ಸಾರಾಂಶ
ಜಿಲ್ಲಾ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷನಾಗಿ ಬಾಗಲಕೋಟೆಯನ್ನು ಜಿಲ್ಲೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಮಗೆ ತಿಳಿದಿರುವಂತೆ ಪ್ರಧಾನಿ ಮೋದಿಯಿಂದಾಗಿ ದೇಶ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕವಾಗಿ ಸಾಕಷ್ಟು ಮುನ್ನಡೆ ಸಾಧಿಸಿದೆ ಎಂದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಾನು ಕೂಡ ಕಾನೂನು ಪದವಿ ಪಡೆದು ವಕೀಲ ವೃತ್ತಿ ಮಾಡಿದ್ದೇನೆ. ಸಮಾಜ ಸೇವೆ ಸಲ್ಲಿಸಲು ರಾಜಕೀಯಕ್ಕೆ ಬಂದಿರುವೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.ಶುಕ್ರವಾರ ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ ಬಾಗಲಕೋಟೆ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದ ಅವರು, ನಾನು ಕಾನೂನು ಪದವಿ ಪಡೆದು ಕೆಲವು ವರ್ಷ ವಕೀಲ ವೃತ್ತಿ ಮಾಡಿದ್ದೇನೆ. ಸಮಾಜದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಲೆಂದು ರಾಜಕೀಯಕ್ಕೆ ಬಂದಿರುವೆ. ನಮ್ಮ ಕುಟುಂಬದಲ್ಲಿ ನನ್ನನ್ನು ಹೊರತುಪಡಿಸಿ ಕುಟುಂಬ ಸದಸ್ಯರು ಯಾರೂ ಗ್ರಾಪಂ ಸದಸ್ಯರು ಸಹ ಆಗಿಲ್ಲ. ನಾನೊಬ್ಬನೆ ರಾಜಕಾರಣಕ್ಕೆ ಬಂದು ಜನರ ಸೇವೆ ಸಲ್ಲಿಸುತ್ತಿರುವೆ ಎಂದರು.
ಜಿಲ್ಲಾ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷನಾಗಿ ಬಾಗಲಕೋಟೆಯನ್ನು ಜಿಲ್ಲೆಯನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಮಗೆ ತಿಳಿದಿರುವಂತೆ ಪ್ರಧಾನಿ ಮೋದಿಯಿಂದಾಗಿ ದೇಶ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕವಾಗಿ ಸಾಕಷ್ಟು ಮುನ್ನಡೆ ಸಾಧಿಸಿದೆ ಎಂದರು.ಎಲ್ಲರೂ ತಮ್ಮ ವೃತ್ತಿಗಳ ಮೂಲಕ ದೇಶದ ಸಾಮಾನ್ಯ ಜನರ ಸೇವೆ ಸಲ್ಲಿಸಬೇಕಿದೆ. ಆ ನಿಟ್ಟಿನಲ್ಲಿ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಎಲ್ಬರೂ ಭಾಗಿಯಾಗೋಣ, ಪ್ರಧಾನಿ ಮೋದಿಯ ಕೈ ಬಲಪಡಿಸೋಣ. ಇದಕ್ಕಾಗಿ ತಮ್ಮ ಅಮೂಲ್ಯ ಮತವನ್ನು ನನಗೆ ನೀಡಿ ಎಂದು ಮನವಿ ಮಾಡಿದರು.
ಈ ವೇಳೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ ಪೂಜಾರ್, ಸಂಘದ ಕಾರ್ಯದರ್ಶಿ ಮಠ, ಎಂ.ಎಂ ಹಂಡಿ, ಜೆ.ಬಿ ಬುದಿಹಾಳ ,ಅಶೋಕ್ ಬೂದಿಹಾಳ, ಎಸ್.ಎಸ್ ದೇಸಾಯಿ, ವಕೀಲ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.