ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ವಿಶ್ವಾಸಾರ್ಹ ಸೇವೆ ನೀಡುವ ಮೂಲಕ ನಿರಂತರವಾಗಿ ಪ್ರಗತಿ ಸಾಧಿಸಿರುವ ಕೆನರಾ ಬ್ಯಾಂಕ್ ಇಂದು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಗೆ ಗ್ರಾಹಕರ ವಿಶ್ವಾಸವೇ ಪ್ರಮುಖ ಕಾರಣವಾಗಿದೆ ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಹಾಗೂ ಸಿಒ ಮುಖ್ಯಸ್ಥ ಮಂಜುನಾಥ್ ಬಿ. ಸಿಂಗಾಯಿ ಹೇಳಿದರು.
ಬಂಟ್ವಾಳ: ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ವಿಶ್ವಾಸಾರ್ಹ ಸೇವೆ ನೀಡುವ ಮೂಲಕ ನಿರಂತರವಾಗಿ ಪ್ರಗತಿ ಸಾಧಿಸಿರುವ ಕೆನರಾ ಬ್ಯಾಂಕ್ ಇಂದು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಗೆ ಗ್ರಾಹಕರ ವಿಶ್ವಾಸವೇ ಪ್ರಮುಖ ಕಾರಣವಾಗಿದೆ ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಹಾಗೂ ಸಿಒ ಮುಖ್ಯಸ್ಥ ಮಂಜುನಾಥ್ ಬಿ. ಸಿಂಗಾಯಿ ಹೇಳಿದರು.
ಪುಂಜಾಲಕಟ್ಟೆಯ ಸಂಜೀವ ಸ್ಕ್ವೇರ್ ಗೆ ಸ್ಥಳಾಂತರ ಗೊಂಡ ಪುಂಜಾಲಕಟ್ಟೆ ಕೆನರಾ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.ಬ್ಯಾಂಕ್ ಸದಾ ಗ್ರಾಹಕ ಸ್ನೇಹಿ ಸೇವೆಗೆ ಆದ್ಯತೆ ನೀಡುತ್ತಿದ್ದು, ತಂತ್ರಜ್ಞಾನ ಆಧರಿತ, ಸುರಕ್ಷಿತ ಹಾಗೂ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಬದ್ಧವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಪ್ರಾದೇಶಿಕ ಕಚೇರಿಯ ಎಜಿಎಂ ಹಾಗೂ ಪ್ರಾದೇಶಿಕ ಮುಖ್ಯಸ್ಥ ಅಲವಾಲ ವೀರಾಂಜನೇಯುಲು, ನೂತನ ಕಟ್ಟಡ ಸಂಜೀವ ಸ್ಕ್ವೇರ್ ನ ಮಾಲೀಕರಾದ ಪ್ರಶಾಂತ್ ಪುಂಜಾಲಕಟ್ಟೆ, ಗ್ರಾಹಕ ದಿನೇಶ್ಚಂದ್ರ ಬಾಳಿಗಾ ಉಪಸ್ಥಿತರಿದ್ದರು.ಪುತ್ತೂರು ವಿಭಾಗೀಯ ಪ್ರಬಂಧಕಿ ವನಿತಾ ಗಡಿಯಾರ್ ಸ್ವಾಗತಿಸಿದರು. ಪುಂಜಾಲಕಟ್ಟೆ ಶಾಖಾ ವ್ಯವಸ್ಥಾಪಕ ರಾಜರಾಜನ್ ಪಿ. ವಂದಿಸಿದರು. ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.
ಪುಂಡಲೀಕ ಬಾಳಿಗಾ ಜುವೆಲ್ಲರ್ಸ್ ಮಾಲೀಕ ಪುರುಷೋತ್ತಮ ಬಾಳಿಗಾ, ರವೀಂದ್ರ ಬಾಳಿಗಾ, ಪ್ರಶಾಂತ್ ಬಾಳಿಗಾ, ಕ್ಲೋತ್ ಸೆಂಟರ್ ನ ಮಾಲೀಕರಾದ ಹರೀಶ್ ಬಾಳಿಗಾ, ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ನಾಗೇಶ್ ಪ್ರಭು, ಗ್ರಾಹಕರಾದ ಸುನಿಲ್ ವಿಜಯ್ ಮೋರಸ್, ಮಜಲೋಡಿ ಚಂದ್ರಹಾಸ ಶೆಟ್ಟಿ, ದಿನೇಶ್ಚಂದ್ರ ಬಾಳಿಗಾ, ಓಂ ಪವರ್ ಟರ್ಮಿನರ್ಸ್ ಮಾಲೀಕ ಓಂಪ್ರಸಾದ್ ಬಿ. ಹಾಗೂ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ, ಗ್ರಾಹಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.