ಸಿಇಟಿ ರ್‍ಯಾಂಕ್‌ ಗಿಟ್ಟಿಸಿದವರಲ್ಲಿ ಬೆಂಗಳೂರಿನ ಅಭ್ಯರ್ಥಿಗಳೇ ಹೆಚ್ಚು

| Published : Jun 02 2024, 01:46 AM IST / Updated: Jun 02 2024, 05:22 AM IST

ಸಿಇಟಿ ರ್‍ಯಾಂಕ್‌ ಗಿಟ್ಟಿಸಿದವರಲ್ಲಿ ಬೆಂಗಳೂರಿನ ಅಭ್ಯರ್ಥಿಗಳೇ ಹೆಚ್ಚು
Share this Article
  • FB
  • TW
  • Linkdin
  • Email

ಸಾರಾಂಶ

ಸಿಇಟಿ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಬಹುತೇಕ ಎಲ್ಲ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.

 ಬೆಂಗಳೂರು :  ಸಿಇಟಿ ಫಲಿತಾಂಶದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು ರ್‍ಯಾಂಕ್‌ ಗಿಟ್ಟಿಸಿದ್ದು, ಎಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ಐದೂ ರ್‍ಯಾಂಕ್‌ಗಳು ಬೆಂಗಳೂರಿನ ಅಭ್ಯರ್ಥಿಗಳೇ ತೆಕ್ಕೆಗೆ ಹಾಕಿಕೊಂಡಿದ್ದಾರೆ.

ಎಂಜಿನಿಯರಿಂಗ್‌ ವಿಭಾಗದಲ್ಲಿ ಬೆಂಗಳೂರು ಸಹಕಾರ ನಗರದ ನಾರಾಯಣ ಒಲಿಂಪಿಯಾಡ್‌ ಶಾಲೆಯ ಹರ್ಷ ಕಾರ್ತಿಕೇಯ ವಿ. ಮೊದಲ ರ್‍ಯಾಂಕ್ ಪಡೆದಿದ್ದಾರೆ. ಉಳಿದಂತೆ ಮನೋಜ್‌ ಸೊಹನ್‌ ಗಾಜುಲ, ಅಭಿನವ್‌ ಪಿ.ಜೆ., ಸನಾ ತಬಸ್ಸುಮ್‌, ಅನಿಮೇಶ್‌ ಸಿಂಗ್‌ ರಾಥೋರ್ ಮೊದಲ 5 ಸ್ಥಾನ ಪಡೆದಿದ್ದಾರೆ.

ಉಳಿದ ಕೋರ್ಸ್‌ಗಳಲ್ಲೂ ಬೆಂಗಳೂರಿಗರು ಪ್ರಮುಖ ರ್‍ಯಾಂಕ್‌ ಗಿಟ್ಟಿಸಿದ್ದಾರೆ. ಬೆಂಗಳೂರಿನ ಸಹಕಾರನಗರದ ಒಲಿಂಪಿಯಾಡ್ ಶಾಲೆ, ಮಾರತ್‌ಹಳ್ಳಿ ಬ್ರಿಡ್ಜ್‌ನ ಶ್ರೀ ಚೈತನ್ಯ ಟೆಕ್ನೋ ಶಾಲೆ, ಜಯನಗರದ ನೆಹರೂ ಸ್ಮಾರಕ ವಿದ್ಯಾಲಯ, ಆಮ್ಕೋ ಲೇಔಟ್‌ ನಾರಾಯಣ ಪಿಯು ಕಾಲೇಜು, ಜೆ.ಪಿ.ನಗರದ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಶೇಷಾದ್ರಿಪುರಂ ಸಂಯುಕ್ತ ಪಿಯು ಕಾಲೇಜು, ದಾಸರಹಳ್ಳಿಯ ನಾರಾಯಣ ಪಿಯು ಕಾಲೇಜು, ಜಾಲಹಳ್ಳಿಯ ಕೇಂದ್ರೀಯ ವಿದ್ಯಾಲಯ, ಯಲಹಂಕ ಉಪನಗರ ವೈಟ್‌ಫೀಲ್ಡ್‌ ನಾರಾಯಣ ಇ ಟೆಕ್ನೋ ಸ್ಕೂಲ್‌ಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಏಕಾಏಕಿ ಫಲಿತಾಂಶ ಪ್ರಕಟ: ಅಭ್ಯರ್ಥಿಗಳ ಆಕ್ರೋಶ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಬಿಡುಗಡೆ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ವರ್ಷ ಸಿಇಟಿ ಫಲಿತಾಂಶದ ದಿನಾಂಕ ಘೋಷಣೆ ಮಾಡಿ, ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತಿತ್ತು.

