ಸಾರಾಂಶ
ಮಂಡ್ಯ : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗಿರೀಶ್ ಮಟ್ಟೆಣ್ಣವರ್, ಮಹೇಶ್‌ಶೆಟ್ಟಿ ತಿಮರೋಡಿ ಹಾಗೂ ಸಮೀರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಗಂಗಾಧರಸ್ವಾಮಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿದ್ದು, ತನಿಖೆ ನಡೆಸಿ ಎನ್ನುವ ಅನಾಮಿಕನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆತನ ಹೇಳಿಕೆ ಆಧರಿಸಿ ಎಸ್‌ಐಟಿ ಹತ್ತಾರು ಕಡೆ ಉತ್ಝನನ ನಡೆಸಿದ್ದು, ಆರೋಪದಲ್ಲಿ ಯಾವುದೇ ಹುರುಳು ಕಾಣುತ್ತಿಲ್ಲ. ಆತನ ಹಿಂದಿರುವ ಕಾಣದ ಕೈಗಳ ಜೊತೆಗೆ ಗಿರೀಶ್ ಮಟ್ಟೆಣ್ಣವರ್, ತಿಮರೋಡಿ ಹಾಗೂ ಸಮೀರ್ ಅವರನ್ನು ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕುಣಿಗಲ್‌ನಲ್ಲೂ ದೂರು:
ಹಿಂದೂ ಧರ್ಮದ ವಿರುದ್ಧ ಮುಸ್ಲಿಂ ವ್ಯಕ್ತಿಯಾದ ಎಂ.ಡಿ.ಸಮೀರ್ ಯೂಟ್ಯೂಬ್ ಮೂಲಕ ಸುಳ್ಳು ಸುದ್ದಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಹಿಂದೂಪರ ಮುಖಂಡರು ಕುಣಿಗಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಪಿಐ ನವೀನ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.