ಚಿಕಿತ್ಸೆಯಿಂದ ವಂಚಿತರಾಗುವವರಿಗೆ ಇಂತಹ ಶಿಬಿರಗಳು ಸಂಜೀವಿನಿಯಿದ್ದಂತೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ, ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಂಡು ಸದೃಢ ಜೀವನ ನಡೆಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ಚಿಕಿತ್ಸೆಯಿಂದ ವಂಚಿತರಾಗುವವರಿಗೆ ಇಂತಹ ಶಿಬಿರಗಳು ಸಂಜೀವಿನಿಯಿದ್ದಂತೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ, ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಂಡು ಸದೃಢ ಜೀವನ ನಡೆಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹೇಳಿದರು.ತಾಲೂಕಿನ ಚಂದ್ರಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಬಹಳ ಮುಖ್ಯ. ಗ್ರಾಮೀಣ ಭಾಗದ ಬಡ ಜನರಿಗೆ ಉತ್ತಮ ಚಿಕಿತ್ಸೆ ಸಿಗುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಧು ಬಂಗಾರಪ್ಪ ಅಭಿಮಾನಿಗಳ ಬಳಗ, ಕೆ.ಎಸ್.ಹೆಗ್ಡೆ ಆಸ್ಪತ್ರೆ ಸೇರಿ ಜನರ ಮನೆ ಬಾಗಿಲಿಗೆ ನುರಿತ ವೈದ್ಯರನ್ನು ಕರೆಸಿರುವುದು ಶ್ಲಾಘನೀಯ ಎಂದರು.ಮಧು ಬಂಗಾರಪ್ಪ ಅಭಿಮಾನಿ ಬಳಗದ ದರ್ಶನ್ ಚಿಕ್ಕಮಾಕೊಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಧು ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಹಕಾರದೊಂದಿಗೆ ನಿರಂತರವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈ ಕಾರ್ಯದಿಂದಗ್ರಾಮೀಣ ಭಾಗದ ಬಡಜನರಆರೋಗ್ಯ ಸುಧಾರಣೆಗೆದೊಡ್ಡ ಶಕ್ತಿ ಸಿಕ್ಕಂತಾಗಿದೆ. ನಾವೆಲ್ಲ ಸೇರಿ ಮಾಡುತ್ತಿರುವಇಂತಹ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರು ನೀಡುತ್ತಿರುವ ಪ್ರೋತ್ಸಾಹ ಮತ್ತು ಸಹಕಾರ ಮತ್ತಷ್ಟು ಸೇವೆ ಮಾಡಲು ಉತ್ಸಾಹ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಚಿವ ಮಧು ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಮಂಗಳೂರಿನ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದೊಂದಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಚಂದ್ರಗುತ್ತಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ೩೦೦ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರಕ್ಕೆ ಆಗಮಿಸಿ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು.ಮAಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನುರಿತ ತಜ್ಞರಾದ ಡಾ.ಶಶಾಂಕ್ ಕೋಟ್ಯಾನ್, ಡಾ.ಸಫ್ವಾನ್ ಜಿ.ಎಂ, ಡಾ. ಕಿರಣ್ ಹರಿ, ಡಾ. ರಾಹುಲ್ ಶೆಣೈ ಮತ್ತು ಡಾ.ಆಶೀಶ್ ಕುಮಾರ್ ದೂಳಪ್ಪ ಅವರು ರೋಗಿಗಳನ್ನು ಆಪ್ತವಾಗಿ ಪರೀಕ್ಷಿಸಿ, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು. ಶಿಬಿರದಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಸಹ ವಿತರಿಸಲಾಯಿತು.
ದರ್ಶನ್ ಚಿಕ್ಕಮಾಕೊಪ್ಪ. ಎಂ.ಪಿ.ರತ್ನಾಕರ್, ಗಣೇಶ್ ಮರಡಿ, ನಾಗೇಶ್ ಕಮರೂರ್, ಪ್ರಶಾಂತ್ ಚನ್ನಪಟ್ಟಣ, ಬಲಿಂದ್ರಪ್ಪ ಗುಂಜನೂರ್, ಯಶೋಧರ ಅಂದವಳ್ಳಿ, ಪವನ್‌ಕುಮಾರ್ ಅಂದವಳ್ಳಿ, ರವಿಕುಮಾರ್ ನಾಯ್ಕ್ ಕೊಡಂಬಿ, ಗುರು ಬರದವಳ್ಳಿ, ರವಿ ಚನ್ನಪಟ್ಟಣ, ಪ್ರಕಾಶ್ ಚಂದ್ರಗುತ್ತಿ, ಚಂದ್ರಪ್ಪ ಕತವಾಯಿ ಮುಖಂಡರು ಹಾಜರಿದ್ದರು.