ಬೈಂದೂರು: ಯಕ್ಷಗಾನ ಕಲಾರಂಗದ ೭೭ನೇ ಮನೆ ಹಸ್ತಾಂತರ

| Published : Jul 03 2025, 11:49 PM IST

ಬೈಂದೂರು: ಯಕ್ಷಗಾನ ಕಲಾರಂಗದ ೭೭ನೇ ಮನೆ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೂರ್ವಿಕಾ (ಚಂದ್ರಾವತಿ ಮತ್ತು ಮಾದೇವ ಖಾರ್ವಿ ಅವರ ಪುತ್ರಿ) ಅವರಿಗೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೆಂಗಳೂರಿನ ಗೀತಾ ಎಲ್.ಎನ್. ಶೆಟ್ಟಿ ಅವರು ತಮ್ಮ ತಂದೆ ತಾಯಿಯ ನೆನಪಿನಲ್ಲಿ ೬.೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ‘ಲಲಿತಾ ನಿವಾಸ’ವನ್ನು ಮಂಗಳವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೂರ್ವಿಕಾ (ಚಂದ್ರಾವತಿ ಮತ್ತು ಮಾದೇವ ಖಾರ್ವಿ ಅವರ ಪುತ್ರಿ) ಅವರಿಗೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೆಂಗಳೂರಿನ ಗೀತಾ ಎಲ್.ಎನ್. ಶೆಟ್ಟಿ ಅವರು ತಮ್ಮ ತಂದೆ ತಾಯಿಯ ನೆನಪಿನಲ್ಲಿ ೬.೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ‘ಲಲಿತಾ ನಿವಾಸ’ವನ್ನು ಮಂಗಳವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕಠಿಣ ಪರಿಶ್ರಮಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ. ನಿರಂತರ ಸಾಧನೆಯಿಂದ ಬದುಕನ್ನು ಕಟ್ಟಿಕೊಳ್ಳುವಂತೆ ವಿದ್ಯಾರ್ಥಿನಿಗೆ ಕಿವಿಮಾತು ಹೇಳಿದರು. ತನ್ನ ಮಾವ ಡಾ.ಬಿ.ಬಿ.ಶೆಟ್ಟಿ ಅವರು ಸ್ಥಾಪಿಸಿದ ಯಕ್ಷಗಾನ ಕಲಾರಂಗ ಇಂದು ಸಮಾಜ ಮುಖಿಯಾಗಿ ಮಾಡುತ್ತಿರುವ ಅಗಾಧ ಕಾರ್ಯ ಕಂಡು ಸಂತೋಷವಾಗುತ್ತಿದೆ ಎಂದರು.ಈ ಸಂದರ್ಭ ಅವರ ಮಗಳು ಗಾಯತ್ರಿ ಶೆಟ್ಟಿ, ಸೊಸೆ ಶ್ವೇತಾ ಶೆಟ್ಟಿ, ಮಡಾಮಕ್ಕಿ ಶಶಿಧರ ಶೆಟ್ಟಿ ದಂಪತಿ ಅಭ್ಯಾಗತರಾಗಿ ಭಾಗವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್ ಮಾತನಾ,ಡಿ ಗೀತಾ ಎಲ್.ಎನ್. ಶೆಟ್ಟಿ ಅವರು ಒದಗಿ ಬಂದ ಆಘಾತವನ್ನು ಮೆಟ್ಟಿನಿಂತು ಮಾಡಿದ ಸಾಧನೆ ಅವರ ಸಾಹಸದ ವ್ಯಕ್ತಿತ್ವವನ್ನು ದರ್ಶಿಸುತ್ತದೆ. ಪರೋಪಕಾರ ಮನೋಭಾವ ಅವರಿಗೆ ವಂಶ ಪಾರಂಪರ್ಯವಾಗಿ ಬಂದ ಬಳುವಳಿ. ಅದು ಅವರ ಮಕ್ಕಳಲ್ಲೂ ಮುಂದುವರಿದಿದೆ ಎಂದರು.

ಉಪಾಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಎಚ್.ಎನ್. ವೆಂಕಟೇಶ್, ಗಣಪತಿ ಭಟ್ ಉಪಸ್ಥಿತರಿದ್ದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.