ಸಾರಾಂಶ
ಪರಿಶ್ರಮ, ಶ್ರದ್ದೆ, ನಂಬಿಕೆ ಇದ್ದಾಗ ಏನು ಬೇಕಾದರೂ ಸಾಧಿಸಬಹುದು. ಯುಪಿಎಸ್‌ಸಿ, ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ತರಬೇತಿ ಪೂರಕವಾಗಿದೆ ಎಂದು ಎಸ್ಪಿ ಡಾ.ಕವಿತಾ ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪರಿಶ್ರಮ, ಶ್ರದ್ದೆ, ನಂಬಿಕೆ ಇದ್ದಾಗ ಏನು ಬೇಕಾದರೂ ಸಾಧಿಸಬಹುದು. ಯುಪಿಎಸ್‌ಸಿ, ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ತರಬೇತಿ ಪೂರಕವಾಗಿದೆ ಎಂದು ಎಸ್ಪಿ ಡಾ.ಕವಿತಾ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದೇವರತ್ನ ಫೌಂಡೇಶನ್ ವತಿಯಿಂದ ನಡೆದ 2023-24ನೇ ಸಾಲಿನ ಯುಪಿಎಸ್‌ಸಿ, ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಾಧಕರು ಹೂವಿನ ಹಾಸಿಗೆಯಿಂದ ಬಂದವರಲ್ಲ. ಅವರವರ ಪರಿಶ್ರಮದಿಂದ ಸಾಧನೆ ಮಾಡಿ ಬಂದವರು. ಆಗಾಗಿ ನಿಮಗೆ ದೊರೆತಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಸರ್ಕಾರಿ ಶಾಲೆಯಲ್ಲೇ ಓದಿದವರೂ ಕೂಡ ಇಂಗ್ಲಿಷ್ ಜ್ಞಾನ ಇಲ್ಲದಿದ್ದರೂ ಕೂಡ ಐಎಎಸ್, ಕೆಎಎಸ್ ಮಾಡಲು ಸಾಧ್ಯವಿದೆ. ಸಾಧಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು, ಶೇ. 90 ಭಾಗ ಗ್ರಾಮೀಣ ಭಾಗದವರೇ, ಸರ್ಕಾರಿ ಶಾಲೆಯಲ್ಲಿ ಓದಿರುತ್ತಾರೆ. ಐಪಿಎಸ್, ಕೆಎಎಸ್ ಮಾಡಲು ಇಂಗ್ಲಿಷ್‌ನಲ್ಲಿ ಓದಿರಬೇಕಿಲ್ಲ. ಸಾಮಾನ್ಯ ಇಂಗ್ಲಿಷ್ ಜ್ಞಾನ ಇದ್ದರೆ ಸಾಕು. ಗ್ರಾಮೀಣ ಪ್ರದೇಶ ಮಕ್ಕಳೇ ಅಪಾರ ಜ್ಞಾನಾರ್ಜನೆ ಹೊಂದಿರುತ್ತಾರೆ. ಜೀವನ ಹೇಗೆ ಮಾಡಬೇಕು. ಶ್ರಮದ ಮಹತ್ವ ಏನು ಎಂಬುವುದನ್ನು ಅರಿತುಕೊಂಡು ಬೆಳೆದಿರುವ ಮಕ್ಕಳು ಆಗಿರುತ್ತಾರೆ ಆಗಾಗಿ ಎಲ್ಲ ಅವಕಾಶಗಳು ಗ್ರಾಮೀಣ ಭಾಗ ಮಕ್ಕಳಿಗಿರುತ್ತದೆ. ಆಗಾಗಿ ನಮಗೆ ಇಂಗ್ಲಿಷ್ ಬರಲ್ಲ. ನಾವು ಗ್ರಾಮೀಣ ಪ್ರದೇಶದವರು, ನಮ್ಮಿಂದ ಐಎಎಸ್ ಕೆಎಎಸ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಬಿಡಬೇಕು ಎಂದರು.ಹೈಕೋರ್ಟ್ ವಕೀಲ ಎಂ.ಶಿವಪ್ರಸಾದ್ ಮಾತನಾಡಿ, ದೇವರತ್ನ ಫೌಂಡೇಶನ್ ಕೇವಲ ಒಂದು ವರ್ಗ, ಜಾತಿಗೆ ಸೀಮಿತವಾಗಿಲ್ಲ. ಬದಲಾಗಿ ಎಲ್ಲ ಜಾತಿಯ, ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.
