ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಳ ಗಡೆಯಿಂದಾಗಿ ಕುಂಠಿತವಾಗಿರುವ ವ್ಯಾಪರ ವಹಿವಾಟು ಚೇತರಿಸಿಕೊಳ್ಳುಲು, ಒಂದೇ ಸೂರಿನಡಿ ಎಲ್ಲ ವ್ಯವಸ್ಥೆ ಕಲ್ಪಿಸಲು ನವನಗರದ ಯೂನಿಟ್ 3ರಲ್ಲಿ 250 ಎಕರೆ ವ್ಯಾಪ್ತಿ ಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು ಎಂದು ಬಾಗಲಕೋಟೆ ವಿವಿಧ ವ್ಯಾಪಾರಸ್ಥರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ವ್ಯಾಪಾರಸ್ಥರು ಬಿಟಿ ಡಿಎ ಸೂಪರಿಡೆಂಟ್ ಇಂಜಿನಿಯರ್ ವಿಜಯಕುಮಾರ ಹೆಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಿದರು.ಬಾಗಲಕೋಟೆ ನಗರವು 1984ರಿಂದ ಮುಳಗಡೆ ನಗರವೆಂದು ಹಣೆಪಟ್ಟಿ ಹೊಂದಿ ಅಂದಿನಿಂದ ಇವತ್ತಿನವರೆಗೆ ವ್ಯಾಪಾರ ವಹಿವಾಟು ಕ್ಷೀಣಿಸುತ್ತಾ ಬಂದಿದ್ದು, ವ್ಯಾಪಾರಸ್ಥರ ಪರಿಸ್ಥಿತಿ ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತಾಗಿದೆ. ನಗರವನ್ನು ಹಂತ, ಹಂತವಾಗಿ ಸ್ಥಳಾಂತರಿಸುವ ಕಾರ್ಯ ಮಾಡುತ್ತಿಲ್ಲ. ನವನಗರದ ಈಗಾಗಲೇ ನಿರ್ಮಿಸಿದ ಮಾರುಕಟ್ಟೆಗಳು ಸಂಪೂರ್ಣ ವಿಫಲವಾಗಿದೆ. ಅವ್ಯವಸ್ಥೆಯಿಂದ ಕೂಡಿವೆ. ಸರಕು, ಸಾಗಾಣಿಕ ವಾಹನಗಳು ಸಂಚಾರಕ್ಕೂ ರಸ್ತೆಗಳು ಇಕ್ಕಟ್ಟಾಗಿವೆ. ತರಕಾರಿ, ಕಿರಾಣಿ, ಬಟ್ಟೆ ಸೇರಿದಂತೆ ಎಲ್ಲವು ಬೇರೆ ಬೇರೆಯಾಗಿವೆ. ಒಂದೇ ಸೂರಿನಡಿ ಇಲ್ಲದ ಪರಿಣಾಮ ಅಲ್ಲಿ ವ್ಯಾಪಾರ ವಹಿವಾಟಿಗೆ ಪೂರಕ ವಾತಾವರಣ ಇಲ್ಲ. ಅವೈಜ್ಞಾನಿಕವಾಗಿ ಸೆಕ್ಟರಗಳನ್ನು ನಿರ್ಮಿಸಿದ್ದಾರೆ. ನಿರ್ಮಾಣ ಮಾಡುವುದಕ್ಕಿಂತ ಮುನ್ನ ವ್ಯಾಪಾರಸ್ಥರ ಜೊತೆ ಚರ್ಚೆ ನಡೆಸಿಲ್ಲ. ಸಂಘ, ಸಂಸ್ಥೆಗಳೊಂದಿಗೆ ಯೋಜನೆಗೆ ಬಗ್ಗೆ ಮಾಹಿ ತಿ ನೀಡಿಲ್ಲ. ಸಿಡ್ಯಾಕ ವರದಿಯ ಕೇವಲ 524 ಮೀ ವರೆಗೆ ಮಾತ್ರ ವ್ಯಾಪಾರಸ್ಥರನ್ನು ಸ್ಥಳಾಂತರಿಸಿ ಮಳಿಗೆಗಳಿಗೆ ಹಕ್ಕುಪತ್ರ ನೀಡಿದೆ. ಇನ್ನೂ ಶೇ.40 ರಷ್ಟು ವ್ಯಾಪಾರಸ್ಥರು ಹಳೆ ನಗರದಲ್ಲಿಯೇ ಉಳಿದಿದ್ದಾರೆ. ರಾಯಚೂರ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 376 ಈ ರಸ್ತೆಯ ಅಗಲೀಕರಣ ನೆಪದಿಂದ ನೂರಾರು ವ್ಯಾಪಾರಸ್ಥರು ತಮ್ಮ ವಹಿವಾಟು ಕಳೆದುಕೊಂಡು ಬಿದೀಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಇವರೆಲ್ಲರನ್ನೂ ಸೇರಿಸಿ ಒಂದೇ ಜಾಗದಲ್ಲಿ ಸುಮಾರು 250 ಎಕರೆಜಮೀನನ್ನು ವ್ಯಾಪಾರಸ್ಥರಿಗಾಗಿಯೇ ಮೀಸಲಿಡಬೇಕು. ವ್ಯಾಪಾರಸ್ಥರಿಗೆ ಅನುಕೂಲವಾಗುವ ಯೋಗ್ಯ ಸ್ಥಳವೆಂದರೆ ರೋಟರಿ ಸರ್ಕಲ್‌ನಿಂದ ಲೈನ್ಸ್ ಸರ್ಕಲ್, ಎಪಿಎಂಸಿ ಸರ್ಕಲ್‌ವರೆಗಿನ ರಸ್ತೆಯ ಎಡ ಮತ್ತು ಬಲ ಭಾಗದ ಜಮೀನುಗಳನ್ನು ಮತ್ತು ಇನ್ರ್ ವ್ಹಿಲ್ ಸರ್ಕಲ್‌ದಿಂದ ರೊಟರಿ ಸರ್ಕಲ್‌ವರೆಗೆ ಮಧ್ಯದಲ್ಲಿ ಬರುವಂತಹ ಹಾಗೂ ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ಹಿಂದಿನ ಸಂಪೂರ್ಣ ಜಾಗವನ್ನು ವ್ಯಾಪಾರಸ್ಥರಿಗಾಗಿ ರಸ್ತೆ ಗಟಾರುಗಳನ್ನು ಮಾಡಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
ರವಿ ಕುಮಟಗಿ, ಸಂತೋಷ ಹೊಕ್ರಾಣಿ, ರಾಮ ಮುಂದಡಾ, ನಾಗರಾಜ ಕುಪ್ಪಸ್ತ, ವೀರುಪಾಕ್ಷಿ ಅಮೃತಕರ, ಅಶೋಕ ಮುತ್ತಿನಮಠ, ವೀರಣ್ಣ ಬಂಗಾರಶೆಟ್ಟಿ, ಶಿವು ನಂದಿಕೋ ಲಮಠ, ರಾಜು ಗೌಳಿ, ವಿಮಲ ಬೇತಾಳ ಇತರರು ಇದ್ದರು.