ಆದರೆ, ಶನಿವಾರ ಸಂಜೆ ಏಕಾಏಕಿ ಫಲಿತಾಂಶ ಪ್ರಕಟಿಸಿದ್ದರಿಂದ ಅಭ್ಯರ್ಥಿಗಳಿಗೆ ಆಘಾತ ಉಂಟಾಗಿದೆ. ಅಲ್ಲದೆ, ಏಕಾಏಕಿ ಫಲಿತಾಂಶ ಪ್ರಕಟವಾದ ಸುದ್ದಿ ತಿಳಿಯುತ್ತಿದ್ದಂತೆ ಫಲಿತಾಂಶ ತಿಳಿಯಲು ಒದ್ದಾಡುವಂತಾಯಿತು. ಎಲ್ಲರೂ ಒಟ್ಟಿಗೆ ಫಲಿತಾಂಶ ವೀಕ್ಷಣೆಗೆ ಲಾಗಿನ್ ಆದ ಕಾರಣ ಕೆಇಎ ವೆಬ್ಸೈಟ್ ಡೌನ್ ಆಗಿತ್ತು. ಇದಲ್ಲದೆ ಪ್ರಕಟವಾದ ಫಲಿತಾಂಶದಲ್ಲಿ ರ್ಯಾಂಕಿಂಗ್ನಲ್ಲಿ ದೋಷಗಳಿವೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ.

ಪೋಷಕರೊಬ್ಬರು ತಮ್ಮ ಪುತ್ರಿ ದ್ವಿತೀಯ ಪಿಯುಸಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತದಲ್ಲಿ ಶೇ.96 ರಷ್ಟು ಅಂಕ ಪಡೆದಿದ್ದು, ಅವರ ರ್ಯಾಂಕನ್ನು ಪ್ರಕಟಿಸಿಲ್ಲ. ಇದರಿಂದ ನೊಂದು ಮಗಳು ಅಳುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಇನ್ನು, ಮತ್ತೊಬ್ಬರ ಫಲಿತಾಂಶದಲ್ಲಿ ಪಿಯು ಪರೀಕ್ಷೆಯ ಅಂಕಗಳನ್ನು ತಪ್ಪಾಗಿ ಮುದ್ರಿಸಲಾಗಿದೆ ಎಂಬುದು ಸೇರಿದಂತೆ ಹಲವು ದೂರುಗಳು ವ್ಯಕ್ತವಾಗಿವೆ.

ನಾಟಾ-2024?:

ನಾಟಾ ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್‌ಳ ಪ್ರವೇಶಕ್ಕೆ ರ್ಯಾಂಕನ್ನು ನಂತರ ಪ್ರಕಟಿಸಲಾಗುವುದು. ಅದೇ ರೀತಿ, ಬಿಪಿಟಿ, ಬಿಪಿಒ, ಬಿ.ಎಸ್ಸಿ ಅಲೈಡ್ ಸೈನ್ಸ್ ರ್ಯಾಂಕ್ ಪಟ್ಟಿಯನ್ನು ಕೂಡ ನಂತರದಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಗಳನ್ನು ತಾಳೆ ನೋಡಿ:

ಅಭ್ಯರ್ಥಿಗಳು ಓಎಂಆರ್ ಉತ್ತರ ಪತ್ರಿಕೆಯಲ್ಲಿ ನಮೂದಿಸಿರುವ ಉತ್ತರಗಳನ್ನು ಮತ್ತು ಸರಿಯಾದ ಉತ್ತರಗಳನ್ನು ಕೂಡ ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಇವುಗಳನ್ನು ತಮಗೆ ಪರೀಕ್ಷಾ ದಿನದಂದೇ ನೀಡಿರುವ ಓಎಂಆರ್ ಉತ್ತರ ಪತ್ರಿಕೆಗಳ ಜತೆ ತಾಳೆ ಮಾಡಿ ನೋಡಿಕೊಳ್ಳಬಹುದು. ವಿವಿಧ ಮೀಸಲಾತಿ ಪ್ರವರ್ಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳ ವಿವರಗಳನ್ನು ಮತ್ತು ಜಿಲ್ಲಾವಾರು ಅಭ್ಯರ್ಥಿಗಳ ವಿವರಗಳನ್ನು ಕೂಡ ಈಗಾಗಲೇ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಇದುವರೆಗೂ ಕೆಲವು ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯಲ್ಲಿ ಜನ್ಮ ದಿನಾಂಕ/ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಿಲ್ಲ. ಇಂಥವರ ಫಲಿತಾಂಶವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇಂತಹ ಅಭ್ಯರ್ಥಿಗಳು ಪ್ರಾಧಿಕಾರದ ಪೋರ್ಟಲ್ ನಲ್ಲಿ ಅಗತ್ಯ ವಿವರಗಳನ್ನು ತುಂಬಿದ ತಕ್ಷಣ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆದ್ದರಿಂದ ಈ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ತಿಳಿಸಲಾಗಿದೆ.

