ಸಾರಾಂಶ
ಸಂಜೀವಿನ ಒಕ್ಕೂಟದ ಮಾಸಿಕ ಸಂತೆ, ವಸ್ತು ಪ್ರದರ್ಶನ
ಕನ್ನಡಪ್ರಭ ವಾರ್ತೆ, ಶೃಂಗೇರಿಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉತ್ಪಾದನೆ, ಕೈಮಗ್ಗ, ಗೃಹ, ಕರಕುಶಲ ಕೈಗಾರಿಕೆಗಳ ಮೂಲಕ ಉತ್ಪಾದಿಸುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಕೆರೆ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನಿತಾ ಸಲಹೆ ನೀಡಿದರು.
ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ ಕೆರೆ ಪಂಚಾಯಿತಿ ಸಂಜೀವಿನ ಒಕ್ಕೂಟದ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನ, ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು. ಹಳ್ಳಿ ಗಳಲ್ಲಿ ಸಾವಯವ ಗೊಬ್ಬರ ಬಳಸಿ ತರಕಾರಿ, ಸೋಪ್ಪು, ಹಣ್ಣು ಹಂಪಲುಗಳನ್ನು ಬೆಳೆಸಲಾಗುತ್ತದೆ. ಅವುಗಳನ್ನು ಕೊಳ್ಳುವ ಮೂಲಕ ಬೆಳೆಗಾರರಿಗೆ ಪ್ರೋತ್ಸಾಹಿಸಬೇಕು. ಅದರಿಂದ ಅವರಿಗೆ ಆದಾಯ ಸಿಗಲಿದೆ ಎಂದರು.ಗೃಹ ಕೈಗಾರಿಕೆಗಳಿಂದ ಉತ್ಪಾದಿಸಿದ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ಮಾರುಕಟ್ಟೆ ಸೃಷ್ಟಿಸಬೇಕು.ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕೈಗಾರಿಕೆಗಳ ಮೇಲೆ ಕೆಲ ಕುಟುಂಬಗಳು ಅವಲಂಬಿತವಾಗಿವೆ. ಅಂತಹ ಕುಟುಂಬಗಳಿಗೆ ಆದಾಯ ಗಳಿಸಿಕೊಟ್ಟಂತಾಗುತ್ತದೆ ಎಂದರು.
ತಾಲೂಕು ಸಂಜೀವಿನಿ ಒಕ್ಕೂಟ ವ್ಯವಸ್ಥಾಪಕ ಆದರ್ಶ ಮಾತನಾಡಿ ಸಂಘದ ಸದಸ್ಯರು ತಯಾರಿಸುವ ಗೃಹ ಉಪಯೋಗಿ ಉತ್ಪನ್ನಗಳಿಗೆ ಮಾಸಿಕ ಸಂತೆ ಸೀಮಿತವಾಗಿರದೇ ಜಿಲ್ಲೆ ಮತ್ತು ರಾಜ್ಯಗಳಲ್ಲಿ ನಡೆಯುವ ಸರಸ್ ಮೇಳಗಳಲ್ಲಿ ಭಾಗವಹಿಸಿ ಹೆಚ್ಚು ಆದಾಯ ಗಳಿಸಬೇಕು. ಮಾಸಿಕ ಸಂತೆಗಳ ಮೂಲಕ ಸಂಘದ ಸದಸ್ಯರ ಜೀವನೋಪಾಯ ಚಟುವಟಿಕೆಗಳ ಅಭಿವೃದ್ಧಿ ಪಡಿಸುವ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ದೊರೆಯುವ ಅನುದಾನ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಕೃಷಿ,ಕೈಗಾರಿಕೆ ಉತ್ಪನ್ನಗಳ ವಸ್ತು ಪ್ರದರ್ಶನ,ಮಾರಾಟ ನಡೆಯಿತು. ಕೃಷಿಯೇತರ ತಾಲೂಕು ವ್ಯವಸ್ತಾಪಕಿ ಚೈತ್ರ, ಜ್ಯೋತಿ, ನಾಗರತ್ನ, ಮಧುರಾ ಮತ್ತಿತರರು ಉಪಸ್ಥಿತರಿದ್ದರು.
24 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನ ನೆಮ್ಮಾರು ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ ನಡೆದ ಕೆರೆ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ,ವಸ್ತು ಪ್ರದರ್ಶನ, ಮಾರಾಟ ಮೇಳವನ್ನು ಕೆರೆ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನಿತಾ ಉದ್ಘಾಟಿಸಿದರು.