ಸಾರಾಂಶ
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶುಕ್ರವಾರ ಸಂಜೆ ಪಟ್ಟಣದಲ್ಲಿ ಎನ್‌ಕರೇಜ್ ಗ್ರುಪ್, ಸ್ಫೂರ್ತಿ ಫೌಂಡೇಶನ್, ರಹಿಮಾನ್ ಫೌಂಡೇಶನ್, ಡಿ.ಎಸ್.ಎಸ್ ಸಂಘಟನೆಯವರು ಮೊಂಬತ್ತಿ ಬೆಳಗಿಸಿ ಪ್ರತಿಭಟಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶಾಸಕ ವಿಶ್ವಾಸ ವೈದ್ಯರಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸವದತ್ತಿ
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶುಕ್ರವಾರ ಸಂಜೆ ಪಟ್ಟಣದಲ್ಲಿ ಎನ್‌ಕರೇಜ್ ಗ್ರುಪ್, ಸ್ಫೂರ್ತಿ ಫೌಂಡೇಶನ್, ರಹಿಮಾನ್ ಫೌಂಡೇಶನ್, ಡಿ.ಎಸ್.ಎಸ್ ಸಂಘಟನೆಯವರು ಮೊಂಬತ್ತಿ ಬೆಳಗಿಸಿ ಪ್ರತಿಭಟಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶಾಸಕ ವಿಶ್ವಾಸ ವೈದ್ಯರಗೆ ಮನವಿ ಸಲ್ಲಿಸಿದರು.ಪಟ್ಟಣದ ಆನಿ ಅಗಸಿಯಿಂದ ಗಾಂಧಿಚೌಕ್ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯವರೆಗೆ ಕ್ಯಾಂಡಲ್ ಮೆರವಣಿಗೆ ಮಾಡಲಾಯಿತು.
ಈ ವೇಳೆ ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಕೊಲೆ ಆರೋಪಿತಗೆ ತಕ್ಕ ಶಿಕ್ಷೆಯಾಗಬೇಕಿದ್ದು, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕಠಿಣ ಶಿಕ್ಷೆ ಕೊಡಿಸುವುದರ ಜೊತೆಗೆ ಮೃತ ನೇಹಾಳ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.ಫಕ್ರುಸಾಬ ನಧಾಪ್ ಮಾತನಾಡಿ, ಹೆಣ್ಣು ಮಗಳ ಮೇಲೆ ಆಗಿರುವ ಹೇಯ ಕೃತ್ಯವನ್ನು ಖಂಡಿಸುತ್ತೇವೆ. ಕೊಲೆ ಆರೋಪಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.