2 ಗ್ರೇಸ್ ಅಂಕ: ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿದ್ದವು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಷಯ ಪರಿಣಿತರ ವರದಿಯನ್ನಾಧರಿಸಿ ಭೌತಶಾಸ್ತ್ರದ 9, ರಸಾಯನಶಾಸ್ತ್ರದ 15, ಗಣಿತ ವಿಷಯದ 15, ಜೀವಶಾಸ್ತ್ರದ 11 ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಲಾಗಿದೆ. ಇದೇ ಕಾರಣಕ್ಕೆ ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ತಲಾ 1 ಕೃಪಾಂಕ ನೀಡಲಾಗಿದೆ.

ವಿವಿಧ ಕೋರ್ಸ್‌ಗಳ ಟಾಪ್‌ 5 ರಾಂಕ್‌ ಪಡೆದವರ ಪಟ್ಟಿ

ಎಂಜಿನಿಯರಿಂಗ್‌:

ಮೊದಲ ರ್‍ಯಾಂಕ್: ಹರ್ಷ ಕಾರ್ತಿಕೇಯ ವಿ. - ನಾರಾಯಣ ಒಲಿಂಪಿಯಾಡ್ ಶಾಲೆ ಸಹಕಾರನಗರದ್ವಿತೀಯ ರ್‍ಯಾಂಕ್: ಮನೋಜ್‌ ಸೊಹನ್‌ ಗಾಜುಲ - ಶ್ರೀ ಚೈತನ್ಯ ಟೆಕ್ನೋ ಶಾಲೆ, ಮಾರತ್‌ಹಳ್ಳಿ ಬ್ರಿಡ್ಜ್

ತೃತೀಯ ರ್‍ಯಾಂಕ್ - ಅಭಿನವ್‌ ಪಿ.ಜೆ. - ನೆಹರೂ ಸ್ಮಾರಕ ವಿದ್ಯಾಲಯ, ಜಯನಗರ4ನೇ ರ್‍ಯಾಂಕ್‌ - ಸನಾ ತಬಸ್ಸುಮ್‌ - ನಾರಾಯಣ ಪಿಯು ಆಲೇಜು, ಆಮ್ಕೋ ಲೇಔಟ್‌, ಸಹಕಾರನಗರ

5ನೇ ರ್‍ಯಾಂಕ್ - ಅನಿಮೇಶ್‌ ಸಿಂಗ್‌ ರಾಥೋರ್ - ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಜಂಬೂಸವಾರಿ ದಿನ್ನೆ, ಜೆ.ಪಿ. ನಗರ

ಯೋಗಾ ವಿಜ್ಞಾನ (ಬಿಎನ್‌ವೈಎಸ್‌) ರ್‍ಯಾಂಕ್ಮೊದಲ ರ್‍ಯಾಂಕ್: ನಿಹಾರ್‌ ಎಸ್‌.ಆರ್‌. - ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರು

ದ್ವಿತೀಯ ರ್‍ಯಾಂಕ್: ಸಂಜನಾ ಸಂತೋಶ್ ಕಟ್ಟಿ - ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರುತೃತೀಯ ರ್‍ಯಾಂಕ್: ಪ್ರೀತಮ್‌ ರಾವಲಪ್ಪ ಪನಸುಡ್ಕರ್ - ಶೇಷಾದ್ರಿಪುರಂ ಸಂಯುಕ್ತ ಪಿಯು ಕಾಲೇಜು, ಶೇಷಾದ್ರಿಪುರಂ

4ನೇ ರ್‍ಯಾಂಕ್‌ : ವಜ್ರಕಾಂತ್ ಮಿರಾಗಿ - ನಾರಾಯಣ ಪಿಯು ಕಾಲೇಜು, ದಾಸರಹಳ್ಳಿ5ನೇ ರ್‍ಯಾಂಕ್: ಸ್ನೇಹಾ ಇದಯಾತ್- ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿಬಿಎಸ್ಸಿ (ಕೃಷಿ)

ಮೊದಲ ರ್‍ಯಾಂಕ್- ಹಾರ್ ಎಸ್‌.ಆರ್.- ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರುದ್ವಿತೀಯ ರ್‍ಯಾಂಕ್: ಮಿಹಿರ್‌ ಗಿರೀಶ್ ಕಾಮತ್- ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರು

