ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಕ್ಯಾನ್ಸರ್‌ ಗುಣಪಡಿಸಬಹುದು -ಡಾ. ಕುಂದಾಪುರ

| Published : Feb 14 2024, 02:16 AM IST

ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಕ್ಯಾನ್ಸರ್‌ ಗುಣಪಡಿಸಬಹುದು -ಡಾ. ಕುಂದಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕ್ಯಾನ್ಸರ್ ಗಡ್ಡೆ ಮಾತ್ರ ತುಂಬಾ ಶೀಘ್ರವಾಗಿ ಬೆಳೆಯುವಂತಹ ಗಡ್ಡೆ, ಪ್ರಾರಂಭಿಕ ಹಂತದಲ್ಲಿ ಗಡ್ಡೆಯನ್ನು ಗುರುತಿಸಿದರೆ ಗುಣಪಡಿಸಬಹುದು ಹಾಗೂ ಗಡ್ಡೆ ಮತ್ತೆ ಬೆಳೆಯದಂತೆ ತಡೆಯಬಹುದು. ನಿಯಂತ್ರಣ ಮೀರಿ ಬೆಳೆದಾಗ ರೋಗವನ್ನು ಗುಣಪಡಿಸುವುದು ಕಷ್ಟ. ಚಟ ಮಾಡುವುದರಿಂದ ಗಂಡಸರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಖ್ಯಾತ ವೈದ್ಯರಾದ ಡಾ. ಗಣೇಶರಾವ ಕುಂದಾಪುರ ಹೇಳಿದರು.

ಗದಗ: ದೇಶದಲ್ಲಿ ಕ್ಯಾನ್ಸರ್ ಗಡ್ಡೆ ಮಾತ್ರ ತುಂಬಾ ಶೀಘ್ರವಾಗಿ ಬೆಳೆಯುವಂತಹ ಗಡ್ಡೆ, ಪ್ರಾರಂಭಿಕ ಹಂತದಲ್ಲಿ ಗಡ್ಡೆಯನ್ನು ಗುರುತಿಸಿದರೆ ಗುಣಪಡಿಸಬಹುದು ಹಾಗೂ ಗಡ್ಡೆ ಮತ್ತೆ ಬೆಳೆಯದಂತೆ ತಡೆಯಬಹುದು. ನಿಯಂತ್ರಣ ಮೀರಿ ಬೆಳೆದಾಗ ರೋಗವನ್ನು ಗುಣಪಡಿಸುವುದು ಕಷ್ಟ. ಚಟ ಮಾಡುವುದರಿಂದ ಗಂಡಸರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಖ್ಯಾತ ವೈದ್ಯರಾದ ಡಾ. ಗಣೇಶರಾವ ಕುಂದಾಪುರ ಹೇಳಿದರು. ಅವರು ಗದಗ ನಗರದ ಅಕ್ಕನ ಬಳಗದಲ್ಲಿ ನಡೆದ ಮಾಸಿಕ ಕಾರ್ಯಕ್ರಮದಲ್ಲಿ ಕ್ಯಾನ್ಸರ ಜಾಗೃತಿಯ ಬಗ್ಗೆ ಉಪನ್ಯಾಸ ನೀಡಿದರು. ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್, ಗರ್ಭ ಕ್ಯಾನ್ಸರ್, ಅಂಡಾಶಯ ಕ್ಯಾನ್ಸರ್ ಬರುವುದು ಸಾಮಾನ್ಯವಾಗಿದೆ. ಶೇ. 5 ಜನರಿಗೆ ಅನುವಂಶೀಯವಾಗಿ ಬರಬಹುದು. ಕ್ಯಾನ್ಸರ್ ಬರಲು ಕಾರಣಗಳನ್ನು ಹುಡುಕುವುದು ಕಷ್ಟ. ಮಾನಸಿಕ ಒತ್ತಡವೂ ಈ ಕಾಯಿಲೆ ಬರಲು ಮುಖ್ಯ ಕಾರಣವಾಗುತ್ತದೆ ಎಂದರು. ಅರವತ್ತು ವರ್ಷ ದಾಟಿದ ಮಹಿಳೆಯರಿಗೆ ಕೂಡ ಕ್ಯಾನ್ಸರ್ ಬರುವುದು ಸಾಮಾನ್ಯ. ಆದರೆ ಅದನ್ನು ಬೇಗ ಗುಣಪಡಿಸಬಹುದು. 40 ವರ್ಷ ದಾಟಿದ ಮಹಿಳೆಯರು ಮೊಮೊಗ್ರಫಿ ಅನ್ನುವ ತಪಾಸಣೆ ಮಾಡಿಸುತ್ತಾ ಇರುವುದರಿಂದ ಈ ರೋಗದಿಂದ ಜಾಗೃತರಾಗಿರಲು ಸಹಾಯವಾಗುತ್ತದೆ. ಮನೆಯಲ್ಲಿಯೇ ಮಹಿಳೆಯರು ತಮ್ಮ ತಮ್ಮ ತಪಾಸಣೆಯನ್ನು ಆಗಿದ್ದಾಗೆ ಮಾಡಿಕೊಳ್ಳುವುದರಿಂದ ಗಂಟುಗಳು ಬಂದಿದ್ದು ಗೊತ್ತಾಗುತ್ತದೆ ಎಂದರು. ಕ್ಯಾನ್ಸರ್ ರೋಗ ಬಂದನಂತರ ಬರೀ ಆಪರೇಷನ್ ಮಾಡಿಸದರಷ್ಟೆ ಸಾಲದು, ನಂತರದಲ್ಲಿ ಕಿಮೋಥೆರಪಿ, ರೇಡಿಯೇಷನ್ ನಂಥ ಹಂತಗಳು ಬರುತ್ತವೆ. ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ವ್ಯಾಕ್ಸಿನೇಷನ ಬಂದಿದೆ. ಅದನ್ನು ಹಾಕಿಸಿಕೊಳ್ಳುವುದು ಉತ್ತಮ ಎಂದರು.

ಅಕ್ಕನ ಬಳಗದ ಅಧ್ಯಕ್ಷ ಲಲಿತಾ ಬಾಳಿಹಳ್ಳಿಮಠ ಸ್ವಾಗತಿಸಿದರು. ಅನ್ನಪೂರ್ಣ ಮಾಳೆಕೊಪ್ಪಮಠ ಉಪಸ್ಥಿತರಿದ್ದರು. ಖಜಾಂಚಿ ಜಯಲಕ್ಷ್ಮೀ ಬಳ್ಳಾರಿ ಅತಿಥಿಗಳ ಪರಿಚಯ ಮಾಡಿದರು. ಪ್ರೇಮಾ ಮೇಟಿ ಪ್ರಸಾದದ ಭಕ್ತಸೇವೆ ವಹಿಸಿಕೊಂಡಿದ್ದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ರೇಣುಕಾ ಅಮತ್ಯಾ ವಂದಿಸಿದರು.