ಸಾರಾಂಶ
ಕನ್ನಡ ಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹಿರೀಕಾಟಿ ಗೇಟ್ ಬಳಿ ಬ್ರಿಜಾ ಕಾರು ಹಾಗೂ ಎರಡು ಬೈಕ್ ನಡುವೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ಪಪ್ಪಿದ್ದು, ಓರ್ವನಿಗೆ ತೀವ್ರ ಪೆಟ್ಟುಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಶಶಿಧರ್, ಶಶಿಧರ್ ತಾಯಿ ಭಾಗ್ಯಮ್ಮ, ಪತ್ನಿ ಶಾಲಿನಿ ಸ್ಥಳದಲ್ಲೆ ಸಾವನ್ನಪ್ಪಿದರೆ, ನಂಜನಗೂಡು ತಾಲೂಕಿನ ಹೆಮ್ಮರಗಾಲದ ರಾಜಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬೇಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ಸುದ್ದಿ ತಿಳಿದು ಬೇಗೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಶವಗಳು ಹಾಗೂ ಗಾಯಾಳುವನ್ನು ಬೇಗೂರು ಆಸ್ಪತ್ರೆಗೆ ಸಾಗಿಸಿದ್ದಾರೆ.ಏನಿದು ಘಟನೆ?ನಂಜನಗೂಡು ತಾಲೂಕಿನ ಕೂಡ್ಲಾಪುರದ ಶಶಿಧರ್ ತನ್ನ ಬೈಕ್‌ನಲ್ಲಿ ಪತ್ನಿ ಶಾಲಿನಿ, ತಾಯಿ ಭಾಗ್ಯಮ್ಮ ಜೊತೆ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕದೇವಮ್ಮನ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಹಿರೀಕಾಟಿ ಗೇಟ್ ಬಳಿ ಅಪಘಾತ ನಡೆದಿದೆ.ಶಶಿಧರ್ ಬೈಕ್ ಹಿಂಬದಿ ಬರುತ್ತಿದ್ದ ಹೆಮ್ಮರಗಾಲದ ರಾಜಣ್ಣನಿಗೂ ಕಾರು ತಗುಲಿ ಗಾಯಗೊಂಡಿದ್ದಾರೆ. ಕಾರು ಬೆಂಡಗಳ್ಳಿ ಗ್ರಾಮದ ಲೋಕೇಶ್‌ಗೆ ಸೇರಿದ ಎನ್ನಲಾಗಿದೆ. ಅಮಾವಾಸ್ಯೆಯ ಮುನ್ನದಿನ ಕಾರು,ಬೈಕ್ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪ್ರತಿ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಅಥವಾ ಮುನ್ನ ದಿನ ಅಪಘಾತಗಳು ನಡೆಯುವುದು ರೂಢಿಯಾಗುತ್ತಿದೆ.-----------------
28ಸಿಎಚ್‌ಎನ್64, 62,63ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ಬ್ರಿಜಾ ಕಾರು ಎರಡು ಬೈಕ್ ನಡುವೆ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೆ ಸಾವನ್ಪಪ್ಪಿರುವುದು.