ತೃತೀಯ ರ್‍ಯಾಂಕ್: ಅನಿಮೇಶ್‌ ಸಿಂಗ್‌ ರಾಥೋರ್ - ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಜಂಬೂಸವಾರಿ ದಿನ್ನೆ4ನೇ ರ್‍ಯಾಂಕ್: ಸಂಜನಾ ಸಂತೋಶ್ ಕಟ್ಟಿ - ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರು

5ನೇ ರ್‍ಯಾಂಕ್: ಆರ್.ಎಂ. ಹರ್ಷಿತಾ - ವಿದ್ಯಾಜ್ಯೋತಿ ಪಿಯು ಕಾಲೇಜು, ಕೋಲಾರ

ಪಶು ವೈದ್ಯಕೀಯ ವಿಜ್ಞಾನ (ವೆಟರ್ನರಿ ಸೈನ್ಸಸ್)

ಪ್ರಥಮ ರ್‍ಯಾಂಕ್: ಕಲ್ಯಾಣ್ ವಿ - ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಮಾರತ್‌ಹಳ್ಳಿ ಬ್ರಿಡ್ಜ್‌ದ್ವಿತೀಯ ರ್‍ಯಾಂಕ್: ಡಿ.ಎನ್‌. ನಿತಿನ್‌ - ನಾರಾಯಣ ಇ ಟೆಕ್ನೋ ಸ್ಕೂಲ್‌, ಯಲಹಂಕ ನ್ಯೂಟೌನ್

ತೃತೀಯ ರ್‍ಯಾಂಕ್: ನಿಹಾರ್ ಎಸ್‌.ಆರ್.- ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರು4ನೇ ರ್‍ಯಾಂಕ್: ಧ್ರುವ್‌ ಅಶ್ವತಿ - ನಾರಾಯಣ ಇ ಟೆಕ್ನೋ ಸ್ಕೂಲ್‌, ವೈಟ್‌ ಫೀಲ್ಡ್

5ನೇ ರ್‍ಯಾಂಕ್: ಸ್ನೇಹಾ ಇದಾಯತ್ - ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿ

ಬಿ-ಫಾರ್ಮಾಪ್ರಥಮ ರ್‍ಯಾಂಕ್: ಕಲ್ಯಾಣ್ ವಿ - ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಮಾರತ್‌ಹಳ್ಳಿ ಬ್ರಿಡ್ಜ್‌

ದ್ವಿತೀಯ ರ್‍ಯಾಂಕ್: ಹರ್ಷ ಕಾರ್ತಿಕೇಯ ವಿ. - ನಾರಾಯಣ ಒಲಿಂಪಿಯಾಡ್ ಶಾಲೆ ಸಹಕಾರನಗರತೃತೀಯ ರ್‍ಯಾಂಕ್:ಡಿ.ಎನ್‌. ನಿತಿನ್‌ - ನಾರಾಯಣ ಇ ಟೆಕ್ನೋ ಸ್ಕೂಲ್‌, ಯಲಹಂಕ ನ್ಯೂಟೌನ್

4ನೇ ರ್‍ಯಾಂಕ್: ಸ್ನೇಹಾ ಇದಾಯತ್- - ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿ5ನೇ ರ್‍ಯಾಂಕ್: ನಿಹಾರ್ ಎಸ್‌.ಆರ್.- ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರುಡಿ-ಫಾರ್ಮಾ

ಪ್ರಥಮ ರ್‍ಯಾಂಕ್: ಕಲ್ಯಾಣ್ ವಿ - ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಮಾರತ್‌ಹಳ್ಳಿ ಬ್ರಿಡ್ಜ್‌ದ್ವಿತೀಯ ರ್‍ಯಾಂಕ್: ಹರ್ಷ ಕಾರ್ತಿಕೇಯ ವಿ. - ನಾರಾಯಣ ಒಲಿಂಪಿಯಾಡ್ ಶಾಲೆ ಸಹಕಾರನಗರ

ತೃತೀಯ ರ್‍ಯಾಂಕ್: ಡಿ.ಎನ್‌. ನಿತಿನ್‌ - ನಾರಾಯಣ ಇ ಟೆಕ್ನೋ ಸ್ಕೂಲ್‌, ಯಲಹಂಕ ನ್ಯೂಟೌನ್4ನೇ ರ್‍ಯಾಂಕ್: ಸ್ನೇಹಾ ಇದಾಯ್‌ - ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿ

