ವಿಶ್ವದಲ್ಲಿ ಕ್ಯಾನ್ಸರ್ ಹಚ್ಚಳ ಕಳವಳಕಾರಿ ವಿಷಯ: ಡಾ.ಭಾಗ್ಯಲಕ್ಷ್ಮೀ

| Published : Oct 09 2024, 01:32 AM IST

ವಿಶ್ವದಲ್ಲಿ ಕ್ಯಾನ್ಸರ್ ಹಚ್ಚಳ ಕಳವಳಕಾರಿ ವಿಷಯ: ಡಾ.ಭಾಗ್ಯಲಕ್ಷ್ಮೀ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ: ನವದೆಹಲಿಯ ಎಂಎಂಟಿಸಿಸಿ ಕಾಲ್ಸ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನ್ಯಾಕ್ ಸಮಿತಿ, ಮಹಿಳಾ ಘಟಕದ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಯಾನ್ಸರ್ ಅರಿವು-ಜಾಗೃತಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ:ನವದೆಹಲಿಯ ಎಂಎಂಟಿಸಿಸಿ ಕಾಲ್ಸ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನ್ಯಾಕ್ ಸಮಿತಿ, ಮಹಿಳಾ ಘಟಕದ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಯಾನ್ಸರ್ ಅರಿವು-ಜಾಗೃತಿ ಕಾರ್ಯಕ್ರಮ ಜರುಗಿತು.ಈ ವೇಳೆ ತಾಲೂಕು ಆಸ್ಪತ್ರೆಯ ಪ್ರಸೂತಿ ಮತ್ತು ಹೆರಿಗೆ ವೈದ್ಯೆ ಡಾ.ಭಾಗ್ಯಲಕ್ಷ್ಮೀ ಗೋನಾಳ ಮಾತನಾಡಿ, ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಪ್ರಗತಿಯಗಳ ಹೊರತಾಗಿಯೂ ವಿಶ್ವಾದ್ಯಂತ ಕ್ಯಾನ್ಸರ್ ಹೆಚ್ಚಳ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದ್ದು, ಸಾವಿಗೆ ಕಾರಣವಾಗಬಹುದು. ನಿಯಮಿತವಾಗಿ ಪರೀಕ್ಷೆಗೆ ಒಳಗಾಗುವುದು ಬಹುಮುಖ್ಯವಾಗಿದೆ. ಧೂಮಪಾನ ತ್ಯಜಿಸುವಿಕೆ ಬಹುಮುಖ್ಯ. ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ ಕ್ಯಾನ್ಸರ್ ಅಭಿವೃದ್ಧಿ ಪಡಿಸುವ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ಉಂಟಾಗಲು ಕಾರಣಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಮಾಹಿತಿ ನೀಡಿದರು.ಕಾಲೇಜಿನ ಪ್ರಾಚಾರ್ಯ ಡಾ.ನೀಲಪ್ಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಕ್ ಸಂಚಾಲಕ ಅಮಿತ ಮಿರ್ಜಿ, ಮಹಿಳಾ ಘಟಕದ ಸಂಚಾಲಕಿ ವಿಜಯಲಕ್ಷ್ಮೀ, ಉಪನ್ಯಾಸಕಿ ಮಮತಾ.ಎನ್. ಇದ್ದರು. ಉಪನ್ಯಾಸಕಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಉಪನ್ಯಾಸಕ ಲಕ್ಷ್ಮಣ ವಾಲೀಕಾರ ಸ್ವಾಗತಿಸಿದರು. ಉಪನ್ಯಾಸಕ ಭೀಮಶಿ ಹಡಪದ ನಿರೂಪಿಸಿದರು. ಉಪನ್ಯಾಸಕ ಪ್ರಶಾಂತ ಮಮದಾಪುರ ವಂದಿಸಿದರು.