ಗ್ಯಾರಂಟಿಯಿಂದ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ: ಮಹೇಶ್

| Published : Apr 18 2024, 02:27 AM IST / Updated: Apr 18 2024, 12:25 PM IST

ಸಾರಾಂಶ

ರಾಜ್ಯ ಕಾಂಗ್ರೇಸ್ ಸರ್ಕಾರ ನೀಡಿರುವ ೫ ಗ್ಯಾರಂಟಿ ಮತ್ತು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಚುನಾವಣೆಗಾಗಿ ಘೋಷಿಸಿರುವ ಚುನಾವಣಾ ಪ್ರಣಾಳಿಕೆಯ ೨೫ ಗ್ಯಾರಂಟಿಗಳು ಬೋಗಸ್ ಮತ್ತು ಮೋಸದ ಗ್ಯಾರಂಟಿಗಳಾಗಿವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.

 ಚಾಮರಾಜನಗರ  :  ರಾಜ್ಯ ಕಾಂಗ್ರೇಸ್ ಸರ್ಕಾರ ನೀಡಿರುವ 5ಗ್ಯಾರಂಟಿ ಮತ್ತು ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಚುನಾವಣೆಗಾಗಿ ಘೋಷಿಸಿರುವ ಚುನಾವಣಾ ಪ್ರಣಾಳಿಕೆಯ ೨೫ ಗ್ಯಾರಂಟಿಗಳು ಬೋಗಸ್ ಮತ್ತು ಮೋಸದ ಗ್ಯಾರಂಟಿಗಳಾಗಿವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೇಸ್ ಸರ್ಕಾರ ನೀಡಿರುವ ೫ ಗ್ಯಾರಂಟಿಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ, ಅದರಲ್ಲೂ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ತು ಕೊಳ್ಳುವ ಈ ಯೋಜನೆಗಳ ಬಗ್ಗೆ ಈಗಾಗಲೇ ಜನರಿಗೆ ಗೊತ್ತಾಗಿದೆ ಎಂದರು.

ಮೋಸದ ಗ್ಯಾರಂಟಿ ಬಗ್ಗೆ ಜನರಿಗೆ ತಿಳಿದಿದೆ:  ಅಬಕಾರಿ ಟ್ಯಾಕ್ಸ್ 20 ರಿಂದ 30 ಏರಿಕೆ, ಬಸ್ ದರ ಹೆಚ್ಚಳ, ನೊಂದಣಿ ಶುಲ್ಕಗಳ ಹೆಚ್ಚಳ, ವಿದ್ಯುತ್ ದರ ಹೆಚ್ಚಳ ಯುವನಿಧಿಯ ಬಗ್ಗೆ ಗೊಂದಲ, ಶೇ. 25 ಸಾವಿರ ಕೋಟಿ ಎಸ್‌ಇಪಿ ಮತ್ತು ಟಿಎಸ್ಪಿಗೆ ಹಣವನ್ನು ಗ್ಯಾರಂಟಿಗೆ ಬಳಸಿರುವುದು ಇವೆಲ್ಲಾ ಮೋಸದ ಗ್ಯಾರಂಟಿಗಳು ಎನ್ನುವುದು ಈಗಾಗಲೇ ಜನರಿಗೆ ಗೊತ್ತಾಗಿದೆ ಎಂದರು.ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಚುನಾವಣೆಗಾಗಿ ಘೋಷಿಸಿರುವ ಚುನಾವಣಾ ಪ್ರಣಾಳಿಕಗೆಯ ೨೫ ಗ್ಯಾರಂಟಿಗಳು ಇವುಗಳಿಗೆಲ್ಲಾ ಹಣ ಎಲ್ಲಿಂದ ತರುತ್ತಾರೆ, ಮೊದಲು ಕಾಂಗ್ರೆಸ್‌ ಬಹುಮತ ತೆಗೆದುಕೊಂಡು ಅಧಿಕಾರಕ್ಕೆ ಬರಲು ಸಾಧ್ಯವೇ, ಇವರು ನಿಂತಿರುವುದೇ ೨೩೫ ಕ್ಷೇತ್ರಗಳಲ್ಲಿ, ಇವರ ಪ್ರಣಾಳಿಕೆಯನ್ನು ಇವರ ಇಂಡಿಯಾ ಕೂಟ ಒಪ್ಪುವುದೇ, ಇವೆಲ್ಲಾ ಬೋಗಸ್ ಮತ್ತು ಮೋಸದ ಗ್ಯಾರಂಟಿಗಳು ಎಂದರು.

ಕೈಗೆ ಕರ್ನಾಟಕ, ತೆಲಂಗಾಣವೇ ಟಾರ್ಗೆಟ್‌:

ಕಳೆದ ಎರಡು ಚುನಾವಣೆಗಳಲ್ಲಿ ವಿರೋಧ ಪಕ್ಷಕ್ಕೆ ಇರುವ ಅರ್ಹತೆಯ ಸ್ಥಾನವನ್ನು ಇವರು ಗೆದ್ದಿಲ್ಲ, ಇವರ ಬೋಗಸ್ ಗ್ಯಾರಂಟಿಗಳನ್ನು ಉತ್ತರ ಭಾರತದ ಕಡೆ ನಡೆಯುವುದಿಲ್ಲ, ದಕ್ಷಿಣ ಭಾರತದ ಜನರನ್ನು ಮರಳು ಮಾಡುಲು ಬಂದಿದ್ದಾರೆ ಅದರಲ್ಲೂ ಇವರಿಗೆ ಕರ್ನಾಟಕ ಮತ್ತು ತೆಲಂಗಾಣ ಮಾತ್ರ ಟಾರ್ಗೆಟ್ ಅದು ಈ ಬಾರಿ ನಡೆಯುವುದಿಲ್ಲ ಎಂದರು.21  ಕೋಟಿ ಬಿಪಿಎಲ್ ಕುಟುಂಬಕ್ಕೆ 21 ಲಕ್ಷ ಕೋಟಿ ಬೇಕು ಎಲ್ಲಿಂದ ತರುತ್ತಾರೆ, ಕೇಂದ್ರ ಸರ್ಕಾರದ ಬಜೆಟ್ 40 ಲಕ್ಷ ಕೋಟಿ, ಇನ್ನು ಅಭಿವೃದ್ಧಿ ಕಾರ್ಯಗಳು ಎಲ್ಲಿ ನಡೆಯುತ್ತಿವೆ, ಇಡೀ ರಾಷ್ಟ್ರದ ಜನರನ್ನು ದಿಕ್ಕಿತಪ್ಪಿಸಲು ಹೊರಟಿದ್ದಾರೆ ಬರದಿಂದ ರೈತರು ತತ್ತರಿಸಿ ಹೋಗಿದ್ದಾರೆ. 

ತಮಿಳುನಾಡಿಗೆ ನೀರು ಬಿಟ್ಟು ಮಂಡ್ಯಕ್ಕೆ ಯಾವ ಮುಖ ಹೊತ್ತು ರಾಹುಲ್ ಗಾಂಧಿ ಮಂಡ್ಯಕ್ಕೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು. ಬಿಜೆಪಿಯ ಪ್ರಣಾಳಿಕೆಗಳು ಭಾರತದ ಅಭಿವೃದ್ಧಿಯ ದಿಕ್ಸೂಚಿ, 2027ಕ್ಕೆ ವಿಕಸಿತ ಭಾರತ ನಿರ್ಮಾಣದ ಗುರಿ, 2028 ರ ಕೊನೆಯ ಅಧಿವೇಶನದಲ್ಲಿ ಭಾರತನ್ನು ಆರ್ಥಿಕತೆಯಲ್ಲಿ ೫ರಿಂದ ೩ನೇ ಸ್ದಾನಕ್ಕೆ ಷೋಷಣೆ ಮಾಡುವುದು. ಈಗಾಗಲೇ ಕಳೆದ ೧೦ ವರ್ಷದಿಂದ ಉತ್ತಮ ಆಡಳಿತ ನೀಡಿ, ಯಾವುದೇ ಯೋಜನೆಯ ಹಣ ಹಣ ನೇರವಾಗಿ ಫಲಾನುಭವಿಗೆ ತಲುಪುತ್ತದೆ. ಜಗತ್ತಿನಲ್ಲಿ ರಸ್ತೆ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನ, ಜಲಜೀವನ್ ಮಿಷನ್, ರೈಲ್ವೆ ಅಭಿವೃದ್ಧಿ, ಭ್ರಷ್ಟಚಾರವಿಲ್ಲದ ಆಡಳಿತ ಇವೆಲ್ಲವು ಜನರಿಗೆ ಗೊತ್ತಿಲ್ಲವೇ ಆದ್ದರಿಂದ ನಿಮ್ಮ ಬೋಗಾಸ್ ಗ್ಯಾರಂಟಿಗಳನ್ನು ಜನರು ನಂಬುವುದಿಲ್ಲ ಎಂದರು,

ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಸ್ಸಿ, ಎಸ್ಟಿಗೆ ಮೀಸಲಾತಿ ಕೊಟ್ಟರೆ ದೇಶ ಎರಡನೇ ದರ್ಜೆಗೆ ಕುಸಿಯುತ್ತದೆ ಎಂದು ಜವಹಾರಲಾಲ್ ನೆಹರು ಮೀಸಲಾತಿ ವಿರೋಧಿಸಿ, ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದಿದ್ದರು.

ಬಿಜೆಪಿಯಿಂದ ಸಂವಿಧಾನಕ್ಕೆ ಅಪಮಾನವಿಲ್ಲ:

೧೯೭೫ರಲ್ಲಿ ಪ್ರಜಾಪ್ರಭುತ್ವ ಧಮನಮಾಡಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಬಿಜೆಪಿ ಸಂವಿಧಾನಕ್ಕೆ ಎಂದಿಗೂ ಅಪಮಾನ ಮಾಡಲ್ಲ. ಕಾಂಗ್ರೇಸ್ ೮೮ ಬಾರಿ ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ಸರ್ಕಾರಗಳನ್ನು ಬೀಳಿಸಿದೆ. ನರೇಂದ್ರ ಮೋದಿ ಒಂದು ಸರ್ಕಾರ ಬೀಳಿಸಿದ ಉದಾಹರಣೆ ಕೊಡಿ ಎಂದು ಸವಾಲು ಹಾಕಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆಯಾಗುತ್ತದೆ ಎಂದು ಆರೋಪಿಸುವವರಿಗೆ ನರೇಂದ್ರಮೋದಿ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಸಂವಿಧಾನ ದಲಿತರಿಗೆ ಮಾತ್ರವೇ ಭಾರತದಲ್ಲಿ ವಾಸಿಸುವ ಎಲ್ಲರಿಗೂ ಇದೇ. ದಲಿತರನ್ನು ದಿಕ್ಕು ತಪ್ಪಿಸಲು ಹೊರಟಿದ್ದರೆ ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್ , ಮಾಜಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ವಿರಾಟ್ ಶಿವು, ವಕ್ತಾರ ಕಾಡಳ್ಳಿ ಕುಮಾರ್, ಸಹ ವಕ್ತಾರ ಮಂಜುನಾಥ್ ಇದ್ದರು.