ಐಎಎಸ್ ತರಬೇತಿ ಕೊಡುವುದು ಭಾರತೀಯ ಆಡಳಿತ ಸೇವೆ ಆಗಬೇಕು. ಮಾಜದಲ್ಲಿ ಬಡತನದಲ್ಲಿ ನೊಂದಿರುವ ಕುಟುಂಬಗಳ ಕಣ್ಣೀರೊರೆಸುವಂತಹ ಜವಾಬ್ದಾರಿಯುತ ಹುದ್ದೆ ಅಲಂಕರಿಸಬೇಕು. ಸಮುದಾಯದ ಎಲ್ಲ ವರ್ಗದ, ಎಲ್ಲ ಜಾತಿಯ ಕಡುಬಡವರಿಗೆ ನೆರವಾಗಬೇಕೆಂಬುವುದು ಫೌಂಡೇಶನ್ ಆಶಯವಾಗಿದೆ. ಇಂದು ಹಮ್ಮಿಕೊಂಡಿರುವ ಯುಪಿಎಸ್‌ಸಿ, ಕೆಪಿಎಸ್‌ಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಂಡು ಪರೀಕ್ಷೆಯಲ್ಲಿ ಪಾಸಾಗಿ ಜನರ ಸೇವೆ ಮಾಡುವಂತಬೇಕು ಎಂದರು. ಅವಿನಾಶ್ ಭಾರತ ಸರ್ಕಾರದ ಐಎಎಸ್ ತರಬೇತುದಾರ ಸಿ.ವಿ.ಗೋಪಿನಾಥ್, ಮೈಸೂರು ಮತ್ತು ಚಾಮರಾಜನಗರ ವಿಭಾಗದ ಉಸ್ತುವಾರಿ ಶಿವಮೂರ್ತಿ, ಪೋಷಕ ಬಿಲ್ಡರ್ಸ್ ರೇವಣ್ಣ, ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ನಿಂಗರಾಜು, ಎಲ್‌ಐಸಿ ಎಸ್.ರಾಜಣ್ಣ, ಆಲೂರುಮಲ್ಲು, ಬಸವನಪುರರಾಜಶೇಖರ್, ಮಾದಪ್ಪ ಮಾದಿಗರ್ ಅರಕಲವಾಡಿ ನಾಗೇಂದ್ರ, ಜಿ.ಎಂ.ಶಂಕರ್, ರಾಮಸಮುದ್ರ ಎಂ.ಶಿವಕುಮಾರ್, ಅರುಂಧತಿ ಕೋಅಪರೇಟಿವ್ ಸೂಸೈಟಿ ಅಧ್ಯಕ್ಷ ಜವರಯ್ಯ, ಸುಂದರ್, ವಕೀಲರಾದ ರಾಜೇಶ್, ಸಿದ್ದೇಶ್, ಉಪನ್ಯಾಸಕ ರಮೇಶ್, ಕೋಡಿಪುರ ಮಾದೇಶ್, ರಂಗಸ್ವಾಮಿ, ಡಾ.ಪರಮೇಶ್ವರಪ್ಪ, ಆರ್.ಪಿ.ರಾಚಪ್ಪ, ಕೆಎಸ್‌ಆರ್‌ಟಿಸಿ ನಾಗರಾಜು, ಚಾ.ಗು.ನಾಗರಾಜು, ಎಚ್.ಎಚ್.ನಾಗರಾಜು, ಕೆಸ್ತೂರು ಮರಪ್ಪ, ಸುದೇಶ್, ಪ್ರಸನ್ನಕುಮಾರ್, ರವಿ ಇದ್ದರು.