ಜಿಲ್ಲಾ ವ್ಯಾಪ್ತಿಯಲ್ಲಿರುವ ಅನರ್ಹ ಪಡಿತರ ಚೀಟಿಗಳ ರದ್ದು

| Published : Sep 11 2024, 01:04 AM IST

ಜಿಲ್ಲಾ ವ್ಯಾಪ್ತಿಯಲ್ಲಿರುವ ಅನರ್ಹ ಪಡಿತರ ಚೀಟಿಗಳ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಪಡಿತರ ಚೀಟಿದಾರರು ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವವರು, ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ ಪಡಿತರ ಚೀಟಿ, ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಅಕ್ಟೋಬರ್ ತಿಂಗಳ ಆಹಾರ ಪಾದಾರ್ಥಗಳನ್ನು ಸ್ಥಗಿತಗೊಳಿಸಲಾಗುವುದು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪಡಿತರ ಚೀಟಿದಾರರು ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವವರು, ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ ಪಡಿತರ ಚೀಟಿ, ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಅಕ್ಟೋಬರ್ ತಿಂಗಳ ಆಹಾರ ಪಾದಾರ್ಥಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ ತಿಳಿಸಿದ್ದಾರೆ.

ಚಾಮರಾಜನಗರ ತಾಲೂಕಿನಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವ 2084 ಪಡಿತರ ಚೀಟಿ, 1315 ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ 24 ಪಡಿತರ ಚೀಟಿ, 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 5550 ಪಡಿತರ ಚೀಟಿ ಹಾಗೂ ಆದಾಯ ತೆರಿಗೆ ಹೊಂದಿರುವ 360 ಪಡಿತರ ಚೀಟಿಗಳಿದ್ದು ಇವು ಅನರ್ಹ ಪಡಿತರ ಚೀಟಿಗಳಾಗಿವೆ.

ಗುಂಡ್ಲುಪೇಟೆ ತಾಲೂಕಿನಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವ 1696 ಪಡಿತರ ಚೀಟಿ, 835 ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ 17 ಪಡಿತರ ಚೀಟಿ, 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 1904 ಪಡಿತರ ಚೀಟಿ ಹಾಗೂ ಆದಾಯ ತೆರಿಗೆ ಹೊಂದಿರುವ 181 ಪಡಿತರ ಚೀಟಿಗಳಿದ್ದು, ಇವು ಅನರ್ಹ ಪಡಿತರ ಚೀಟಿಗಳಾಗಿವೆ.

ಕೊಳ್ಳೇಗಾಲ ತಾಲೂಕಿನಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವ 1424, 631 ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ 28, 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 2053 ಪಡಿತರ ಚೀಟಿ ಹಾಗೂ ಆದಾಯ ತೆರಿಗೆ ಹೊಂದಿರುವ 237 ಪಡಿತರ ಚೀಟಿಗಳನ್ನು ಅನರ್ಹಗೊಳಿಸಲಾಗಿದೆ.

ಹನೂರು ತಾಲೂಕಿನಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವ 621 ಪಡಿತರ ಚೀಟಿ, 311 ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ 18, 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 921 ಪಡಿತರ ಚೀಟಿ ಹಾಗೂ ಆದಾಯ ತೆರಿಗೆ ಹೊಂದಿರುವ 40 ಪಡಿತರ ಚೀಟಿಗಳಿದ್ದು ಇವು ಅನರ್ಹಗೊಂಡಿವೆ.

ಯಳಂದೂರು ತಾಲೂಕಿನಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವ 1699 ಪಡಿತರ ಚೀಟಿ, 518 ಮರಣ ಹೊಂದಿರುವ ವ್ಯಕ್ತಿಗಳ ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ 9, 1.20ಲಕ್ಷ ವಾರ್ಷಿಕ ಆದಾಯ ಹೊಂದಿರುವ 340 ಪಡಿತರ ಚೀಟಿ ಹಾಗೂ ಆದಾಯ ತೆರಿಗೆ ಹೊಂದಿರುವ 167 ಪಡಿತರ ಚೀಟಿಗಳನ್ನು ಅನರ್ಹಗೊಳಿಸಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದೇ ಇರುವ 7524 ಪಡಿತರ ಚೀಟಿಗಳನ್ನು ಅಮಾನತ್ತುಗೊಳಿಸಲಾಗಿದೆ. ಒಟ್ಟು 3610 ಮರಣ ಹೊಂದಿರುವ ವ್ಯಕ್ತಿಗಳನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗಿದೆ. 96 ಸರ್ಕಾರಿ ನೌಕರರು ಹೊಂದಿರುವ ಪಡಿತರ ಚೀಟಿಗಳಲ್ಲಿ 69 ಪಡಿತರ ಚೀಟಿಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 10768 ಪಡಿತರ ಚೀಟಿ ಹಾಗೂ ಆದಾಯ ತೆರಿಗೆ ಹೊಂದಿರುವ 985 ಪಡಿತರ ಚೀಟಿಗಳು ಇದ್ದು ಸದರಿ ಪಡಿತರ ಚೀಟಿಗಳನ್ನು ಪರಿಶೀಲಿಸಿ ರದ್ದುಪಡಿಸಲು ಕ್ರಮ ವಹಿಸಲಾಗಿದೆ ಎಂದರು.

ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ 39152 ಇ-ಕೆವೈಸಿ ಆಗದ ಫಲಾನುಭವಿಗಳಿದ್ದು, ಇವರು ತುರ್ತಾಗಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಖುದ್ದು ಹಾಜರಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಅಕ್ಟೋಬರ್ ಮಾಹೆಯ ಆಹಾರ ಪದಾರ್ಥವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.