ನಾಲೆ ನೀರು ಹರಿದು ಬೆಳೆನಾಶ

| Published : Aug 03 2025, 01:30 AM IST

ಸಾರಾಂಶ

ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮ ಸಮೀಪ ಶ್ರೀರಾಮದೇವರ ಅಣೆಕಟ್ಟೆಯ ದಕ್ಷಿಣ ನಾಲೆ ಸಾಗಿದ್ದು, ನಾಲೆಯಲ್ಲಿ ಹೂಳು ತೆರವುಗೊಳಿಸದ ಕಾರಣ ನಾಲೆ ತುಂಬ ನೀರು ಹರಿದು ಹತ್ತಾರು ಎಕರೆಗಳಲ್ಲಿನ ಬೆಳಗಳು ನಾಶವಾಗಿರುವ ಘಟನೆ ಗ್ರಾಮದ ಸಮೀಪ ನಡೆದಿದೆ. ನೀರಾವರಿ ಇಲಾಖೆಯ ಅದಿಕಾರಿಗಳು ಬೇಜಾವಬ್ದಾರಿಯಿಂದ ನಾವುಗಳು ಬೆಳೆದ ಬೆಳೆ ಕೊಚ್ಚಿ ಹೋಗಿದೆ, ನೀರಾವರಿ ಅಧಿಕಾರಿಗಳು ನಾಲೆಯಲ್ಲಿನ ಹೂಳು ತೆರವುಗೊಳಿಸಿ ರೈತರ ಕೃಷಿ ಚಟುವಟಿಕೆಗೆ ಸಹಕಾರ ನೀಡಬೇಕೆಂದು ಕೋರಿದ್ದಾರೆ.

ಹೊಳೆನರಸೀಪುರ: ತಾಲೂಕಿನ ತಟ್ಟೆಕೆರೆ ಗ್ರಾಮ ಸಮೀಪ ಶ್ರೀರಾಮದೇವರ ಅಣೆಕಟ್ಟೆಯ ದಕ್ಷಿಣ ನಾಲೆ ಸಾಗಿದ್ದು, ನಾಲೆಯಲ್ಲಿ ಹೂಳು ತೆರವುಗೊಳಿಸದ ಕಾರಣ ನಾಲೆ ತುಂಬ ನೀರು ಹರಿದು ಹತ್ತಾರು ಎಕರೆಗಳಲ್ಲಿನ ಬೆಳಗಳು ನಾಶವಾಗಿರುವ ಘಟನೆ ಗ್ರಾಮದ ಸಮೀಪ ನಡೆದಿದೆ.

ಹೇಮಾವತಿ ಜಲಾಶಯದ ಶ್ರೀರಾಮ ದೇವರ ಅಣೆಕಟ್ಟೆಯಿಂದ ದಕ್ಷಿಣ ನಾಲೆ ಮೂಲಕ ನೂರಾರು ಎಕರೆ ಭೂಮಿಗೆ ನೀರು ಹರಿಸಿದ ಕಾರಣದಿಂದ ಕೃಷಿ ಚಟುವಟಿಕೆಗಳಿಗೆ ಸಹಕಾರಿ ಆಗಿದೆ. ಆದರೆ ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ನಾಲೆಯಲ್ಲಿನ ಹೂಳು ತೆರವು ಮಾಡದ ಕಾರಣ ನಾಲೆಯಲ್ಲಿ ನೀರು ತುಂಬಿ ಅಕ್ಕ ಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕೊಚ್ಚಿ ಹೋಗಿ, ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ ಎಂದು ಗ್ರಾಮಸ್ಥರು ಅಸಾಹಯಕತೆಯಿಂದ ಕಣ್ಣೀರು ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.ನೀರಾವರಿ ಇಲಾಖೆಯ ಅದಿಕಾರಿಗಳು ಬೇಜಾವಬ್ದಾರಿಯಿಂದ ನಾವುಗಳು ಬೆಳೆದ ಬೆಳೆ ಕೊಚ್ಚಿ ಹೋಗಿದೆ, ನೀರಾವರಿ ಅಧಿಕಾರಿಗಳು ನಾಲೆಯಲ್ಲಿನ ಹೂಳು ತೆರವುಗೊಳಿಸಿ ರೈತರ ಕೃಷಿ ಚಟುವಟಿಕೆಗೆ ಸಹಕಾರ ನೀಡಬೇಕೆಂದು ಕೋರಿದ್ದಾರೆ.