ಸಾರಾಂಶ
ರಸ್ತೆ ಬದಿಯಲ್ಲಿದ್ದ ಕಲ್ಲಿನ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟರೆ, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಸಮೀಪದ ತಾವರೇಕೆರೆ ಗೇಟ್ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ ರಸ್ತೆ ಬದಿಯಲ್ಲಿದ್ದ ಕಲ್ಲಿನ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟರೆ, ಮತ್ತೋರ್ವ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಸಮೀಪದ ತಾವರೇಕೆರೆ ಗೇಟ್ ಬಳಿ ನಡೆದಿದೆ.
ತಂಡಗ ಗ್ರಾಮದ ಗೋವಿಂದಪ್ಪ ಅವರ ಮಗ ಲಿಂಗರಾಜು (೩೫) ಹಾಗೂ ಅದೇ ಗ್ರಾಮದ ಚಂದ್ರಕೀರ್ತಿ ಜೈನ್ ಎಂಬುವವರ ಪುತ್ರ ಅಕ್ಷಯ್ (೩೫) ಕೆ.ಬಿ,ಕ್ರಾಸ್ ನಿಂದ ತಮ್ಮ ಗ್ರಾಮಕ್ಕೆ ಗುರುವಾರ ತಡರಾತ್ರಿ ಬರುವಾಗ ತಾವರೇಕೆರೆಯ ಕೆರೆಕೋಡಿ ಬಳಿ ಅಪಘಾತ ನಡೆದಿದೆ. ಈ ವೇಳೆ ಲಿಂಗರಾಜು ಸ್ಥಳದಲ್ಲೇ ಮೃತಪಟ್ಟರೆ, ಅಕ್ಷಯ್ ಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.ಲಿಂಗರಾಜು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಅಪಘಾತವಾದ ಸಂಧರ್ಭದಲ್ಲಿ ಕೆರೆಯ ಬಳಿ ಇದ್ದ ಮೀನುಗಾ ರರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಆ್ಯಂಬುಲೆನ್ಸ್ ಮೂಲಕ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲು ಸಹಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.