Cancel the false Talwara caste certificate.
ಕನ್ನಡಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ, ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡದ ನಾಯ್ಕಡ್, ನಾಯಕ ತಳವಾರ ಎಂದು ಆ ಸಮುದಾಯಕ್ಕೆ ನೀಡಲಾಗಿರುವ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾಯ ದೊರೆ ಒತ್ತಾಯಿಸಿದರು.ಪಟ್ಟಣದ ಪ್ರಜಾಸೌಧದಲ್ಲಿ ತಹಸೀಲ್ದಾರವರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಯವರು ೨೦೨೦ರಲ್ಲಿ ಹೊರಡಿಸಿರುವ ಆದೇಶದಲ್ಲಿ ಪರಿಶಿಷ್ಟ ಪಂಗಡ ಕ್ರ.ಸಂ ೩೮ರಲ್ಲಿರುವ ನಾಯ್ಕಡ, ನಾಯಕ, ಚೋಳ ನಾಯಕ, ಕಪಾಡಿಯ ನಾಯಕ, ಮೊಟಾ ನಾಯಕ, ನಾನಾ ನಾಯಕ, ನಾಯಕ ಬೇಡ, ಬೇಡರ್ ಮತ್ತು ವಾಲ್ಮಿಕಿ ಜಾತಿಗಳ ಜೊತೆ ಇದೇ ಜಾತಿಯ ಪವಾರ ಮತ್ತು ತಳವಾರ ಜಾತಿಗಳಿಗೆ ಎಸ್.ಟಿ ಸೌಲಭ್ಯ ವಿಸ್ತರಿಸಲು ತಿಳಿಸಲಾಗಿದೆ. ಆದರೆ, ಹಿಂದುಳಿದ ವರ್ಗದಲ್ಲಿ ಬರುವ ಕಬ್ಬಲಿಗ, ತಳವಾರ ಜಾತಿಯವರಿಗೆ ಎಸ್.ಟಿ ಪ್ರಮಾಣ ಪತ್ರ ನೀಡಲು ಬರುವದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಹಾಗಾಗಿ, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಪಂಚನಾಮೆ ಮಾಡುವ ಸಂದರ್ಭದಲ್ಲಿ ಅರ್ಜಿದಾರರ ಅಚಾರ, ವಿಚಾರ, ಕುಲದೇವರು, ಶವಸಂಸ್ಕಾರ, ಮಾನವಶಾಸ್ತ್ರದ ಬಗ್ಗೆ ತಿಳಿದುಕೊಂಡು ನಾಯಕ ವಾಲ್ಮೀಕಿ ಬೇಡರ ಜಾತಿಗೆಸಂಬಂಧಪಟ್ಟ ನಾಯಕ ತಳವಾರ ಜಾತಿಯವರು ಎಂದು ದಾಖಲಾತಿಯನ್ನು ಸಂಗ್ರಹಿಸಿ ಎಸ್‌ಟಿ ಪ್ರಮಾಣ ಪತ್ರವನ್ನು ನೀಡಬೇಕು. ಹಿಂದುಳಿದ ಜಾತಿಯಾದ ಕಬ್ಬಲಿಗ, ತಳವಾರ ಸಮಾಜಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಬಾರದು ಮತ್ತು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ಪಡೆಯಲಾಗಿರುವ ಎಸ್.ಟಿ ಪ್ರಮಾಣ ಪತ್ರ ಮತ್ತು ಸಿಂಧುತ್ವವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ಚೂರಿ, ಅಯ್ಯಣ್ಣ ಕರದಳ್ಳಿ,ರಾಯಪ್ಪ ಚಾಮನೂರ, ಚಂದ್ರು ದೊರೆ, ಮಲ್ಲಿಕಾರ್ಜುನ, ಸುಭಾಶ್ಚಂದ್ರ, ಕಾಶಪ್ಪ, ಸಾಯಬಣ್ಣ, ಉಮೇಶ, ಭಗವಂತ ಮಾಲಗತ್ತಿ, ಜಗದೇವಿ, ರಾಮಕೃಷ್ಣ, ಮರಲಿಂಗಪ್ಪ, ಮೌನೇಶ, ಉಮೇಶ, ರಾಜು ನಾಯಕ, ಭಾಗಪ್ಪ ಮೊಗಲಾ, ಶ್ರೀಕಾಂತ ಕೊಳ್ಳಿ, ಮಹಾಂತೇಶ ಇದ್ದರು.ಪೋಟೋ: ೮-೧೦ ಸಿಟಿಪಿಅರ್ ೨
ಚಿತ್ತಾಪುರ ಪಟ್ಟಣದಲ್ಲಿ ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮರಾಯ ದೊರೆ ನೇತೃತ್ವದಲ್ಲಿ ಕೊಲಿ ಕಬ್ಬಲಿಗ, ತಳವಾರ ಜಾತಿಯವರಿಗೆ ಎಸ್.ಟಿ ಪ್ರಮಾಣ ಪತ್ರ ನೀಡಬಾರದೆಂದು ಒತ್ತಾಯಿಸಿ ತಹಸೀಲ್ದಾರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.