ಆ.೨೪,೨೫ರಂದು ದಾವಣಗೆರೆಯಲ್ಲಿ ಛಾಯಮೇಳ

| Published : Jul 03 2024, 12:17 AM IST

ಸಾರಾಂಶ

photo campain programme in the month of august

ಚಳ್ಳಕೆರೆ: ದಾವಣಗೆರೆಯಲ್ಲಿ ಆ.೨೪ ಮತ್ತು ೨೫ ಎರಡು ದಿನಗಳ ಕಾಲ ಪೋಟೋ ಇಂಟರ್‌ ನ್ಯಾಷನಲ್ ವಸ್ತುಗಳ ಛಾಯಮೇಳ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿಪ್ರಸನ್ನ ತಿಳಿಸಿದರು. ಅವರು, ಮಂಗಳವಾರ ನಗರದ ಪ್ರವಾಸಿಮಂದಿರದಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ವಿಜಯನಗರ, ಗದಗ, ಕೊಪ್ಪಳ ವ್ಯಾಪ್ತಿ ಪೋಟೋ ಛಾಯಮೇಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆ ಜಿಲ್ಲಾಧ್ಯಕ್ಷ ವಿಜಯ್‌ಜಾದವ್ ಕಾರ್ಯಕ್ರಮ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿ, ಛಾಯಾಗ್ರಾಹಕರ ಸಂಘದ ಈ ಅಪರೂಪದ ಕಾರ್ಯಕ್ರಮಕ್ಕೆ ಚಳ್ಳಕೆರೆ ಎಲ್ಲಾ ಛಾಯಾಗ್ರಾಹಕ ಬಂಧುಗಳು ತಪ್ಪದೆ ಆಗಮಿಸುವಂತೆ ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಸೈಯದ್ ರಜಮತ್‌ವುಲ್ಲಾ, ಹಿರಿಯೂರು ನಾಗಣ್ಣ, ಸಹನಕುಮಾರ, ಜಿಲ್ಲಾಧ್ಯಕ್ಷ ರಾಮಚಂದ್ರರೆಡ್ಡಿ, ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಪಟೇಲ್, ಉಪಾಧ್ಯಕ್ಷ ಕುಮಾರ್, ನಿರ್ದೇಶಕರಾದ ರಾಘವೇಂದ್ರ, ವೀರೇಶ್‌ಬಾನು, ಸುರೇಶ್, ಅಜಯ್, ಅಶೋಕ್‌ಬಾನು, ನಿರಂಜನ್, ನರಸಿಂಹ, ನಿಸರ್ಗಗೋವಿಂದರಾಜು, ಓಬಣ್ಣ, ಎಸ್‌ಎಲ್‌ವಿ ರಘು ಇದ್ದರು.

-----