5ನೇ ರ್‍ಯಾಂಕ್: ನಿಹಾರ್ ಎಸ್‌.ಆರ್.- ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರು

ಬಿಎಸ್ಸಿ ನರ್ಸಿಂಗ್ಪ್ರಥಮ ರ್‍ಯಾಂಕ್: ಕಲ್ಯಾಣ್ ವಿ - ಶ್ರೀ ಚೈತನ್ಯ ಟೆಕ್ನೋ ಸ್ಕೂಲ್‌, ಮಾರತ್‌ಹಳ್ಳಿ ಬ್ರಿಡ್ಜ್‌

ದ್ವಿತೀಯ ರ್‍ಯಾಂಕ್: ಡಿ.ಎನ್‌. ನಿತಿನ್‌ - ನಾರಾಯಣ ಇ ಟೆಕ್ನೋ ಸ್ಕೂಲ್‌, ಯಲಹಂಕ ನ್ಯೂಟೌನ್ತೃತೀಯ ರ್‍ಯಾಂಕ್: ನಿಹಾರ್ ಎಸ್‌.ಆರ್.- ಎಕ್ಸ್‌ಪರ್ಟ್‌ ಪದವಿ ಪೂರ್ವ ವಿಜ್ಞಾನ ಕಾಲೇಜು, ಮಂಗಳೂರು

4ನೇ ರ್‍ಯಾಂಕ್: ಧ್ರುವ್‌ ಅಶ್ವತಿ - ನಾರಾಯಣ ಇ ಟೆಕ್ನೋ ಸ್ಕೂಲ್‌, ವೈಟ್‌ ಫೀಲ್ಡ್5ನೇ ರ್‍ಯಾಂಕ್: ಸ್ನೇಹಾ ಇದಾಯತ್ - ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿ

ಸಿಇಟಿ 3ನೇ ರ್‍ಯಾಂಕ್‌ ಬರಲಿದೆ ಎಂಬ ನಿರೀಕ್ಷೆ ಇರಲಿಲ್ಲ. ಹಾಗೆಯೇ ಜೆಇಇ ಮೇನ್ಸ್‌ನಲ್ಲಿ 126ನೇ ರ್‍ಯಾಂಕ್ ಬಂದಿದೆ. ಬಾಂಬೆ ಅಥವಾ ದೆಹಲಿ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಂದುವರಿಯುವ ಆಲೋಚನೆ ಇದೆ. ಕೋಡಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.- ಅಭಿವನ್ ಪಿ.ಜೆ., ನೆಹರು ಸ್ಮಾರಕ ವಿದ್ಯಾಲಯ, ಬೆಂಗಳೂರು, (ಎಂಜಿನಿಯರಿಂಗ್‌ 3ನೇ ರ್‍ಯಾಂಕ್)ಬಾಂಬೆಯ ಬೆಹರೀನ್‌ನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ. ವೈದ್ಯಕೀಯ ಕ್ಷೇತ್ರದಲ್ಲಿ ಓದು ಮುಂದುವರೆಸಿ ಸಾಧನೆ ಮಾಡಬೇಕು ಎಂಬುದು ನನ್ನ ಗುರಿ. ಓದಿನ ಜತೆಗೆ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದೇನೆ.-ಮಿಹಿರ್ ಗಿರೀಶ್ ಕಾಮತ್, ಕೃಷಿ ವಿಜ್ಞಾನ 2ನೇ ರ್‍ಯಾಂಕ್ನಿರೀಕ್ಷೆಯಂತೆಯೇ ಸಿಇಟಿಯಲ್ಲಿ ಉತ್ತಮ ರ್‍ಯಾಂಕ್‌ ಬಂದಿದೆ. ಜೆಇಇ ಅಡ್ವಾನ್ಸ್‌ಡ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಮೇನ್ಸ್‌ನಲ್ಲಿ 3,300 ರ್‍ಯಾಂಕ್‌ ಬಂದಿದೆ. ಸೂರತ್ಕಲ್ ಎನ್‌ಐಟಿಯಲ್ಲಿ ಕಂಪ್ಯೂಟ್ ಸೈನ್ಸ್ ಅಥವಾ ಇನ್‌ಫಾರ್ಮೇಷನ್ ಸೈನ್ಸ್ ಅಧ್ಯಯನ ಮಾಡುವ ಗುರಿ ಹೊಂದಿದ್ದೇನೆ.

-ಪ್ರಭಾವ್, ಆರ್‌.ವಿ. ಕಾಲೇಜು, (ಎಂಜಿನಿಯರಿಂಗ್‌ 6ನೇ ರ್‍ಯಾಂಕ್)