ಪರಿಸರ ಬಗ್ಗೆ ಕಾಳಜಿ ವಹಿಸಿ: ಬಡಿಗೇರ್

| Published : Jun 06 2024, 12:30 AM IST

ಸಾರಾಂಶ

ಕೊಡೇಕಲ್ ಸಮೀಪದ ನಾರಾಯಣಪುರದಲ್ಲಿ ಹಮ್ಮಿಕೊಂಡಿದ್ದ ನಲಿ- ಕಲಿ ಕಾರ್ಯಾಗಾರ ವೇಳೆ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು.

ಕನ್ನಡಪ್ರಭ ವಾರ್ತೆ ಕೊಡೇಕಲ್

ಸಮೀಪದ ನಾರಾಯಣಪುರದಲ್ಲಿ ಹಮ್ಮಿಕೊಂಡಿದ್ದ ನಲಿ- ಕಲಿ ಕಾರ್ಯಾಗಾರ ವೇಳೆ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡಲಾಯಿತು.

ಈ ವೇಳೆ ನಾರಾಯಣಪುರದ ಶಿಕ್ಷಣ ಇಲಾಖೆ ಅಧಿಕಾರಿ ಮೌನೇಶ ಬಡಿಗೇರ್ ಮಾತನಾಡಿ, ಸ್ವ-ಇಚ್ಛೆಯಿಂದ ರಸ್ತೆ ಬದಿ, ಖಾಲಿ ಇದ್ದ ಜಾಗ ಹಾಗೂ ಮನೆ ಅಂಗಳದಲ್ಲಿ ಸಸಿ ನೆಟ್ಟು ಪೋಷಿಸಿದಾಗ ಬರುಡು ಭೂಮಿ ಸಹ ಹಸಿರಾಗಬಹುದು. ನಮ್ಮ ಸುತ್ತಮುತ್ತ ಮರ-ಗಿಡ ನೆಡುವುದರಿಂದ ನಮಗೆ ಉತ್ತಮ ಗಾಳಿ ಜೊತೆಗೆ ಆರೋಗ್ಯಕರ ವಾತಾವರಣ ಸೃಷ್ಟಿಯಾಗಲಿದ್ದು, ಪ್ರತಿಯೊಬ್ಬರು ಪರಿಸರದ ಕಾಳಜಿ ಜೊತೆ ಪರಿಸರ ಸ್ವಚ್ಛಂದವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ನಾರಾಯಣಪುರ ಕ್ಯಾಂಪ್ ಮಾದರಿ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳಾದ ಬಸಮ್ಮ ಬಿರಾದಾರ್ ಮಾತನಾಡಿ, ಪರಿಸರ ಕಾಳಜಿ ಇದ್ದರೆ ಮಾತ್ರ ನಮ್ಮ ಪರಿಸರ ವನದಿಂದ ಕಾಣಬಹುದು. ಮನೆಗೊಂದು ಮರ ಇದ್ದರೆ ಊರಿಗೊಂದು ವನ ನಿರ್ಮಾಣ ಮಾಡಬಹುದು ಎಂದರು.

ನಾರಾಯಣಪುರ ಕ್ಲಸ್ಟರ್ ಹಾಗೂ ಮಾರನಾಳ ಕ್ಲಸ್ಟರ್‌ನ ನಲಿ ಕಲಿ ಶಿಕ್ಷಕರು ಭಾಗವಹಿಸಿದ್ದರು.