಿಸಿದ ಮೇಲೆಯೇ ಶುಲ್ಕ ವಸೂಲಿ ಹರಾಜು ನಡೆಸಲು ಹಾಲೇಶ್‌ ಸಲಹೆ

- ಅಧಿಕಾರಿಗಳು ಒತ್ತಡಕ್ಕೆ ಮಣಿದು ಹರಾಜು ಮುಂದೂಡಲು ಯತ್ನ: ಪಟ್ಲಿ ನಾಗರಾಜ, ನಂಜುಂಡಪ್ಪ, ಚಿಕ್ಕಣ್ಣ ಆಕ್ಷೇಪ

- - -ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ಗುರುವಾರ ಬಸ್ ನಿಲ್ದಾಣ ಶುಲ್ಕ ವಸೂಲಿ, ವಾರದ ಸಂತೆಯ ಬಹಿರಂಗ ಹರಾಜು ಪ್ರಕ್ರಿಯೆ ಸಭೆ ನಡೆದಿದ್ದು, ವಾದ-ವಿವಾದಗಳ ಹಿನ್ನೆಲೆ ಸಭೆ ಮುಂದೂಡಲಾಯಿತು.

ಸಭೆ ಆರಂಭ ಆಗುತ್ತಿದ್ದಂತೆಯೇ ಪುರಸಭೆ ಸದಸ್ಯ ಹಾಲೇಶ್ ಮಾತನಾಡಿ, ಬಸ್ ನಿಲ್ದಾಣ ಈಗಾಗಲೇ ಶಿಥಿಲಾವಸ್ಥೆಯಲ್ಲಿದೆ. ಈ ಬಸ್ ನಿಲ್ದಾಣ ಹೊಸದಾಗಿ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಂದಿದೆ. ಬಸ್ ನಿಲ್ದಾಣ ಹೊಸದಾಗಿ ನಿರ್ಮಿಸಿದ ಮೇಲೆಯೇ ಶುಲ್ಕ ವಸೂಲಿ ಹರಾಜು ಮಾಡೋಣ. ಈಗ ವಾರದ ಸಂತೆ ಮಾತ್ರವೇ ಹರಾಜು ಮಾಡೋಣ ಎಂದು ಸಭೆ ಗಮನಕ್ಕೆ ತಂದರು.

ಆಗ ಸದಸ್ಯರಾದ ಪಟ್ಲಿ ನಾಗರಾಜ್, ನಂಜುಂಡಪ್ಪ, ಚಿಕ್ಕಣ್ಣ ಮಾತನಾಡಿ, ಬಸ್ ನಿಲ್ದಾಣದ ಪುನರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಹೇಳುತ್ತೀರಿ. ಇದುವರೆಗೂ ಯಾವ ಟೆಂಡರ್‌ದಾರರು ಟೆಂಡರ್‌ ಹಾಕಲು ಮುಂದೆ ಹಾಕಿಲ್ಲ. ಬಸ್ ನಿಲ್ದಾಣದ ಮೇಲ್ಛಾವಣಿಗಳು ಹಾಳಾಗಿ 2 ವರ್ಷಗಳೇ ಕಳೆಯುತ್ತಿದೆ. ಆದರೆ, ಇದುವರೆಗೂ ದುರಸ್ತಿಪಡಿಸಲು ಆಗಿಲ್ಲ. ಹೀಗಿರುವಾಗ ಹೊಸ ಬಸ್ ನಿಲ್ದಾಣ ನಿರ್ಮಾಣವಾಗಿಲ್ಲ. ಪುರಸಭೆ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ಹರಾಜು ಪ್ರಕ್ರಿಯೆ ಮುಂದೂಡಲು ಪ್ರಯತ್ನಿಸುತ್ತಿದ್ದಾರೆ, ಇದು ಸರಿಯಲ್ಲ. ಹರಾಜು ಮಾಡುವುದಾದರೆ ವಾರದ ಸಂತೆ ಮತ್ತು ಬಸ್ ನಿಲ್ದಾಣ ಎರಡನ್ನು ಹರಾಜು ಮಾಡಿ. ಇಲ್ಲವಾದರೆ ಪುರಸಭೆ ವತಿಯಿಂದಲೇ ವಸೂಲಾತಿ ಮಾಡಿ ಎಂದು ಸಲಹೆ ನೀಡಿದರು.

ಆಗ ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಬಿಡ್‌ದಾರರನ್ನು ಕರೆದು ಹರಾಜು ಪ್ರಕ್ರಿಯೆ ನಡೆಸಬೇಕೋ, ಬೇಡವೋ ಎಂದು ಬೀಡ್‌ದಾರರನ್ನು ಕೇಳಿದರು. ಆಗ ಬೀಡ್‌ದಾರರು ಹರಾಜು ಮಾಡುವುದಾದರೆ ಬಸ್ ನಿಲ್ದಾಣ ಮತ್ತು ವಾರದ ಸಂತೆ ಎರಡನ್ನೂ ಮಾಡಿ. ಇಲ್ಲವಾದರೆ ಹರಾಜು ಪ್ರಕ್ರಿಯೆ ಮಂದೂಡಿ ಎಂದು ಹೇಳಿದರು. ಆಗ ಪುರಸಭೆ ಅಧ್ಯಕ್ಷರು ಹರಾಜು ಪ್ರಕ್ರಿಯೆ ಮಂದೂಡಿದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಸರ್ವಮಂಗಳಮ್ಮ, ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಕಂದಾಯ ಅಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಸದಸ್ಯರು ಹಾಜರಿದ್ದರು.

- - - -20ಕೆಸಿಎನ್‌ಜಿ2.ಜೆಪಿಜಿ:

ಚನ್ನಗಿರಿ ಪಟ್ಟಣದ ಪುರಸಭೆ ಆವರಣದಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಸಭೆ ನಡೆಯಿತು.